Breaking News

ಜನ – ಜಾನೂವಾರೂಗಳಿಗೆ ಕುಡಿಯಲು ನೀರಿನ ಭವನೆಯನ್ನು ನೀಗಿಸಲು ಕೆರೆಗಳನ್ನು ಮನಃಶ್ವೇತನ: ಕೇಶವ ದೇವಾಂಗ


ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ ( ರಿ ) ಗೋಕಾಕ ತಾಲೂಕು ತಾಲೂಕಿನ ಅಂಕಲಗಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುರಾತಣ ದೇವಸ್ಥಾನವಾದ ಶ್ರೀ ಕೆರೆ ಬಸವೇಶ್ವರ ದೇವಸ್ಥಾನದ ಕೆರೆಯನ್ನು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೂಲಕ “ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಬಸವೇಶ್ವರ ದೇವಸ್ಥಾನ ಕೆರೆಯನ್ನು 389 ನೇ ಮಾದರಿ ಕೆರೆಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಮಗಾರಿಯನ್ನು ರೂ 6.20 ಲಕ್ಷ ಮತ್ತು ಪಟ್ಟಣ ಪಂಚಾಯತಿ ಹಾಗೂ ಊರಿನ ಗ್ರಾಮಸ್ಥರ ಸಹಕಾರದಲ್ಲಿ ರೂ . 4.66 ಲಕ್ಷ ಒಟ್ಟು 10,86 ಲಕ್ಷ ಮೊತ್ತದ ಮಾದರಿ ಕೆರೆ ಕಾಮಗಾರಿಗೆ ಮಂಜುರಾತಿಯಾಗಿರುತ್ತದೆ .

ಈ ಬಗ್ಗೆ ದಿನಾಂಕ : 03.02.2022 ರಂದು ಕೆರೆ ಬಸವೇಶ್ವರ ದೇವಸ್ಥಾನದ ಕೆರೆಯಲ್ಲಿ ಭೂಮಿ ಪೂಜೆಯನ್ನು ನೇರವೆರಿಸಲಾಯಿತು ಈ ಸಂದರ್ಭದಲ್ಲಿ ಬೆಳಗಾವಿ -2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಕೇಶವ ದೇವಾಂಗ ರವರು ಮಾತನಾಡಿ ಕ್ಷೇತ್ರದಿಂದ ಸಮುದಾಯ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತ ಬಂದಿರುತ್ತದೆ ಕ್ಷೇತ್ರದ ಧರ್ಮಾಧಿಕಾರಿಗಳು ಡಾ | ಡಿ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಿಂದ ನಾಡಿನಾದ್ಯಂತ ನೆಲ – ಜಲ ಸಂರಕ್ಷಣೆ ಮಾಡುವ ಕುರಿತು ನಮ್ಮೂರು ನಮ್ಮ ಕೆರೆ ಯೋಜನೆಯ ಅಡಿಯಲ್ಲಿ ರಾಜ್ಯಾದ್ಯಂತ ವಾರ್ಷಿಕವಾಗಿ 389 ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ಅಂತರ್ಜಲ ಮಟ್ಟ ಮತ್ತು ಜನ – ಜಾನೂವಾರೂಗಳಿಗೆ ಕುಡಿಯಲು ನೀರಿನ ಭವನೆಯನ್ನು ನೀಗಿಸಲು ಕೆರೆಗಳನ್ನು ಮನಃಶ್ವೇತನ ಮಾಡಲಾಗುತ್ತಿದೆ ಈ ಸಂದರ್ಭದಲ್ಲಿ ಕೆರೆ ಸಮಿತಿಯ ಅಧ್ಯಕ್ಷರು ಶ್ರೀ ಶಿವಪ್ಪ ಮಲಕನ್ನವರ ಮಾತನಾಡಿ ಧರ್ಮಸ್ಥಳ ಯೋಜನೆಯಿಂದ ನಮ್ಮೂರಿನ ಕೆರೆಯನ್ನು ಮಾದರಿ ಕೆರೆಯನ್ನಾಗಿ ಮಾಡುತ್ತಿರುವುದರಿಂದ ಹಾಗೂ ಜೀರ್ಣೋದ್ಧಾರ ಮಾಡುತ್ತಿರುವುದರಿಂದ ಸೂತ್ತಮೂತ್ತಲಿನ ಗ್ರಾಮದ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕೃಷಿಕರಿಗೆ ಅಂತರ್ಜಲ ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿರುತ್ತೇವೆ . ಹಾಗೂ ಇದು ನಮ್ಮೂರಿನ ಹೆಮ್ಮೆಯ ಕೆರೆ ಆಗಿರುತ್ತದೆ .

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ -2 ಜಿಲ್ಲಾ ನಿರ್ದೇಶಕರು ಶ್ರೀಯುತ ಕೇಶವ ದೇವಾಂಗ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯವರು ಶ್ರೀಯುತ ಬಸವರಾಜ್ ಮನಗೂಳಿ ತಾಲೂಕ ಯೋಜನಾಧಿಕಾರಿಯವರ ಶ್ರೀಯುತ ಧರ್ಮೇಂದ್ರ ಶ್ರೀಯುತ ಲಿಂಗರಾಜ ಕರ ಅಭಿಯಂತರರು , ಮತ್ತು ಕರ ಸಮಿತಿಯ ಅಧ್ಯಕ್ಷರು ಶ್ರೀಯುತ ಶಿವಪ್ಪ ಮಲಕಣ್ಣವರ್ , ಊರಿನ ಪ್ರಮುಖ ಗಣ್ಯರಾದ ಶ್ರೀಯುತ ಬಿ . ಬಿ . ನಿರ್ವಹಣೆ , ಶ್ರೀಯುತ ಬಿ.ಎ.ಪಟ್ಟಣಶೆಟ್ಟಿ , ಶ್ರೀಯುತ ಶಂಕರ್ ಬುನಣ್ಣವರ , ಶ್ರೀಯುತ ಮಾಯಪ್ಪ ಸ್ವಾಮಿಗಳ ಸುನಿಲ್ ಪಾಚಾಪುರಿ , ಈರಣ್ಣ ಮದುಪಾಲ ಶಂಕರ್‌ ಗುಡಿಗೇರಿ ಶಿವು ಅಂಕಲಿಮಠ ಅಡಿವೆಪ್ಪ ಅಳಗಲಿ ಶ್ರೀಯುತ ಶ್ರೀಶೈಲ್ ಗೋವಿಂಕೊಪ್ಪ ಸದಸ್ಯರುಗಳು ಗ್ರಾಮಸ್ಥರು ಹಾಗೂ ಕೃಷಿ ಮೇಲ್ವಿಚಾರಕರು ಸುರೇಶ ಮೇಲ್ವಿಚಾರಕರು ಹರೀಶ್ , ಸೇವಾ ಪ್ರತಿನಿಧಿಗಳು ವಿಪತ್ತು ನಿರ್ವಹಣೆ ಸದಸ್ಯರು ಯೋಜನೆಯ ಪಾಲುದಾರಬಂದುಗಳ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು ….


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ