Breaking News

ಗೋಕಾಕದಲ್ಲಿ ನಗರ ಸಭೆ ಉಪಚುನಾವಣೆ ರಣಕಹಳೆ: ಗೌಡರಿಂದ ಭರ್ಜರಿ ಪ್ರಚಾರ.


ಗೋಕಾಕ: ನಗರ ಸಭೆ ಉಪಚುನಾವಣೆ ಕಾವು ಜೋರಾಗಿದ್ದು, ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಸದ್ಯಸರ ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂ 13ನೇಯ ಉಪಚುನಾವಣೆಯಲ್ಲಿ ಅದೇ ವಾರ್ಡಿನ ಯುವಕ ವಿಷ್ಣು ಗೌಡ ಪಾಟೀಲ್ ಕಣಕ್ಕೆ ಇಳಿದಿದ್ದಾರೆ.

ಇಂದು ವಿಷ್ಣು ಗೌಡ ಪಾಟೀಲ್ ಭರ್ಜರಿ ಪ್ರಚಾರ ಆರಂಭ ಮಾಡಿದ್ದು ಶಿವನ ಗೌಡ ಪಾಟೀಲ್ ಸಾಥ ನೀಡಿದ್ದಾರೆ. ವಾರ್ಡಿನ ಗುರು ಹಿರಿಯರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.

ತದನಂತರ ಮಾತನಾಡಿದ ವಿಷ್ಣು ಗೌಡ ಪಾಟೀಲ್ ವಾರ್ಡ ನಂ 13 ನ ಅಭಿವೃದ್ಧಿಯೆ ನನ್ನ ಗುರಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನನ್ನ ಕೆಲಸ. ಮತದಾರ ಬಾಂಧವರು ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತಂದು ತಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿಕೊಂಡರು. ನಂತರ ನಗರದ ಮತದಾರರು ಅತೀ ವಿಶ್ವಾಸದಿಂದ ಮತ ಹಾಕತ್ತೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ