ನಟ ದರ್ಶನ್ ಅವರನ್ನು ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಹೇಳಿಕೊಂಡಿದ್ದಂತ ಮಹಿಳೆಯೊಬ್ಬರು, ಭೇಟಿಯಾಗಿ ನಿಮ್ಮ ಹೆಸರಿನಲ್ಲಿ 25 ಕೋಟಿ ರೂಪಾಯಿಗೆ ಲೋನ್ ಗಾಗಿ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆ ಕುರಿತು ವಿಚಾರಿಸೋದಕ್ಕೆ ಬಂದಿರೋದಾಗಿ ತಿಳಿಸಿದ್ದರು.
ಆದ್ರೇ ಹಾಗೇ ಯಾರೂ ಲೋನ್ ಗಾಗಿ ಅರ್ಜಿ ಸಲ್ಲಿಸಿದ ಬಗ್ಗೆ ನಟ ದರ್ಶನ್ ಗೆ ಮಾಹಿತಿ ಇರಲಿಲ್ಲ.ಈ ಬಳಿಕ, ನಟ ದರ್ಶನ್ ಸ್ನೇಹಿತ ಹರ್ಷ ಎಂಬುವರು ಮೈಸೂರಿನಲ್ಲಿ ನಟ ದರ್ಶನ್ ಗೆ ಕೋಟಿ ಕೋಟಿ ವಂಚಿಸಲು ಯತ್ನಿಸಿದಂತ ಮೂವರ ವಿರುದ್ಧ ದೂರು ನೀಡಲಾಗಿತ್ತು. ಈ ದೂರನ್ನು ಆಧರಿಸಿ, ಮೈಸೂರಿನ ಹೆಬ್ಬಾಳ ಠಾಣೆಯ ಪೊಲೀಸರು ಜುಲೈ.3ರಂದು ಎ.1 ಆರೋಪಿಯಾಗಿ ಅರುಣ್ ಕುಮಾರಿ, ಎ.2 ಆರೋಪಿಯಾಗಿ ಮಧುಕೇಶ ಹಾಗೂ ಎ.3 ಆರೋಪಿಯಾಗಿ ನಂದೀಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಪ್ರಕರಣಲ್ಲಿ ತನಿಖೆ ಕೈಗೊಂಡ ಪೊಲೀಸರು, ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಹೇಳಿಕೊಂಡಿದ್ದಂತ ಅರುಣ್ ಕುಮಾರಿ ಎಂಬುವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳಿ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದ್ದರಿಂದಾಗಿ ಹೀಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರನ್ನು ಕೂಡ ಕರೆಸಿ, ಮೈಸೂರಿನ ಎಸಿಪಿ ಕಚೇರಿಯಲ್ಲಿ ವಿಚಾರಣೆ ನಡೆಸೋದಕ್ಕೆ ತಯಾರಿ ನಡೆಸಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ನಟ ದರ್ಶನ್ ಕೂಡ ಎಸಿಪಿ ಕಚೇರಿಗೆ ಆಗಮಿಸಿದ್ದಾರೆ.