ಬೆಂಗಳೂರು : ನಟ ದರ್ಶನ್ ಅವರಿಗೆ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪವನ್ನು ಮಾಡಿದ್ದು, ಮೈಸೂರಿನಲ್ಲಿರುವ ಸ್ಟಾರ್ ಹೋಟೆಲ್ ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಹೋಟೆಲ್ ಕೆಲಸಗಾರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಮೈಸೂರು ಜಿಲ್ಲೆಯಲ್ಲಿ ಸೆಲೆಬ್ರಿಟಿಗಳ ನಡವಳಿಕ, ಭಾಷೆ ಮಿತಿಮೀರುತ್ತಿದೆ. ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ.
ಪೊಲೀಸ್ ಠಾಣೆಗಳಲ್ಲಿ ಸೆಟಲ್ ಮೆಂಟ್ ಮೂಲಕ ಡೀಲ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನ ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ದೊಡ್ಡ ಗಲಾಟೆ ನಡೆದಿದ್ದು, ನಟ ದರ್ಶನ್, ರಾಕೇಶ್, ಪಾಪಣ್ಣ ಸೇರಿ ಹೋಟೆಲ್ ನ ದಲಿತ ಕೆಲಸಗಾರಿನಿಗೆ ಹೊಡೆದಿದ್ದಾರೆ ಎನ್ನುವ ವರದಿ ನನ್ನ ಬಳಿ ಇದೆ. ಅದಕ್ಕೆ ಸಾಕ್ಷ್ಯ ಕೂಡ ಇದೆ. ಇದನ್ನು ಗೃಹ ಸಚಿವರಿಗೆ ತಲುಪಿಸಿದ್ದೇನೆ. ಹೋಟೆಲ್ ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಲಾಗಿದೆ. ಬಳಿಕ ಕೆಲಸಗಾರನಿಗೆ ಸೆಂಟಲ್ ಮೆಂಟ್ ಮಾಡಿ ಕಳಿಸುತ್ತಾರೆ. ದರ್ಶನ್ ಅವರು ಹೋಟೆಲ್ ಕೆಲಸಗಾರ ಮೇಲೆ ಹಲ್ಲೆ ಮಾಡಿಲ್ಲ ಎಂದು ರಾಘವೇಂದ್ರ ಸ್ವಾಮಿ ಮಠದಲ್ಲಿ ಆಣೆ ಮಾಡಲಿ. ಪ್ರಕರಣ ಸಂಬಂಧ ಗೃಹ ಸಚಿವರಿಗೆ ಭೇಟಿಯಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
CKNEWSKANNADA / BRASTACHARDARSHAN CK NEWS KANNADA