ಗೋಕಾಕ ತಾಲೂಕಿನ ಇಬ್ಬರು ಬಾಲಕರಿಗೆ ಜೀವನ ರಕ್ಷಾ ಪದಕ ಪುರಸ್ಕೃತ
ದಿನಾಂಕ: 08/05/2018 ರಂದು ಗೋಕಾಕ ತಾಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಇದರಲ್ಲಿ ಆಕಸ್ಮಿಕವಾಗಿ ಬಿದ್ದು ತೇಲಿ ಹೋಗುತ್ತಿದ್ದ ಹುಡುಗನ ಆಕ್ರಂದನ, ಚೀರಾಟ ಕೇಳಿ ಸ್ತಳಕ್ಕೆ ಧಾವಿಸಿ ನೀರಿನ ರಭಸಕ್ಕೆ ಭಯಪಡದೆ ಹಳ್ಳಕ್ಕೆ ಹಾರಿ ನೀರಿನಲ್ಲಿ ಮುಳುಗುತ್ತಿರುವ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ ಧೈರ್ಯ ಸಾಹಸ ಪ್ರದರ್ಶಿಸಿ ಸಮಯಪ್ರಜ್ಞೆ ತೋರಿದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆರವರು ದಿನಾಂಕ 14/11/2018 ರಂದು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿರುತ್ತಾರೆ. ಕೇಂದ್ರ ಗೃಹ ಮಂತ್ರಾಲಯದವರು ಇವರ ಸಾಹಸ ಗುರುತಿಸಿ **ಜೀವನ ರಕ್ಷಾ ಪದಕ , ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ಹಾಗೂ ಪ್ರಮಾಣಪತ್ರ** ನೀಡಿ ಪುರಸ್ಕರಿಸಿರುತ್ತಾರೆ. ಸದರಿ ಯವರನ್ನು ಈ ದಿವಸ ದಿನಾಂಕ 06/11/2020 ರಂದು ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರವರುಗಳು ಪ್ರಶಸ್ತಿ ಪುರಸ್ಕೃತ ಬಾಲಕರಿಗೆ ಸನ್ಮಾನಿಸಿ ಸರಕಾರದಿಂದ ಮಂಜೂರಾದ ಜೀವನ ರಕ್ಷಾ ಪದಕ, ತಲಾ ಒಂದು ಲಕ್ಷ ರೂಪಾಯಿಗಳ ಚೆಕ್ ಹಾಗೂ ಪ್ರಮಾಣ ಪತ್ರ ವಿತರಿಸಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ.
ಕೇಂದ್ರ ಗೃಹ ಮಂತ್ರಾಲಯದಿಂದ ಜೀವನ ರಕ್ಷಾ ಪದಕ ಪುರಸ್ಕೃತ ರ ವಿವರ.
1) ಮಾ. ಸಿದ್ದಪ್ಪ ಕೆಂಪಣ್ಣಾ ಹೊಸಟ್ಟಿ ಸಾ!!ವಡೇರಹಟ್ಟಿ ತಾ. ಗೋಕಾಕ, ಜಿ. ಬೆಳಗಾವಿ.
2) ಮಾ. ಶಿವಾನಂದ ದಶರಥ ಹೊಸಟ್ಟಿ ಸಾ!!ವಡೇರಹಟ್ಟಿ ತಾ. ಗೋಕಾಕ ಜಿ. ಬೆಳಗಾವಿ.