ಘಟಪ್ರಭಾ: ನಕಲಿ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ , ಮೂವರು ಆರೋಪಿಗಳನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧಿಸಿದ್ದಾರೆ . ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಕಿರಣ್‌ಕುಮಾರ ರಂಗರೇಜ್ , ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಸಾಗರ ನಿರಂಜನ್ , ಉಡುಪಿ ಜಿಲ್ಲೆಯ ಕೊಲ್ಲೂರು ಮೂಲದ ಶಶಿಧರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ .
ಬಾರ್‌ನಲ್ಲಿ ನಕಲಿ ನೋಟು ಚಲಾವಣೆಗೆ ಮುಂದಾಗಿದ್ದ ಆರೋಪಿತರು , ಬಾರ್‌ಗಳಲ್ಲಿ ಡಲ್ ಲೈಟ್ ಇರುವ ಕಾರಣಕ್ಕೆ ಸಮಯ ಸಾಧಿಸಲು ಆರೋಪಿತರ ಯತ್ನಿಸಿದ್ದರು.ನಕಲಿ ನೋಟು ಎಂದು ಖಚಿತವಾಗಿದ್ದಂತೆ ಬಾರ್ ಸಿಬ್ಬಂದಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ , 500 ಮುಖಬೆಲೆಯ 473 ನಕಲಿ ನೋಟುಗಳನ್ನು ಪೋಲೀಸರು ಜಪ್ತಿ ಮಾಡಿದ್ದಾರೆ . ಚಿಲ್ಮನ್ ಬ್ಯಾಂಕ್ ಆಫ್ ಇಂಡಿಯಾ ಹೆಸರಲ್ಲಿ ನೋಟುಗಳ ಮುದ್ರಣ ಮಾಡಲಾಗಿತ್ತು.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ .