ಗೋಕಾಕ: ಗೋಕಾಕ್ ನಗರಸಭೆ ಸ.ಕಾ.ಅ.ಪರಿಸರ ಎಮ್ ಎಚ್ ಗಜಕೋಶ,ಹಿರಿಯ ಅರೋಗ್ಯ ನಿರೀಕ್ಷಕರಾದ ಜಯೇಶ ತಾಂಬೋಳೆ ರವರ ತಂಡ ನಗರದ ಪ್ರಮುಖ ಹೋಲ್ಸೇಲ್ ಅಂಗಡಿ ಹಾಗೂ ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಅಂದಾಜು 15ಕ್ಕೂ ಹೆಚ್ಚು ಕೆಜಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಜಪ್ತಿ ಮಾಡಿಕೊಂಡಿದ್ದಾರೆ.ಹಾಗೂ ನಾಲ್ಕು ಅಂಗಡಿಗಳಿಗೆ 2000 ದಂಡವನ್ನು ವಿಧಿಸಿದ್ದಾರೆ.
ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ: ಗೋಕಾಕ್ ನಗರಸಭೆ ವತಿಯಿಂದ ಕಾರ್ಯಾಚರಣೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು, 2016ರ ನಿಯಮ 4(2)ರ ಪ್ರಕಾರ (ತಿದ್ದುಪಡಿದಂತೆ), ಪ್ಲಾಸ್ಟಿಕ್ ಸೇರಿದಂತೆ ಪಾಲಿಸ್ರೈರೀನ್ ಮತ್ತು ವಿಸ್ತರಿತ ಪಾಲಿಸ್ರೈರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ (SUP) ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು 1 ಜುಲೈ 2022ರಿಂದ ನಿಷೇಧಿಸಲಾಗಿದೆ’
ಸಾರ್ವಜನಿಕರು ಅಂಗಡಿಯವರ್ತಕರು ಆದೇಶವನ್ನು ಪಾಲನೆ ಮಾಡುವ ಮೂಲಕ ನಗರ ಸಭೆಗೆ ಸಹಕಾರ ನೀಡಬೇಕು ಎಂದು ಸ.ಕಾ.ಅ.ಪರಿಸರ ಎಮ್ ಎಚ್ ಗಜಕೋಶ ತಿಳಿಸಿದ್ದಾರೆ.