ಗೋಕಾಕ : ಗೋಕಾಕ ಸಾಮಾಜಿಕ ಅರಣ್ಯ ವಲಯದಲ್ಲಿ ನೌಕರರಾಗಿ ಸೇವೆ ಸಲ್ಲಿಸಿದ್ದ ಮಾರುತಿ ಪೂಜೇರಿ ಅವರು ವಯೋನಿವೃತ್ತಿ ಹೊಂದಿದ್ದಾರೆ.
ಕಳೆದ 38 ವರ್ಷಗಳ ಕಾಲ ಅವಧಿಯಲ್ಲಿ ಗೋಕಾಕ ಸಾಮಾಜಿಕ ಅರಣ್ಯ ವಲಯದಲ್ಲಿ ನೌಕರರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ತಾಲೂಕಿನಲ್ಲಿ ಹಸಿರುಕರಣಕ್ಕೆ ಸಾಕಷ್ಟು ದುಡಿದಿದ್ದು ಅವರು ವಯೋನಿವೃತ್ತಿ ಸುಖಕರವಿರಲೆಂದು ಹಿತೈಷಿಗಳು ಆಶಿಸಿ, ಸತ್ಕರಿಸಿ, ಬಿಳ್ಕೊಟ್ಟರು.
ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ಎಸಿಎಫ್ ಮಾರುತಿ ಪಾತ್ರೋಟ್, ಗೋಕಾಕ ಆರ್ ಎಫ್ಓ ಎಸ್ ಎಫ್ ಕಿರಣ ದಾಸರಡ್ಡಿ . ರಾಮದುರ್ಗ ಆರ್ ಎಫ್ಓ ಅರುಣ್ ಅಸ್ತಗಿ. ಬೈಲಹೊಂಗಲ ಆರ್ ಎಫ್ಓ ದೊಡ್ಡ್ ಬಸಣ್ಣವರ್. ಧಾರವಾಡ ಡಿವಾಯ್ ನಕುಲ ಪೂಜೇರಿ. ಕೆ ಎಂ ಪೂಜೇರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.