ಘಟಪ್ರಭಾ: ರೈಲ್ವೆ ಹಳಿ ದಾಟುವಾಗ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಿನ್ನೆ ಸಾಯಂಕಾಲ ನಡೆದಿದೆ.
ಚನ್ನಪ್ಪ ಅವಪ್ಪ ನಿಡಸೋಶಿ(35) ಮೃತ ವ್ಯಕ್ತಿ. ಚನ್ನಪ್ಪನ ಕಿವಿ ಮಂದಗತ್ತಿ ಇರುವುದರಿಂದ , ಅವಘಡ ಸಂಭವಿಸಿದೆ ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ.
ಮಾರ್ಕೇಟ್ ಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿಬಂದಿದ್ದರು. ಮಾರ್ಕೇಟ್ ನಲ್ಲಿ ಖದೀರಿ ಮುಗಿಸಿ ವಾಪಸ್ ಮನೆಗೆ ತೆರಳುವ ಸನ್ನಿವೇಶಲ್ಲಿ ಘಟಪ್ರಭಾ ನಿಲ್ದಾಣದಿಂದ ಮಿರಜ್ ಕಡೆಗೆ ಸಂಚರಿಸುತ್ತಿರುವ ಎಕ್ಸ್’ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ವ್ಯಕ್ತಿ ತಲೆಗೆ ಬಲವಾದ ಪೆಟ್ಟು ಬಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ರೈಲ್ವೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.”
CKNEWSKANNADA / BRASTACHARDARSHAN CK NEWS KANNADA