ಶಿವಮೊಗ್ಗ:ಖದೀಮರ ಗ್ಯಾಂಗ್ ಎಟಿಎಂನಿಂದ ಹಣ ದೋಚಲು ಯತ್ನಿಸಿರುವ ಘಟನೆ ಜಿಲ್ಲೆಯ ಬಿ.ಹೆಚ್ ರಸ್ತೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿ.ಹೆಚ್ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ಗೆ ಸಂಬಂಧಪಟ್ಟ ಎಟಿಎಂಗೆ ನುಗ್ಗಿದ ಖದೀಮರು, ಮಿಷನ್ನ್ನ ಸಂಪೂರ್ಣವಾಗಿ ಮುರಿದು ಹಾಕಿದ್ದಾರೆ. ಬಳಿಕ ಹಣ ಬಾರದೇ ಕೃತ್ಯ ಅರ್ಧಕ್ಕೆ ಕೈ ಬಿಟ್ಟು ಪರಾರಿಯಾಗಿದ್ದಾರೆ.
ನಗರದ ದೊಡ್ಡಪೇಟೆ ಠಾಣೆ ಪೊಲಿಸರಿಂದ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ಪರಿಶೀಲನೆ ನಡೆಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA