ಶಿವಮೊಗ್ಗ: ಪರ್ಸಂಟೆಜ್ ಅನ್ನುವಂತಹದ್ದು ಬಹಳ ವ್ಯಾಪಕವಾಗಿ ಮಾಡುವ ವಿಚಾರ. ಇದನ್ನು ನಿಯಂತ್ರಣ ಮಾಡುವುದು ಬಹಳ ಮುಖ್ಯ ಎಂದು ಬುಧವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂತೋಷ್ ಪಾಟೀಲ್ ವಿಚಾರ ವಿಭಿನ್ನ ಪ್ರಕರಣ, ಎಸ್ಟಿಮೇಟ್ ಮಾಡುವುದರಿಂದ ಈ ಪ್ರಕರಣ ಆರಂಭವಾಗುತ್ತದೆ.ನಿವೃತ್ತ ಹೈಕೋರ್ಟ್ ಜಡ್ಜ್, ಇಲಾಖೆಯ ಎಕ್ಸ್ ಫರ್ಟ್ ಒಳಗೊಂಡು ಒಂದು ಉನ್ನತ ಮಟ್ಟದ ಸಮಿತಿ ರಚಿಸುತ್ತೇನೆ.
ಟೆಂಡರ್ ಆರಂಭಕ್ಕೂ ಮೊದಲು ಈ ತಂಡ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
50 ಕೋಟಿ ರೂ ಮೇಲ್ಪಟ್ಟ ಕಾಮಗಾರಿಗಳು ಈ ಸಮಿತಿ ಮುಂದೆ ಹೋಗುತ್ತದೆ.ಅವರು ಎಲ್ಲಾ ಪರಿಶೀಲನೆ
ಮಾಡಿದ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ.ಟೆಂಡರ್ ಹೆಚ್ಚಾಗಿ ಬಂದರೆ ಮತ್ತೊಂದು ಸಮಿತಿ ರಚನೆ ಮಾಡುವ ಯೋಚನೆ ಸಹ ಇದೆ ಎಂದು ತಿಳಿಸಿದರು.
ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡಬಾರದು.ಯಾರಾದರೂ ಮಾಡಿದರೇ ಇಲಾಖೆಯ ಇಂಜಿನಿಯರ್ ಮತ್ತು ಅಧಿಕಾರಿ ಜವಾಬ್ದಾರಿ ಆಗುತ್ತಾರೆ ಎಂದರು.
ಬೆಂಗಳೂರಿನಲ್ಲಿ ಭೂ ಕಬಳಿಕೆ ವಿಚಾರ ಇದೆ. ಅಲ್ಲಿ ಭೂಮಿ ಮೌಲ್ಯ ಹೆಚ್ಚಿದೆ. ಈಗಾಗಿಭೂ ಕಬಳಿಕೆ ಹೆಚ್ವಿದೆ ಎಂದರು.
CKNEWSKANNADA / BRASTACHARDARSHAN CK NEWS KANNADA