ಘಟಪ್ರಭಾ: ರಾಜ್ಯದಲ್ಲಿ ಒಮಿಕ್ರಾನ್ ಹಬ್ಬುವ ಭೀತಿಯಿಂದ ಸರಕಾರ ಮುಂಜಾಗೃತಿಯಿಂದ ನೈಟ್ ಕಫ್ರ್ಯೂದಂಥ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೆ ಇತ್ತ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಜಾಥಾ ಹೆಸರಿನಲ್ಲಿ ಆಯೋಜಕರು ನೂರಾರು ಮಕ್ಕಳನ್ನು ಒಂದೆಡೆ ಸೇರಿಸಿ ಯಡವಟ್ಟು ಮಾಡಿದ್ದಾರೆ.
ರಾಜ್ಯಾದ್ಯಂತ ಒಮಿಕ್ರಾನ್ ಎಲ್ಲಂದರಲ್ಲಿ ತನ್ನ ಕದಂಬಬಾಹುಗಳನ್ನು ಚಾಚುತ್ತಿದೆ. ಇಂದಥ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಗೆ ಸರಕಾರ ಇನ್ನಿಲ್ಲದ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಆದರೆ ಇತ್ತ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ ಮಕ್ಕಳನ್ನು ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೇ ಆಯೋಜಕರು ಒಂದೆಡೆ ಸೇರಿಸಿ ಯಡವಟ್ಟು ಮಾಡಿದ್ದಾರೆ. ಡ್ರಕ್ಸ್ ಜಾಗೃತಿಯ ಹೆಸರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರನ್ನು ಸೇರಿಸಿದ ಆಯೋಜಕರು ಸಾರ್ವಜನಿಕರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ.
ಡ್ರಗ್ಸ್ ಹೆಸರೇ ಕೇಳದ ಪಟ್ಟಣದಲ್ಲಿ ಡ್ರಗ್ಸ್ ಹೆಸರಿನಲ್ಲಿ ಶಾಲಾ ಕಾಲೇಜುಗಳ ಮಕ್ಕಳನ್ನು ಸೇರಿಸಿರುವ ಆಯೋಜಕರು ಬೃಹತ್ ಜಾಥಾ ನಡೆಸಿದ ಮುಖಂಡರು ಮಹಾ ಯಡವಟ್ಟು ಮಾಡಿದ್ದಾರೆ.
ಇನ್ನು ಡ್ರಕ್ಸ್ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಸ್ಕ ಹಾಕಿಕೊಳ್ಳದೆ ಕಾಲೇಜು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳಿಗೆ ಒಮಿಕ್ರಾನ ಬಂದರೆ ಯಾರು ಹೊಣೆಗಾರರು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವೇಳೆ ಸುಮಾರು 3 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಲಾಯಿತು.
ಇದನ್ನು ನೋಡಿಕೊಂಡು ಮೂಕ ಪ್ರೇಕ್ಷಕರಂತೆ ಪೋಲಿಸರು ಮತ್ತು ಪುರಸಭೆ ಆಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತಿದ್ದರು. ಬಡವರು ಒಂದು ನಿಮಿಷ ಸರಕಾರದ ಕೋವಿಡ ನಿಯಮಗಳನ್ನು ಪಾಲನೆ ಮಾಡದೆ ಇದ್ದಲ್ಲಿ ದಂಡ ಹಾಕುವ ಅಧಿಕಾರಗಳು, ಇನ್ನು ಇದನ್ನು ಪರಿಶೀಲಿಸುತ್ತಿರುವ ಬುದ್ಧಿಜೀವಿಗಳು ಬಡವರಿಗೊಂದು ನ್ಯಾಯ, ಇವರಿಗೊಂದು ನ್ಯಾಯಾನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಗಾಂಜಾ ಡ್ರಗ್ಸ್ ಹೆಸರೇ ಗೊತ್ತಿಲ್ಲದ ವಿದ್ಯಾರ್ಥಿಗಳನ್ನ ಜಾಥಾಗೆ ಉಪಯೋಗಿಸಿಕೊಂಡ ಆಯೋಜಕರ ವಿರುದ್ಧ ಸಾರ್ವಜನಿಕರು ಹಾಗೂ ಬುದ್ಧಿಜೀವಿಗಳು ಹಿಡಿಶಾಪ ಹಾಕುತ್ತಿದ್ದಾರೆ.ಮುಂದೆ ಪುರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.