Breaking News

ದಿವ್ಯಕಾಶಿಯನ್ನು ಪ್ರಧಾನಿ ಮೋದಿ ಭವ್ಯಕಾಶಿಯನ್ನಾಗಿಸುತ್ತಿದ್ದಾರೆ-ಮುರುಘರಾಜೇಂದ್ರ ಶ್ರೀಗಳು!


ಗೋಕಾಕ: ಭಾರತ ದೇಶ ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದ್ದು, ಭಾರತದ ಶ್ರೇಷ್ಠ ಪ್ರಾಚೀನ ಸಂಸ್ಕೃತಿಯನ್ನು ಮರು ಸ್ಥಾಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಕಾಶಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ದೇಶದ ಶ್ರೇಷ್ಠ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಹೇಳಿದರು.

ಅವರು ಇಲ್ಲಿಯ ಶೂನ್ಯ ಸಂಪಾದನ ಮಠದಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲಗಳ ಆಶ್ರಯದಲ್ಲಿ ಜರುಗಿದ ದಿವ್ಯ ಕಾಶಿ ಭವ್ಯ ಕಾಶಿ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು.

ಮಹ್ಮದ ಘೋರಿ ಹಾಗೂ ಮಹ್ಮದ ಘಜನಿಯಂತಹವರು ನಮ್ಮ ದೇಶದ ಮೇಲೆ ಸತತವಾಗಿ ದಾಳಿ ಮಾಡಿ ನಮ್ಮ ದೇಶದ ಸಂಪತ್ತು ಕೊಳ್ಳೆ ಹೊಡೆದು, ಪುರಾತನ ದೇವಾಲಯಗಳ ನಾಶ ಮಾಡಿದರು. ಶ್ರೀ ರಾಮ ಮಂದಿರದ ಗೋಪುರ ತೆಗೆದು ತಮ್ಮ ಇಸ್ಲಾಂ ಗೋಪುರ ಹಾಕಿ ಬಾಬ್ರಿ ಮಸೀದಿ ಸ್ಥಾಪಿಸಿದರು ಅದರೆ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪಿಸಿ ದೇಶವಾಸಿಗಳ ಹೃದಯ ಗೆದ್ದಿದ್ದಾರೆ ಎಂದರು.

ಭಾರತದಲ್ಲಿ ವಾಸಿಸುವ ಮುಸ್ಲಿಮರು ಮತಾಂತರವಾದ ಹಿಂದುಗಳು. ಘೋರಿ, ಘಜನಿ, ಬಾಬರ ಸೇರಿದಂತೆ ಅನೇಕರು ನಮ್ಮ ದೇಶದ ಮೇಲೆ ದಂಡಯಾತ್ರೆ ನಡೆಸಿ, ಇಲ್ಲಿಯ ಬಹುಸಂಖ್ಯಾತ ಹಿಂದುಗಳನ್ನು ಮತಾಂತರ ಮಾಡಿದರು. ಧ್ವಂಸಗೊAಡ ಬಾಬ್ರಿ ಮಸೀದಿಯಲ್ಲಿ ನರೇಂದ್ರ ಮೋದಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಕಾಶಿಯನ್ನು ದಿವ್ಯ ಹಾಗೂ ಭವ್ಯ ಕಾಶಿ ಮಾಡಲು ಹೋರಟಿರುವದು ಸಂತಸದ ಸಂಗತಿ ದೇಶ ಅಭಿವೃದ್ಧಿ ಹೊಂದುತ್ತಿದೆ ಅಂದರೆ ಅದರಲ್ಲಿ ನರೇಂದ್ರ ಮೊದಿಯವರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಕಾಶಿಯಲ್ಲಿ ನಡೆಯುತ್ತಿದ್ದ ದಿವ್ಯಕಾಶಿ ಭವ್ಯಕಾಶಿ ಕಾರ್ಯಕ್ರಮವನ್ನು ಪ್ರಾಜೆಕ್ಟರ್ ಮೂಲಕ ನೇರಪ್ರಸಾರ ವಿಕ್ಷಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಾನಂದ ಶ್ರೀಗಳು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಇದ್ದರು.

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ