ಗೋಕಾಕ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತ್ರತ್ವದಲ್ಲಿ ನಡೆದ ಜಿಎಸ್‍ಟಿ ಸಭೆಯಲ್ಲಿ ಆಹಾರ ಪದಾರ್ಥಗಳ ಮೇಲೆ ಶೇ 5ರಷ್ಟು ತೆರಿಗೆಯನ್ನು ಆಕರಣೆ ಮಾಡಬೇಕೆಂದು ಜಿಎಸ್‍ಟಿ ಸಭೆಯಲ್ಲಿ ನಿರ್ಣಸಿರುವುದನ್ನು ಖಂಡಿಸಿ ಇಲ್ಲಿಯ ದಿ. ಮರ್ಚಂಟ್ಸ ಅಸೋಸಿಯೇಶನ್ ಹಾಗೂ ಕಿರಾಣಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ತಹಶೀಲದಾರ ಅವರಿಗೆ ಮನವಿ ಸಲ್ಲಿಸಿದರು.
ಶನಿವಾರದಂದು ನಗರದ ಮಿನಿ ವಿಧಾನದ ಸೌಧದ ಆವರಣದಲ್ಲಿ ಸೇರಿದ ವ್ಯಾಪಾರಸ್ಥರು, ಪ್ರತಿಭಟನೆ ನಡೆಸಿ ನಂತರ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.
ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ತೆರಿಗೆಯನ್ನು ಆಕರಣೆ ಮಾಡುವುದರಿಂದ ಜನಸಾಮಾನ್ಯರ ಮೇಲೆ ಹೊರೆ ಬಿಳಲಿದ್ದು, ಜನರಿಗೆ ತೊಂದರೆಯಾಗುತ್ತದೆ. ಅಲ್ಲದೇ ಇದನ್ನೇ ನಂಬಿರುವ ವ್ಯಾಪಾರಸ್ಥರಿಗೂ ಕೂಡಾ ನಷ್ಟ ಉಂಟಾಗಲಿದೆ. ಆದ್ದರಿಂದ ಜಿಎಸ್‍ಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಕೈಬಿಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮೋದ ಅಂಗಡಿ, ಮಾಯಪ್ಪ ತಹಶೀಲದಾರ, ಅಜೀತ ಕಿತ್ತೂರ, ವೀರಪ್ಪ ಜಕಾತಿ, ರಾಮಸಿದ್ದ ಹೆಜ್ಜೆಗಾರ, ಕಿರಣ ಶಾಂತಿಲಾಲ, ಅಂಕುಶ ಗಾಡವಿ, ಮಹೇಶ ಪಾಟೀಲ, ಮುರಳಿಧರ ಮನ್ನಿಕೇರಿ, ಎ.ಕೆ.ಕೊಟ್ರಶೆಟ್ಟಿ, ಕುಮಾರ ಪಾವಟೆ,ನವಿನ ಕುಮಾರಮಠ ಸೇರಿದಂತೆ ಅನೇಕ ವ್ಯಾಪಾರಸ್ಥರು ಇದ್ದರು