ಬೆಳಗಾವಿ ಜಿಲ್ಲೆಯ ಗೋಕಾಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಏಳೆದಿದ್ದಾರೆ.
ರೈತ ಸಂಘದ ಸಂಸ್ಥಾಪಕರಾದ ದಿ.ಪ್ರೊ.ನಂಜುಂಡಸ್ವಾಮಿ ಒಡನಾಡಿಯಾಗಿದ್ದ ಕಲ್ಯಾಣರಾವ್ ಮುಚಳಂಬಿ, 35 ವರ್ಷಗಳ ಹಿಂದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ‘ಹಸಿರು ಕ್ರಾಂತಿ’ ಪತ್ರಿಕೆ ಸ್ಥಾಪನೆ ಮಾಡಿದ್ದರು. ರೈತಪರ, ಕನ್ನಡಪರ ಹಾಗೂ ಗಡಿ ಹೋರಾಟದಲ್ಲಿ ಸಕ್ರಿಯರಾಗಿದ್ದರು
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ರೈತರ ಆತ್ಮಹತ್ಯೆ ತಡೆಗೆ ವಿವಿಧ ಮಠಾಧೀಶರ ಜೊತೆ 150ಕ್ಕೂ ಹೆಚ್ಚು ಗ್ರಾಮಗಳಿಗೆ ಪಾದಯಾತ್ರೆ ಮಾಡಿದ್ದರು. ರೈತ ಹೋರಾಟಗಳಲ್ಲಿ ಜೈಲ ಭರೋ ಚಳವಳಿಯಲ್ಲಿ ಭಾಗವಹಿಸಿ ಎರಡು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು. ಪತ್ರಿಕಾ ರಂಗವಷ್ಟೇ ಅಲ್ಲದೇ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದರು.
ಸಾಮೂಹಿಕ ನಾಯಕತ್ವ ರೈತ ಸಂಘದ ಬೆಳಗಾವಿಯ ಮುಖಂಡರಾಗಿದ್ದ ಕಲ್ಯಾಣರಾವ್ ಮುಚಳಂಬಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ರಾತ್ರಿ 8 ಗಂಟೆಯಿಂದ ಬೆಳಗಾವಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ಸದಾಶಿವನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗಿದೆ..