ಗೋಕಾಕ : ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ವಾರ್ಡ್ 19 ರಲ್ಲಿ ಮಾರ್ಕಂಡೇಯ ನಗರದ ನಿವಾಸಿಗಳ ನಿದ್ದೆಗೆಡಿಸುತ್ತಿರುವ ನಾಯಿಗಳ ಉಪಟಳ ಹೆಚ್ಚಾಗಿದೆ.
ನಗರದ ಮಾರ್ಕಂಡೇಯ ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಆರರಿಂದ ಏಳು ಜನ ಮಕ್ಕಳಿಗೆ ನಾಯಿ ಕಡಿದು ಗಂಭೀರ ಗಾಯವಾಗಿವೆ.

ಗೋಕಾಕ ನಗರದಲ್ಲಿ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಇನ್ನು ನಾಯಿ ಕಡಿತದಿಂದ ಗಾಯಗೊಂಡವರನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ಕಾರಣ ಬೆಳಗಾವಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
*ಇನ್ನಾದರೂ ನಗರ ಸಭೆಯವರು ಗಂಭೀರವಾಗಿ ಪರಿಗಣಿಸಬೇಕು*:
ಈ ಹಿಂದೆ ನಗರದಲ್ಲಿ ಸಾಕಷ್ಟು ಭಾರಿ ಇಂತಹ ಘಟನೆಗಳು ನಡೆದಿವೆ, ಆದರೆ ನಗರ ಸಭೆ ಅಧಿಕಾರಿಗಳು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ, ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
*ಬೀದಿ ನಾಯಿಗಳ ಹಾವಳಿಗೆ ಗೋಕಾಕ ಜನ ತತ್ತರ*
ನಾಯಿಗಳ ದಾಳಿ ನಡೆದಾಗ ಮಾತ್ರ ದಿಢೀರ್ ಕ್ರಮದ ಭರವಸೆಯನ್ನು ನಗರಸಭೆ ನೀಡುತ್ತದೆ. ನಂತರ ಯಾವುದೇ ಸೂಕ್ತ ಕ್ರಮ ಜರುಗಿಸದೆ ಸುಮ್ಮನಾಗಿ ಬಿಡುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲವು ವೇಳೆ ಶಾಲಾ ಮಕ್ಕಳ ಮೇಲೂ ದಾಳಿ ಮಾಡಿವೆ. ಒಂದು ನಾಯಿ ಬೊಗಳಿದರೆ ಸಾಕು ಅದರ ಹಿಂದೆಯೇ ಮತ್ತಷ್ಟು ಸೇರಿಕೊಳ್ಳುತ್ತವೆ. ಒಂದರ ಹಿಂದೆ ಒಂದರಂತೆ ಸುತ್ತುವರಿದು ಜನರ ಮೇಲೆ ಎಗುತ್ತಲೇ ಇವೆ. ಇನ್ನು ನಾಯಿ ದಾಳಿಯಿಂದ ತಪ್ಪಿಪಿಕೊಳ್ಳಲು ಹೋಗಿ ಕೊನೆಗೆ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳೇ ಇವೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೇವಲ ಕಾಗದದ ಪತ್ರದಲ್ಲಿ ಮಾತ್ರವಾ? ಬೀದಿ ನಾಯಿಗಳ ನಿಯಂತ್ರಣಕ್ಕೆ ನಿಮ್ಮ ಕ್ರಮವೇನು?
ಹಲವು ವರ್ಷಗಳಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡದಿರುವ ಕಾರಣ, ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ’ ಆದರೆ ಯಾವುದಾದರೂ ತಾಲೂಕು ಮಟ್ಟದ ಸಭೆಯಲ್ಲಿ ನಗರ ಸಭೆ ಅಧಿಕಾರಿಗಳು ಮಾತ್ರ ಬೀದಿ ನಾಯಿಗಳ ನಿಯಂತ್ರಣ ಮಾಡುತ್ತಿದೇವೆ ಎಂದು ಮಾತು ಆಡುತ್ತಾರೆ ಅದು ಕೇವಲ ಕಾಗದ ಪತ್ರಗಳಿಗೆ ಮಾತ್ರ ಸೀಮಿತವಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.
*ಇಂಜೆಕ್ಷನ್ ಇಲ್ಲದ ಕಾರಣ ಬೆಳಗಾವಿಗೆ ಮೊರೆ ಹೋದ ಜನ*
ನಗರದಲ್ಲಿ ಮಕ್ಕಳಿಗೆ ನಾಯಿ ಕಡಿತದ ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ BPL ಕಾರ್ಡ್ ಇದ್ದವರಿಗೆ ಮಾತ್ರ ಇಂಜೆಕ್ಷನ್ ಉಚಿತ, ರೆಷಣ ಕಾರ್ಡ್ ಇಲ್ಲದೆ ಹೊದರೆ ಹಣ ನೀಡಬೇಕು ಇದರಿಂದ ಬಡ ರೋಗಿಗಳು ಬೆಳಗಾವಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಹಾಗಾದರೆ ಈ ಬೀದಿ ನಾಯಿಗಳ ಕಡಿತಕ್ಕೆ ಹೊಣೆ ಯಾರು? ನಾಯಿ ನಿಯಂತ್ರಣ ಮಾಡದ ನಗರ ಸಭೆಯೋ? ಇಂಜೆಕ್ಷನ್ ನೀಡದ ಆಸ್ಪತ್ರೆಯೋ?
ಒಟ್ಟಾರೆಯಾಗ ಇನ್ನಾದರೂ ಎಚ್ಚೆತ್ತುಕೊಂಡು ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರಾ ಎಂದು ಕಾಯ್ದು ನೋಡಬೇಕಾಗಿದೆ…
CKNEWSKANNADA / BRASTACHARDARSHAN CK NEWS KANNADA