ಗೋಕಾಕ : ಸತತವಾಗಿ ಹರಿಯುತ್ತಿರುವ ಮಳೆಯಿಂದ ತಾಲೂಕಿನ ಗೋಕಾಕ ಫಾಲ್ಸ್ ರಮಣೀಯವಾಗಿ ಹರಿಯುತ್ತಿದ್ದು, ಜಲಾಶಯಗಳನ್ನು ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.ಬೆಳೆಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಫಾಲ್ಸ್ ಜಲಪಾತ ಜಗತ್ತು ಪ್ರಸಿದ್ಧಿ ಗಿಟ್ಟಿಸಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿವೆ. ಪ್ರವಾಸಿಗರು ತೀರದಲ್ಲಿ ಹೋಗದಿರುವಂತೆ ಗೋಕಾಕ ನಗರ ಪಿಎಸ್ಐ ತೌಸಿಫ್ ಘೋರಿ ಅವರ ನೇತೃತ್ವದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.
ಕಳೆದ ಒಂದು 15 ದಿನಗಳಿಂದ ಸಹ್ಯಾದ್ರಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಜಲಪಾತಗಳು ರಮಣೀಯವಾಗಿ ದುಮುಕುತ್ತಿವೆ.ಇದನ್ನು ನೋಡಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಸಮುದ್ರೋಪಾಯವಾಗಿ ಪ್ರವಾಸಿಗರು ಹರಿದು ಬರುತ್ತಿದ್ದು, ಪ್ರವಾಸಿಗರ ತುಂಟಾಟ ನಿಲ್ಲಿಸಲು ಖಾಕಿ ಪಡೆ ಸರ್ಪಗಾವಲು ಹಾಕಿದ್ದು, ಜಲಪಾತ ದ ಸ್ಥಳದಲ್ಲಿ ಸಾರ್ವಜನೀಕರ ಸುರಕ್ಷತೆಗಾಗಿ ಸೂಚನಾ ಫಲಕವನ್ನು ನಗರ ಪಿಎಸ್ಐ ತೌಸಿಫ್ ಘೋರಿ ಅವರ ನೇತೃತ್ವದಲ್ಲಿ ಅಳವಡಿಸಿದರು.
ರವಿವಾರ ವೀಕೆಂಡ್ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಗೋಕಾಕ್ ಫಾಲ್ಸಗೆ ಪ್ರವಾಸಿಗರು ಆಗಮಿಸಿತ್ತಿದ್ದು .ತುತ್ತ ತುದಿಯಲ್ಲಿ ಯಾರೂ ಬರದಂತೆ ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಬ್ಯಾರಿಕೇಡ್ ಹಾಕಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ ಎಂದು ಗೋಕಾಕ್ ಪಿಎಸ್ಐ ತೌಸಿಫ್ ಘೋರಿ ಹೇಳಿದ್ದಾರೆ.
ಹಾಗೇ ಪ್ರವಾಸಿಗರಿಗೆ ನೀರಿನಲ್ಲಿ ಇಳಿಯದಂತೆ ಮತ್ತು ಇಕ್ಕಟ್ಟಾದ ಬಂಡೆಗಳ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳದಂತೆ ,ಸುರಕ್ಷಿತ ರೀತಿಯಲ್ಲಿ ವರ್ತಿಸುವಂತೆ ತೀಳಿ ಹೇಳಿದರು, ಪ್ರತಿದಿನ ಇಬ್ಬರೂ ಸಿಬ್ಬಂದಿ ಯವರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.