ಗೋಕಾಕ: ನಗರದ ಗುತ್ತಿಗೆದಾರನೊರ್ವನು ಮನವಿಗೆ ಸ್ಪಂದಿಸಿ ಶುಕ್ರವಾರದಂದು ಸಂಜೆ ಜಿಲ್ಲಾಧಿಕಾರಿ ನಿತೀಶಕುಮಾರ ಪಾಟೀಲ ಅವರು ನಗರದ ಮಹಾಲಿಂಗೇಶ್ವರ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ ಗುಡ್ಡದ ರಸ್ತೆಯನ್ನು ವೀಕ್ಷಣೆ ನಡೆಸಿದರು.
ಸುಮಾರು 5ವರ್ಷಗಳ ಹಿಂದೆ ನಗರಸಭೆಯ ನಗರೋತ್ಥಾನ ಯೋಜನೆಯಡಿ 3ನೇ ಹಂತದಲ್ಲಿ ಸುಮಾರು 50 ಲಕ್ಷ ರೂಗಳ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ಗುತ್ತಿಗೆದಾರನಿಗೆ ಬಿಲ್ ಪಾಸ ಆಗದೇ ಇರುವುದರಿಂದ ಗುತ್ತಿಗೆದಾರನು ಮಾಡಿದ ಮನವಿಯ ಹಿನ್ನಲೆಯಲ್ಲಿ ಇಂದು ಸ್ಥಳಕ್ಕೆ ಆಗಮಿಸಿ, ಕೈಗೊಂಡ ಕಾಮಗಾರಿಯ ವಿಕ್ಷಣೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ|| ಶಶಿಧರ ಬಗಲಿ, ನಗರಸಭೆ ಕಂದಾಯ ಅಧಿಕಾರಿ ಪ್ರಕಾಶ ಅಮ್ಮತ್ತನವರ ಕಂದಾಯ ನಿರೀಕ್ಷ ಎಸ್.ಎನ್.ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಡಿ.ಎಸ್.ದೇಸಾಯಿ ಸೇರಿದಂತೆ ಅನೇಕರು.
ಜಿಲ್ಲಾಧಿಕಾರಿ ನಿತೀಶ ಕುಮಾರ ಪಾಟೀಲ ಅವರು ದಿಢೀರ ಭೇಟಿ ನೀಡಿ ಸ್ಥಳ ವಿಕ್ಷಣೆ ನಡೆಸಿದ ನಂತರ ಸುದ್ದಿಗಾರರು ಪ್ರಶ್ನಿಸಲು ಆರಂಭಿಸಿದಾಗ ಯಾವುದೇ ಪ್ರತಿಕ್ರೀಯೇ ನೀಡದೇ ಆಯಾ ರಾಮ.. ಗಯಾ ರಾಮ.. ಎನ್ನುವಂತೆ ಮರು ಮಾತನಾಡದೇ ಅಲ್ಲಿಂದ ಕಾಲ್ಕಿತ್ತರು.