ಬೆಂಗಳೂರು: ಚಿತ್ರನಟಿ ಸಂಜನಾ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕೇಂದ್ರ ಕಚೇರಿಗೆ ಕರೆತಂದಿದ್ದಾರೆ.
ಇಂದು ಬೆಳಗ್ಗೆ 6.30ಕ್ಕೆ ಸರಿಯಾಗಿ ಇಂದಿರಾನಗರದಲ್ಲಿರುವ ಸಂಜನಾ ಅವರ ನಿವಾಸದ ಮೇಲೆ 10ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಇಡೀ ಮನೆಯನ್ನು ಜಾಲಾಡಿ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ಜಾಲದ ಆರೋಪದಡಿ ಸಿಸಿಬಿ ಪೊಲೀಸರ ಬಂಧನಕ್ಕೊಳಗಾಗಿರುವ ಸಂಜನಾ ಆಪ್ತ ರಾಹುಲ್ ಹಾಗೂ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಸ್ನೇಹಿತೆ ಹಾಗೂ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿಶೆಟ್ಟಿ ನೀಡಿರುವ ಹೇಳಿಕೆ ಆಧಾರದ ಮೇಲೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಬೆಳ್ಳಂಬೆಳಗ್ಗೆ ಸಂಜನಾ ನಿವಾಸದ ಮೇಲೆ ದಾಳಿ ನಡೆಸಲಾಗಿದೆ
ಇವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿದ್ದ ಪೃಥ್ವಿಶೆಟ್ಟಿ ಹಾಗೂ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿರುವುದರ ಜತೆಗೆ ನಗರದಲ್ಲಿ ಪ್ರತಿಷ್ಠಿತ ಹೊಟೇಲ್ ಹೊಂದಿರುವ ರಾಹುಲ್ ಅವರು ಸಂಜನಾ ಆಪ್ತರಾಗಿದ್ದಾರೆ.
ಪೃಥ್ವಿಶೆಟ್ಟಿ, ರಾಹುಲ್ ಹಾಗೂ ಇನ್ನಿತರ ಡ್ರಗ್ಸ್ ಪೆಡ್ಲರ್ಗಳು ನಡೆಸುತ್ತಿದ್ದ ಪಾರ್ಟಿಗಳಲ್ಲಿ ಸಂಜನಾ ಗೆಸ್ಟ್ ಆಗಿ ಪಾಲ್ಗೊಳ್ಳುತ್ತಿದ್ದರು ಎನ್ನಲಾಗಿದೆ.ಕಾಟನ್ಪೇಟೆಯ ಡ್ರಗ್ಸ್ ಸರಬರಾಜು ಪ್ರಕರಣದಲ್ಲಿ 11ನೆ ಆರೋಪಿಯಾಗಿರುವ ರಾಹುಲ್ ಅವರು ಸಂಜನಾ ಜತೆ ಸಲುಗೆಯಿಂದಿದ್ದರು.
ಡ್ರಗ್ಸ್ ಸರಬರಾಜು ಆರೋಪದಡಿ ಸಿಸಿಬಿ ಪೊಲೀಸರು ಬಂಸಿರುವ ಪೃಥ್ವಿಶೆಟ್ಟಿ ಮತ್ತು ರಾಹುಲ್ ಅವರ ಹೇಳಿಕೆಯನ್ನಾಧರಿಸಿ ಸಂಜನಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕೇಂದ್ರ ಕಚೇರಿಗೆ ಕರೆತರಲಾಗಿದೆ. ವಿಚಾರಣೆ ನಂತರ ಆಕೆಯನ್ನು ವಶಕ್ಕೆ ಪಡೆದುಕೊಳ್ಳಬೇಕೆ ಅಥವಾ ಬಂಸಬೇಕೆ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ.