ಗೋಕಾಕ : ನಗರ ಸಭೆ ಉಪಚುನಾವಣೆ ಪೈಪೋಟಿ ಜೋರಾಗಿದ್ದು ಈ ವಾರ್ಡನಲ್ಲಿ ಮಾಜಿ ನಗರ ಅಧ್ಯಕ್ಷ ಸಿದ್ದಲಿಂಗ ದಳವಾಯಿ ಸುಪುತ್ರ ಸಮಾಜ ಸೇವೆಗಾಗಿ ರಾಜಕೀಯದತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂಬರ 13ನೇಯ ಉಪಚುನಾವಣೆಯಲ್ಲಿ ದಳವಾಯಿ ಕುಟುಂಬದ ಮೂರನೆ ಕುಡಿ ಅಭಿಷೇಕ ಸಿದ್ದಲಿಂಗಪ್ಪ,ದಳವಾಯಿ, ಸಮಾಜ ಸೇವೆಗಾಗಿ ಇವತ್ತು ವಾರ್ಡ ನಂಬರ 13ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ.
ಮೊದಲಿನಿಂದಲೂ ಸಮಾಜ ಸೇವೆಗಾಗಿಯೆ ಪ್ರಸಿದ್ದಿ ಪಡೆದ ದಳವಾಯಿ ಕುಟುಂಬಕ್ಕೆ ರಾಜಕೀಯ ಹೊಸದೇನಲ್ಲಾ, ಮೊದಲು ಅಜ್ಜಿ,ನಂತರ ತಂದೆ ಈಗ ಮಗ ಅಭಿಷೇಕ, ದಳವಾಯಿ ಚಿಕ್ಕನಂದಿನಿಂದಲೂ ತನ್ನ ಅಜ್ಜಿ,ತಂದೆ, ಮಾಡುವ ಸಮಾಜ ಸೇವೆಯನ್ನು ನೋಡಿ ತಾನು ಕೂಡ ಸಮಾಜ ಸೇವೆ ಮಾಡಬೇಕೆಂಬ ಉದ್ದೇಶದಿಂದ ಇವತ್ತು ವಾರ್ಡನಂಬರ 13 ರಲ್ಲಿನ ಮತದಾರರ ಒತ್ತಾಯ ಮೆರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗುರುಹಿರಿಯರ ಆಶಿರ್ವಾದ ಪಡೆದು ತೆರಳಿ ಇವರು ಮತಯಾಚನೆ ಮಾಡುತಿದ್ದಾರೆ.ಶೇಜ ನಂಬರ 1,ಇದ್ದು ಕಪ್ ಬಸಿ ಚಿನ್ಹೆಗೆ ಮತ ನೀಡಲು ವಿನಂತಿಸುತಿದ್ದಾರೆ,
ಸೌಮ್ಯ ಗುಣಹೊಂದಿದ ಅಭಿಷೇಕ ದಳವಾಯಿಯವರು ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿದ್ದರಿಂದ ಮತದಾರರು, ಮನೆಯ ಮಗನಂತಿರುವ ಇವರ ಕಡೆ ಒಲವನ್ನು ತೊರಿ ಇವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ, ವಾರ್ಡಿನಲ್ಲಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಯಾವುದೆ ಸಂಶವಿಲ್ಲವೆಂದು ಮತದಾರರ ಮನದಾಳದ ಮಾತಾಗಿದೆ.