ಘಟಪ್ರಭಾ : ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಬಂಗಾರದ ಆಭರಣ ಸೇರಿದಂತೆ ನಗದು ಕಳ್ಳತನ ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಕಳ್ಳತನಗಳು ಕೆಲವು ತಿಂಗಳ ಹಿಂದೆ ಸಾಕಷ್ಟು ಕಳ್ಳತನ ಪ್ರಕರಣಗಳು ಕೇಳಿಬರುತ್ತಿದ್ದವು, ಈಗ ಮತ್ತೆ ಖದೀಮರು ತಮ್ಮ ಕೈಚಳಕ ಆರಂಭಿಸಿದ್ದಾರೆ.
ನಿನ್ನೆ ರಾತ್ರಿ ಘಟಪ್ರಭಾ ಸೇರಿದಂತೆ ಶಿಂಧಿಕುರಭೇಟ, ಅರಭಾವಿ, ಸಂಗನಕೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಕಳ್ಳತನವಾಗಿವೆ.
ಘಟಪ್ರಭಾ ಪಟ್ಟಣದ ಮಲ್ಲಿಕಾರ್ಜುನ ನಗರದ ಬಾರಾ ಕೂಟ್ ಎಂಬುವಲ್ಲಿ ಕಸ್ತೂರಿ ಬಾಳಪ್ಪಾ ಕೊಳವಿ ಎಂಬುವರ ಮನೆಯಲ್ಲಿದ್ದ 4 ತೊಳೆ ಬಂಗಾರ, 10 ತೊಳೆ ಬೆಳ್ಳಿ, 10 ಸಾವಿರ ನಗದು ಹಾಗೂ
ಅರಭಾವಿ ಗ್ರಾಮದ ಹೂಗಾರ ಎಂಬುವರ ಮನೆಯಲ್ಲಿ 2 ತೊಳೆ ಬಂಗಾರ , ಬೆಳ್ಳಿ , 20 ಸಾವಿರ ಹಣ ಸೇರಿದಂತೆ ಶಿಂಧಿಕುರಭೇಟ, ಸಂಗನಕೇರಿಯಲ್ಲಿ ಸಹಿತ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ನಾಲ್ಕೈದು ತಿಂಗಳ ಹಿಂದೆ ಕಳ್ಳರ ಹಾವಳಿ ಹೆಚ್ಚಾಗಿತ್ತು, ಈಗ ಮತ್ತೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.
*ಬೀಗ ಹಾಕಿದ ಮನೆಗಳೇ ಈ ಖದೀಮರ ಟಾರ್ಗೆಟ್*
ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿಕೊಂಡು, ಹೊಂಚು ಹಾಕಿ ರಾತ್ರಿ ಮನೆಗಳಿಗೆ ನುಗ್ಗಿ ಚಿನ್ನಾಭರಣ, ಹಣವನ್ನು ದೋಚಿಕೊಂಡು ಪರಾರಿಯಾಗುತ್ತಾರೆ. ಹೀಗೆ ಮನೆಗಳ್ಳತನಗಳು ಹೆಚ್ಚಾಗುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಈ ಪ್ರಕರಣವು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಪೋಲಿಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಕಾಯ್ದು ನೋಡಬೇಕಾಗಿದೆ….