ಗೋಕಾಕ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಹಾಗೂ ತಾ.ಪಂ. ಮಾಜಿ ಸದಸ್ಯ ಶ್ರೀ ಚಂದ್ರಶೇಖರ ಕೊಣ್ಣೂರ ಅವರ ಧರ್ಮಪತ್ನಿ ಮಮದಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಂದ್ರಶೇಖರ ಕೊಣ್ಣೂರ (48) ಅವರು ಇಂದು ದಿ. 7/5/2021 ರಂದು ಸಂಜೆ ನಿಧನರಾದರೆಂದು ತಿಳಿಸಲು ವಿಷಾಧವೆನಿಸುತ್ತದೆ.. ಮೃತರು ಓರ್ವ ಪುತ್ರ , ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮರಡಿ ಶಿವಾಪೂರ ಗ್ರಾಮದ ತೋಟದಲ್ಲಿ ನಡೆಯಲಿದೆ.
ಸಂತಾಪ: ಮಮದಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಂದ್ರಶೇಖರ ಕೊಣ್ಣುರ ಅವರ ನಿಧನಕ್ಕೆ ಕೆಎಮ್ಎಫ್ ಅಧ್ಯಕ್ಷ ಹಾಗೂ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಯಮಕನಮರ್ಡಿ ಶಾಸಕ ಸತೀಶ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಲಖನ್ ಜಾರಕಿಹೊಳಿ ಸೇರಿದಂತೆ ಹಲವಾರು ಗಣ್ಯರು ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.