ಬೆಳಗಾವಿ: ಪಶ್ಚಿಮ ಗಟ್ಟದಲ್ಲಿ ಧಾರಾಕಾರು ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳ ಹರಿಯುವ ಹೆಚ್ಚಾಗಿದ್ದು ಜಲಾಶಯದಿಂದ ಇಂದು 40000 ಕ್ಯೂಸೆಕ್ಸ ನೀರು ಹೊರ ಬಿಡಲಾಗಿದೆ .

ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಒಳಹರಿಯುವ 18052 ಕ್ಯೂಸೆಕ್ಸ ಇದ್ದು ಈ ಒಳ ಹರಿವಿನ ಪ್ರಮಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಲಾಶಯದ ಕ್ರಷ್ಟ ಗೇಟುಗಳು ಮೂಲಕ ಘಟಪ್ರಭಾ ನದಿಗೆ ನೀರು ಹರಿದು ಬಿಡಲಾಗಿದೆ.
ಬಾನುವಾರ ಸಂಜೆ 5:30 ಕ್ಕೆ 40 ಸಾವಿರ ಕ್ಯೂಸೆಕ್ಸ ನೀರು ನದಿಗೆ ಬಿಡಲಾಗಿದೆ ಒಳ ಹರಿವಿನ ಪ್ರಮಾಣ ಹೆಚ್ಚಾದಂತೆ 50000 ಕ್ಯೂಸೆಕ್ಸ ನೀರು ಬಿಡುವ ಸಾಧ್ಯತೆ ಇದೆ.
ಘಟಪ್ರಭಾ ನದಿ ಹಾಗೂ ಹಿರ್ಯನಕೇಶಿ ನದಿಯ ದಡದಲ್ಲಿ ಬರುವ ಎಲ್ಲ ಗ್ರಾಮದ ಗ್ರಾಮಸ್ಥರು ಮತ್ತು ತಮ್ಮ ಜಾನುವಾರುಗಳ ಸಮೆತ ನದಿಯ ದಡದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ವಾಗುವಂತೆ ಗ್ರಾಮಸ್ಥರಿಗೆ ಗೋಕಾಕ ತಾಲೂಕಾಡಳಿತ ತಿಳಿಸಿದ್ದಾರೆ
CKNEWSKANNADA / BRASTACHARDARSHAN CK NEWS KANNADA