ಬೆಳಗಾವಿ ನಗರದಲ್ಲಿ ಇಂದು 39 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದ ಎಸ್‌ಆರ್‌ಪಿಸಿ / ಐಆರ್‌ಬಿ / ಕೆಎಸ್‌ಆರ್‌ಪಿ ಪುರುಷ & ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯ ಸಿ.ಇ.ಟಿ ಲಿಖಿತ ಪರೀಕ್ಷೆಯಲ್ಲಿ ಒಟ್ಟು 1921 ಅಭ್ಯರ್ಥಿಗಳ ಪೈಕಿ 8461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1 ) ಜಿಐಟಿ ಕಾಲೇಜ , ಉದ್ಯಮಬಾಗ 2 ) ಲವ್‌ಡೇಲ್ ಸೆಂಟ್ರಲ್ ಸ್ಕೂಲ , ಮಾಳಮಾರುತಿ , 3 ) ಕೆಎಲ್‌ಎಸ್ ಸಂಸ್ಥೆ . ಇಂಗ್ಲೀಷ ಮಿಡಿಯಮ್ ಪ್ರೀ ಪ್ರೈಮರಿ , ಪೈಮರಿ ಮತ್ತು ಹೈಸ್ಕೂಲ ಕೆಎಲ್‌ಎಸ್ ಕ್ಯಾಂಪಸ್ ಟಿಳಕವಾಡಿ ಮತ್ತು 4 ) ಸರ್ಕಾರಿ ಚಿಂತಾಮನರಾವ್ ಪದವಿ ಪೂರ್ವ ಮಹಾವಿದ್ಯಾಲಯ , ಶಹಾಪೂರ ಇಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳಾದ
೧.ಸುರೇಶ ಲಕ್ಷ್ಮಣ್ ಕಡಬಿ, 25 ವರ್ಷ ಕುರುಬರ ಸಾ: ಬೆಣಚಿನಮರಡಿ ತಾಲೂಕು ಗೋಕಾಕ್
೨. ಮೆಹಬೂಬ ಬಾಬಾಸಾಬ್ ಅಕ್ಕವಾಟ :23 ವಷ೯
ವಿಳಾಸ: ಉದಗಟ್ಟಿ ತಾ: ಗೋಕಾಕ
೩.ಆನಂದ್ ಹನಮಂತ ಒಡೆಯರ್ 23 ವಷ೯ ಉದಗಟ್ಟಿ , ಗೋಕಾಕ್
೪.ಭೀಮಶಿ ಮಹದೇವ್ ಹುಲ್ಲಳ್ಳಿ (24) ಹಡಗಿನ ತಾ ಗೋಕಾಕ
ಈ ನಾಲ್ವರು ಪರೀಕ್ಷೆ ಬರೆಯುತ್ತಿರುವ ಬಗ್ಗೆ ಹಾಗೂ ನಕಲಿ ಸಹಿ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ನಾಲ್ಕು ಜನ ಆರೋಪಿ ಅಭ್ಯರ್ಥಿಗಳ ವಿರುದ್ಧ ಉದ್ಯಮಬಾಗ, ಮಾಳಮಾರುತಿ ಮತ್ತು ಶಹಾಪೂರ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಡಿಸಿಪಿ ವಿಕ್ರಂ ಆಮ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ