ಘಟಪ್ರಭಾ :ನಾಡ ದ್ರೋಹಿ ಎಂ.ಇ.ಎಸ್ ಹಾಗೂ ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇದಿಸುವಂತೆ ಮತ್ತು ಕೊಲ್ಹಾಪುರದಲ್ಲಿ ಕನ್ನಡ ದ್ವಜ ಸುಟ್ಟಂತಹ ಹಾಗೂ ಜಗದ್ಗುರು ಶ್ರೀ ಬಸವೇಶ್ವರ,ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿ ಅವಮಾನ ಮಾಡಿರುವ ನಾಡ ದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮೃತ್ಯುಂಜಯ ವೃತ್ತದಲ್ಲಿ ಸಂಕೇಶ್ವರ ಹಾಗೂ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಟೈರಗೆ ಬೆಂಕಿ ಹಚ್ಚಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ಠಾಕ್ರೆ ಭಾವ ಚಿತ್ರವನ್ನು ದಹನ ಮಾಡಿ ನಾಡ ದ್ರೋಹಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಗುಬ್ಬಲ ಗುಡ್ಡ ಮಠದ ಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು, ಶ್ರೀ ವಿರೂಪಾಕ್ಷ ದೇವರು ಹೊಸಮಠ ಘಟಪ್ರಭಾ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ, ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಗೋಕಾಕ ತಾಲೂಕಾಧ್ಯಕ್ಷ ಸಂತೋಷ ಕಂಡ್ರಿ,ಮುಖಂಡರಾದ ಡಿ.ಎಮ್,ದಳವಾಯಿ,ಶಿವಾನಂದ ಕಾನೋಜಿ,ಕರ್ನಾಟಕ ವಿಶ್ವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಅಯೂಬ ಪೀರಜಾದೆ,ಕನ್ನಡ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಮಾರುತಿ ಚೌಕಾಶಿ,ಸುರೇಶ ಚಿಗಡ್ಡೊಳಿ, ನಾರಾಯನ ಜಡಕೀನ,ಬಸವರಾಜ ಹುಬ್ಬಳ್ಳಿ, ಶಶಿ ಚೌಕಶಿ,ರಾಜೇಖಾನ ಪಠಾಣ,ಮಲ್ಲಿಕಾರ್ಜುನ ತುಕ್ಕಾನಟ್ಟಿ,ಮಾರುತಿ ಹುಕ್ಕೇರಿ, ಅಶೋಕ ಕಮತ, ರಾಘವೇಂದ್ರ ನಾಯಿಕ,ಮಂಜು ಪಾಟೀಲ,ತಮ್ಮಣ್ಣ ಅರಬಾಂವಿ,ಭೀಮಶಿ ಚೌಕಶಿ,ಭೀಮಶಿ ಬೆಳಗಲಿ,ಸಂಜು ಬಂಡಿವಡ್ಡರ, ಇಮ್ರಾನ ಜಕಾತಿ,ಸುನೀಲ ಗೋಣಿ,ಪ್ರಜ್ವಲ ಕನ್ನಪ್ಪಗೋಳ ಸೇರಿದಂತೆ ನೂರಾರು ಕಾರ್ಯಕರ್ತರು
ಉಪಸ್ಥಿತರಿದ್ದರು.