Breaking News

ಕರ್ನಾಟಕ ವಿಧಾನಪರಿಷತ್ತಿನ ಚುನಾವಣೆಗೆ ದಿನಾಂಕ ನಿಗದಿ!


ಬೆಂಗಳೂರು: ದಿನಾಂಕ 05-01-2022ರಂದು ಕೊನೆಗೊಳ್ಳಲಿರುವಂತ ಕರ್ನಾಟಕ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ದಿನಾಂಕ 10-12-2021ರಂದು ಚುನಾವಣೆ ನಿಗದಿ ಪಡಿಸಲಾಗಿದೆ. ದಿನಾಂಕ 14-12-2021ರಂದು ಚುನಾವಣೆಯ ಮತಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲತಾಂಶ ಪ್ರಕಟಗೊಳ್ಳಲಿದೆ.

ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗವು ( Election Commission of India ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 16-11-2021ರಂದು ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ( Legislative Council Election ) ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತದೆ.

ನಾಮಪತ್ರ ಸಲ್ಲಿಸಲು ದಿನಾಂಕ 23-11-2021 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಕಾರ್ಯ ದಿನಾಂಕ 24-11-2021ರಂದು ನಡೆಸಲಾಗುತ್ತದೆ. ನಾಮಪತ್ರವನ್ನು ವಾಪಾಸ್ ಪಡೆಯಲು ದಿನಾಂಕ 26-11-2021 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.

ಇನ್ನೂ ಪರಿಷತ್ 25 ಸ್ಥಾನಗಳಿಗೆ ದಿನಾಂಕ 10-12-2021ರಂದು ಮತದಾನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಈ ಮತದಾನದ ಮತಎಣಿಕ ಕಾರ್ಯ ದಿನಾಂಕ 14-12-2021ರಂದು ನಡೆಯಲಿದ್ದು, ಅಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ಪ್ರಕ್ರಿಯೆಯು ದಿನಾಂಕ 16-12-2021ರಂದು ಕೊನೆಗೊಳ್ಳಲಿರುವುದಾಗಿ ತಿಳಿಸಿದೆ.

ದಿನಾಂಕ 05-01-2022ರಂದು ಅಂತ್ಯಗೊಳ್ಳಲಿರುವಂತ ಪರಿಷತ್ ಸದಸ್ಯರ ಪಟ್ಟಿ

ಬೀದರ್ – ವಿಜಯ್ ಸಿಂಗ್

ಗುಲಬರ್ಗ – ಬಿ.ಜಿ.ಪಾಟೀಲ್

ಬಿಜಾಪುರ – ಎಸ್ ಆರ್ ಪಾಟೀಲ್, ಸುನೀಲ್ ಗೌಡ ಪಾಟೀಲ್

ಬೆಳಗಾವಿ – ಮಹಾಂತೇಶ್ ಕವಟಗಿಮಠ, ವಿವೇಕ್ ರಾವ್ ವಸಂತ್ ರಾವ್ ಪಾಟೀಲ್

ಉತ್ತರ ಕನ್ನಡ – ಗೊಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್

ಧಾರವಾಡ – ಪ್ರದೀಪ್ ಶೆಟ್ಟರ್, ಮಾನೆ ಶ್ರೀನಿವಾಸ್

ರಾಯಚೂರು – ಬಸವರಾಜ್ ಪಾಟೀಲ್ ಇಟಗಿ

ಬಳ್ಳಾರಿ – ಕೆಸಿ ಕೊಂಡಯ್ಯ

ಚಿತ್ರದುರ್ಗ – ರಘು ಆಚಾರ್

ಶಿವಮೊಗ್ಗ – ಆರ್ ಪ್ರಸನ್ನ ಕುಮಾರ್

ದಕ್ಷಿಣ ಕನ್ನಡ – ಕೆ. ಪ್ರತಾಪ್ ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿ

ಚಿಕ್ಕಮಗಳೂರು – ಪ್ರಾಣೇಶ್ ಎಂ.ಕೆ

ಹಾಸನ – ಎಂ.ಎ.ಗೋಪಾಲಸ್ವಾಮಿ

ತುಮಕೂರು – ಕಾಂತರಾಜ್ ( ಬಿಎಂಎಲ್)

ಮಂಡ್ಯ – ಎನ್ ಅಪ್ಪಾಜಿ ಗೌಡ

ಬೆಂಗಳೂರು – ಎಂ ನಾರಾಯಣಸ್ವಾಮಿ

ಬೆಂಗಳೂರು ಗ್ರಾಮಾಂತರ – ಎಸ್ ರವಿ

ಕೋಲಾರ್ – ಸಿ ಆರ್ ಮೋಹನ್

ಕೊಡಗು – ಸುನೀಲ್ ಸುಬ್ರಹ್ಮಣಿ ಎಂ.ಪಿ.

ಮೈಸೂರು – ಆರ್ ಧರ್ಮಸೇನ, ಎಸ್ ನಾಗರಾಜು ( ಸಂದೇಶ್ ನಾಗರಾಜು )


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ