ನವದೆಹಲಿ : ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಬೆಂಬಲಿತ ರೈತರು ಶುಕ್ರವಾರ ಜಂತರ್ ಮಂತರ್‌ನಲ್ಲಿ ಜಮಾವಣೆಗೊಂಡು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷದ ಆಂದೋಲನದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಆದೇಶದಂತೆ ಬೆಳಗಾವಿ ಜಿಲ್ಲೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮುಖಂಡರಾದ ಕಲ್ಲಪ್ಪಗೌಡ ಲಕ್ಕಾರ, ವಿವೇಕ್ ಜತ್ತಿ, ರಮೇಶ್ ಮೋಕಾಶಿ, ಸುನೀಲ್ ಎತ್ತಿನಮನಿ, ಲಗಮನ ಕಳಸನ್ನವರ, ಅಶೋಕ್ ಹುದ್ದಾರ, ಬಸವರಾಜ ಗುರನ್ನವರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತರಿಗೆ ಸಹಕಾರ ನೀಡುತ್ತಿಲ್ಲ ಮತ್ತು ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಶುಕ್ರವಾರ ಕಾಂಗ್ರೆಸ್‌ನ ರೈತರ ಘಟಕವು ಆರೋಪಿಸಿದೆ. ಕಳೆದ ವರ್ಷ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ರೈತ ವಿರೋಧಿ ಮೋದಿ ಸರ್ಕಾರ ವಿಫಲವಾಗಿದೆ. ಎಂಎಸ್‌ಪಿ ಜಾರಿಗೆ ತರಲು ಅವರಿಗೆ ಕಷ್ಟವಾಗಿದೆ. ‘ಈ ಪ್ರತಿಭಟನೆ ಜಂತರ್ ಮಂತರ್‌ಗೆ ಸೀಮಿತವಾಗಬಾರದು. ನಾವು ಅದನ್ನು ಮುಂದಕ್ಕೆ ಕೊಂಡೊಯ್ಯಬೇಕು ಮತ್ತು ರಾಷ್ಟ್ರವನ್ನು ಪೋಷಿಸುವ ರೈತರ ಹಕ್ಕುಗಳಿಗಾಗಿ ಹೋರಾಡಬೇಕು”ಎಂದರು.