ಗೋಕಾಕ : ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ನಾಯಿಗಳ ಉಪಟಳ ಹೆಚ್ಚಾಗಿದೆ.
ನಗರದ ಗುರುವಾರ ಪೇಟೆಯ ನಾಯಕ್ ಗಲ್ಲಿ ಯಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬೆಳ್ಳಂ ಬೆಳಿಗ್ಗೆ ಆರು ಜನರಿಗೆ ನಾಯಿ ಕಡಿದು ಗಂಭೀರ ಗಾಯವಾಗಿವೆ.
ಗೋಕಾಕ ನಗರದಲ್ಲಿ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಇನ್ನು ನಾಯಿ ಕಡಿತದಿಂದ ಗಾಯಗೊಂಡವರನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡವರು : ಶಿವಕ್ಕ ದೇಸಾಯಿ (17), ರೆಹಮಾನ್ ಬೇಪಾರಿ (10), ಗಂಗವ್ವ ತಳವಾರ (56), ಹುಮೇದ ಬೋಜಗಾರ (60), ಕಲಾವತಿ ಪೂಜಾರಿ (35), ರೆಹಾನ್ ಬೇಪಾರಿ (12) ಅವರ ಮೇಲೆ ನಾಯಿ ದಾಳಿ ನಡೆಸಿವೆ.
ನಂತರ ನಗರ ಸಭೆ ಸಿಬ್ಬಂದಿಗಳು ನಾಯಿಗಳು ವಶ ಪಡಿಸಿಕೊಂಡರು.
ಇನ್ನಾದರೂ ನಗರ ಸಭೆಯವರು ಗಂಭೀರವಾಗಿ ಪರಿಗಣಿಸಬೇಕು: ಈ ಹಿಂದೆ ನಗರದಲ್ಲಿ ಸಾಕಷ್ಟು ಭಾರಿ ಇಂತಹ ಘಟನೆಗಳು ನಡೆದಿವೆ, ಆದರೆ ನಗರ ಸಭೆ ಅಧಿಕಾರಿಗಳು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ, ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
*ಬೀದಿ ನಾಯಿಗಳ ಹಾವಳಿಗೆ ಗೋಕಾಕ ಜನ ತತ್ತರ*
ನಾಯಿಗಳ ದಾಳಿ ನಡೆದಾಗ ಮಾತ್ರ ದಿಢೀರ್ ಕ್ರಮದ ಭರವಸೆಯನ್ನು ನಗರಸಭೆ ನೀಡುತ್ತದೆ. ನಂತರ ಯಾವುದೇ ಸೂಕ್ತ ಕ್ರಮ ಜರುಗಿಸದೆ ಸುಮ್ಮನಾಗಿ ಬಿಡುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲವು ವೇಳೆ ಶಾಲಾ ಮಕ್ಕಳ ಮೇಲೂ ದಾಳಿ ಮಾಡಿವೆ. ಒಂದು ನಾಯಿ ಬೊಗಳಿದರೆ ಸಾಕು ಅದರ ಹಿಂದೆಯೇ ಮತ್ತಷ್ಟು ಸೇರಿಕೊಳ್ಳುತ್ತವೆ. ಒಂದರ ಹಿಂದೆ ಒಂದರಂತೆ ಸುತ್ತುವರಿದು ಜನರ ಮೇಲೆ ಎಗುತ್ತಲೇ ಇವೆ. ಇನ್ನು ನಾಯಿ ದಾಳಿಯಿಂದ ತಪ್ಪಿಪಿಕೊಳ್ಳಲು ಹೋಗಿ ಕೊನೆಗೆ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳೇ ಇವೆ.
ಇನ್ನಾದರೂ ಎಚ್ಚೆತ್ತುಕೊಂಡು ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರಾ ಎಂದು ಕಾಯ್ದು ನೋಡಬೇಕಾಗಿದೆ…