ಬೆಂಗಳೂರು : ರಾಜ್ಯದಲ್ಲಿ ಜುಲೈ.26ರ ಲೆಕ್ಕಾಚಾರ ಗರಿಗೆದರಿದೆ. ಸಿಎಂ ಬದಲಾವಣೆ ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿಎಂ ಹುದ್ದೆಗೆ ಏರೋದಕ್ಕೆ ಲಾಭಿ ಆರಂಭಗೊಂಡಿದ್ದು, ಈ ರೇಸ್ ನಲ್ಲಿ ಬಿಜೆಪಿಯ ಹಾಲಿ ಸಚಿವರು, ಶಾಸಕರು ತೆರೆ ಮರೆಯಲ್ಲಿ ಲಾಭಿ ನಡೆಸುತ್ತಿದ್ದಾರೆ.
ಅದರಲ್ಲೂ ಲಿಂಗಾಯತ ಸಮುದಾಯದ ಅನೇಕ ಹೆಸರುಗಳು ಸಿಎಂ ಪಟ್ಟದ ರೇಸ್ ನಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೆಹಲಿಯ ಪ್ರವಾಸದಲ್ಲಿ ಅನಾರೋಗ್ಯದ ನೆಪದಿಂದಾಗಿ ತಮ್ಮ ಹುದ್ದೆ ತೊರೆಯುವಂತ ಇಂಗಿತವನ್ನು ಬಿಜೆಪಿ ಹೈಕಮಾಂಡ್ ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದೇ ಕಾರಣದಿಂದಾಗಿ ರಾಜ್ಯ ರಾಜಕೀಯದಲ್ಲಿ ಜುಲೈ.26ರ ನಂತ್ರ ಸಿಎಂ ಬದಲಾವಣೆ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿಎಂ ಹುದ್ದೆಯ ಲಾಭಿಯಲ್ಲಿ ಅನೇಕರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ಒಂದು ವೇಳೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡೋದಾದ್ರೇ, ಅದೇ ಸಮುದಾಯದ ಇತರೆ ಸಚಿವರಿಗೆ ಆ ಹುದ್ದೆ ನೀಡುವಂತ ಯೋಚನೆಯಲ್ಲಿ ಬಿಜೆಪಿ ಹೈಕಮಾಂಡ್ ಇದೆ ಎನ್ನಲಾಗುತ್ತಿದೆ. ಅದರಲ್ಲೂ ಹಾಲಿ ಸಚಿವರಾಗಿರುವಂತ ಮುರುಗೇಶ್ ನಿರಾಣಿ ಸಿಎಂ ಸ್ಥಾನಕ್ಕೆ ಏರಲಿದ್ದಾರೆ ಎನ್ನಲಾಗುತ್ತಿದೆ. ಇವರ ನಂತ್ರ ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ.
ಇನ್ನೂ ಲಿಂಗಾಯತ ಸಮುದಾಯದ ಹೊರತಾಗಿ ಕೋಟಾ ಬಿಟ್ಟು ಬೇರೆ ಸಮುದಾಯಕ್ಕೆ ನೀಡೋದಾದ್ರೇ.. ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ ಸಿ.ಟಿ ರವಿ, ಅಶ್ವತ್ಥ ನಾರಾಯಣ, ಪ್ರಹ್ಲಾದ್ ಜೋಷಿ, ಸ್ಪೀಕರ್ ಕಾಗೇರಿ, ದಲಿತರನ್ನು ಸಿಎಂ ಮಾಡಬೇಕು ಅಂತ ಯೋಚನೆಯಲ್ಲಿ ಅರಂವಿಂದ ಲಿಂಬಾವಳಿ, ಹಿರಿಯ ನಾಯಕ ಗೋವಿಂದ ಕಾರಜೋಳ ಇದ್ದಾರೆ. ಆದ್ರೇ ಇದು ತೀರಾ ಕಡಿಮೆ ಎನ್ನಲಾಗುತ್ತಿದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.