ಗೋಕಾಕ : ನಗರಸಭೆ ವತಿಯಿಂದ ಏಕಮುಖ ಬಳಕೆಯ ಪ್ಲಾಸ್ಟಿಕ್ ನಿಷೇದ ಕುರಿತು ನಗರದ ಪ್ರಮುಖ ಬೀದಿಗಳಲ್ಲಿ ಜನ ಜಾಗೃತಿಗಾಗಿ ಒಂಟೆಗಳನ್ನು ಬಳಸಿಕೊಂಡು ವಿನೂತನ ಜಾಥಾ ಹಮ್ಮಿಕೊಳ್ಳಲಾಯಿತು.ಜಾಥಾ ದೂದ್ದಕ್ಕೂ ವ್ಯಾಪಾರಸ್ಥರಿಗೆ ಕರಪತ್ರ ಹಂಚಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಸದಂತೆ ಎಚ್ಚರಿಕೆ ನೀಡಲಾಯಿತು.ಪ್ಲಾಸ್ಟಿಕ್ ಬ್ಯಾನ್ ಜಾಗೃತಿ ಜಾಥಾದಲ್ಲಿ ಒಂಟೆಗಳು ಜನ ಸಾಮಾನ್ಯರ ಪ್ರಮುಖ ಆಕರ್ಷಣೆ ಆಗಿತ್ತು.
ಈ ಸಂದರ್ಭದಲ್ಲಿ ಪೌರಾಯುಕ್ತರಾದ ಶಿವಾನಂದ ಹಿರೇಮಠ,ಸ.ಕಾ ಪರಿಸರ ಅಭಿಯಂತರರಾದ ಎಮ್.ಎಚ್ ಗಜಾಕೋಶ,ಹಿರಿಯ ಆರೋಗ್ಯ ನಿರೀಕ್ಷಕರಾದ ಜಯೇಶ ತಾಂಬೋಳಿ,ಕುಮಾರ ಕೋಳಿ, ಸ್ಥಾಯಿ ಕಮಿಟಿ ಅಧ್ಯಕ್ಷರಾದ ಸಿದ್ರಾಮ ಹುಚ್ಚರಾಮಗೋಳ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.