ಗೋಕಾಕ : ಕುಡಿದ ಮತ್ತಿನಲ್ಲಿದ್ದ ತಮ್ಮನೊಬ್ಬ ತನ್ನ ಅಣ್ಣನನ್ನೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಾಲ್ಮೀಕಿ ನಗರದಲ್ಲಿ ನಡೆದ ಈ ಘಟನೆಯಲ್ಲಿ ಕೊಲೆಯಾದವನನ್ನು ಚೇತನ ರಮೇಶ್ ಪರಮಾರ್ (25) ಎಂದು ಗುರುತಿಸಲಾಗಿದೆ.
ಚೇತನ ರಮೇಶ್ ದೊಡ್ಡಪ್ಪನ ಮಗ ತಿಲಕ ರೂಪೇಶ ಪರಮಾರ್ (19) ಎಂಬಾತನೇ ಕೊಲೆಗಾರ.
ಚೇತನ ಪರಮಾರ್ ಮತ್ತು ತಿಲಕ ಪರಮಾರ್ ವಾಲ್ಮೀಕಿ ನಗರದ ಒಂದೇ ಮನೆಯಲ್ಲಿ ವಾಸವಿದ್ದರು. ಆತ್ಮೀಯತೆಯೂ ಇತ್ತು. ಅದರೆ, ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿತ್ತು. ಅದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಮಾತಿಗೆ ಮಾತು ಜೋರಾಗಿ ತಮ್ಮ ತಿಲಕ್ ಅಣ್ಣ ಚೇತನ್ ಲೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಅಕ್ಕಪಕ್ಕದವರು ಚೇತನ್‌ನನ್ನು ಆಸ್ಪತ್ರೆಗೆ ಸೇರಿಸಿದರೂ ಅವನು ಬದುಕುಳಿಯಲಿಲ್ಲ. ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
CKNEWSKANNADA / BRASTACHARDARSHAN CK NEWS KANNADA