ಚೇತನ ಖಡಕಭಾಂವಿ , ಸಂಪಾದಕರು
CK NEWS KANNADA.
ಗೋಕಾಕ : ಗೋಕಾಕ ನಗರ ಸಭೆ ಸದಸ್ಯರಾಗಿ ಕಳೆದ ಎರಡು ವರ್ಷಗಳಾದರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ, ಮೊನ್ನೆ ಸರ್ಕಾರದಿಂದ ಪರಿಷ್ಕ್ರತ ಮೀಸಲಾತಿ ಪ್ರಕಟಣೆ ಹೊರಡಿಸಿ ಆದೇಶಿಸಿದಾಗ ಸದಸ್ಯರಲ್ಲಿ ಮಂದಹಾಸ ಒಂದು ಕಡೆ ಆದರೇ , ಇನ್ನೊಂದೆಡೆ ಅಧ್ಯಕ್ಷ, ಉಪಾಧ್ಯಕ್ಷ ಯಾರಾಗ್ತರೇ ಎಂಬ ಕುತೂಹಲ, ಇದ್ದಕ್ಕೇಲ್ಲ ಶೀಘ್ರದಲ್ಲಿ ವಿರಾಮವಾಗಲಿದೆ.
ಗೋಕಾಕ ನಗರ ಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ,ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಸಿ ಮೀಸಲಾತಿ ಪ್ರಕಟಣೆವಾಗಿದೆ. ಗೋಕಾಕ ನಗರ ಸಭೆಯಲ್ಲಿ ಒಟ್ಟು 31 ಸ್ಥಾನಗಳಿವೆ,ಅವುಗಳಲ್ಲಿ 6 ಜನರು ಅವಿರೋಧ ಆಯ್ಕೆಯಾಗಿದ್ದಾರೆ. 24 ಜನರು ಪಕ್ಷೇತರ ಅಭ್ಯರ್ಥಿಗಳು ಹಾಗೂ ಒರ್ವ ಅಭ್ಯರ್ಥಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಉಳಿದ ಎಲ್ಲ ಸದಸ್ಯರು ಸಚಿವ ರಮೇಶ ಜಾರಕಿಹೊಳಿ ಹಾಗೂ ಉದ್ಯಮಿ ಲಖನ ಜಾರಕಿಹೊಳಿ ಅವರ ಬಣದಲ್ಲಿ ಗೆದ್ದು ಬಂದವರು.ಅದರಲ್ಲಿ ರಮೇಶ್ ಜಾರಕಿಹೊಳಿ ಅವರ ಬಣದಲ್ಲಿ ಹೆಚ್ಚಿನ ಸದಸ್ಯರಿದ್ದು ದಿನದಿಂದ ದಿನಕ್ಕೆ ಸದ್ಯಸರಲ್ಲಿ ಕುತೂಹಲ ಹೆಚ್ಚಾಗುತ್ತಿದೆ .
ಸಚಿವರ ಆಪ್ತರು ಹಾಗೂ ಹಿರಿಯ ನಗರಸಭೆ ಸದಸ್ಯರು ಎಸ್ ಎ ಕೋತವಾಲ ಅವರು ಹಾಗೂ ಗಿರೀಶ್ ಖೋತ ಅವರ ಹೆಸರು ಮೊದಲು ಕೇಳಿ ಬರುತ್ತಿದ್ದವು. ಆದರೇ ಅವರ ಅಕಾಲಿಕ ನಿಧನವಾದ ಕಾರಣ ನಗರಸಭೆಯಲ್ಲಿ ಸದ್ಯ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಎದ್ದು ಕಾಣುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಈಗ ನಗರದಲ್ಲಿ ಕೇಳಿ ಬರುತ್ತಿರುವ ಹೆಸರುಗಳು ಸತತ ಮೂರು ಬಾರಿ ಸದಸ್ಯರಾಗಿರುವ ಭಾರತಿ ಶಿವಾನಂದ ಹತ್ತಿ. ಎರಡು ಬಾರಿ ಸದಸ್ಯರಾಗಿರುವ ಜಯಾನಂದ ಹುಣಶ್ಯಾಳ, ಅವರ ಹೆಸರು ಕೇಳಿ ಬರುತ್ತೀವೆ.
ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಸಿ ಮೀಸಲು ಇರುವುದರಿಂದ ಬಸವರಾಜ ಅರೇನ್ನವರ, ಹರೀಶ್ ಬೂದಿಹಾಳ ಸದಸ್ಯರ ಹೆಸರು ಕೇಳಿ ಬರುತ್ತೀವೆ.
ಎಲ್ಲ ನಗರ ಸಭೆ ಸದಸ್ಯರು ಸಚಿವ ರಮೇಶ ಜಾರಕಿಹೊಳಿ ಅವರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.ಸಚಿವ ರಮೇಶ್ ಜಾರಕಿಹೊಳಿ ಅವರ ತೀರ್ಮಾನವೇ ಅಂತಿಮ ಎಂದು ಹೇಳಲಾಗುತ್ತಿದೆ. ಸಚಿವರು ಸದಸ್ಯರ ಎಲ್ಲ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿ ,ಯಾರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಎಂದು ಶೀಘ್ರದಲ್ಲೇ ಸಚಿವ ರಮೇಶ ಜಾರಕಿಹೊಳಿ ತಿಳಿಸಲ್ಲಿದ್ದಾರೆ.