ಗೋಕಾಕ: ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಗೋಕಾಕ ಸಿಪಿಐ ಗೋಪಾಲ ರಾಠೋಡ ಸಲಹೆ ನೀಡಿದರು.
ನಗರದ ಆಟೋ ನಿಲ್ದಾಣಗಳಲ್ಲಿ ಹಾಗೂ ಖಾಸಗಿ ಮಿನಿ ಬಸ್ ನಿಲ್ದಾಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಮಾಡುವ ಮೂಲಕ ವಾಹನ ಚಾಲಕರಿಗೆ ರಸ್ತೆ ನಿಯಮಗಳ ಬಗ್ಗೆ ತಿಳಿಸಿದರು.
ಅತಿ ವೇಗದ ಚಾಲನೆ, ವಾಹನ ಚಾಲನೆಯ ವೇಳೆ ಮದ್ಯ ಸೇವನೆಯೇ ಮೊದಲಾಗಿ ರಸ್ತೆ ಸುರಕ್ಷತೆ ನಿಯಮ ಉಲ್ಲಂಘನೆ ಅಪಘಾತದ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದ್ದು ಅಂತಹ ಘಟನೆಗಳನ್ನು ನಿಯಂತ್ರಣ ಮಾಡಬೇಕು
ಅಪ್ರಾಪ್ತರಿಗೆ ವಾಹನ ನೀಡುವುದು, ಚಾಲನಾ ಪರವಾನಗಿ, ವಿಮೆ ರಹಿತ ಚಾಲನೆ ಅಪರಾಧವಾಗಿದ್ದು ಅಕಸ್ಮಾತ್ ಅಪಘಾತ ಸಂಭವಿಸಿದಲ್ಲಿ ಭವಿಷ್ಯತ್ತಿನಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗಿ ಬರುವುದು. ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸಿಪಿಐ ಗೋಪಾಲ ರಾಠೋಡ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಎಂ ಡಿ ಘೋರಿ ಹಾಗೂ ಸಿಬ್ಬಂದಿಗಳು, ಆಟೋ ಚಾಲಕರು , ಮಿನಿ ಬಸ್ ಚಾಲಕರು , ಮಾಲಿಕರು ಇದ್ದರು.