ಚಿಕ್ಕೋಡಿ (ಬೆಳಗಾವಿ): ‘ವೈದ್ಯೋ ನಾರಾಯಣೋ ಹರಿಃ’ ಅಂತಾರೆ..ದೇವರ ರೂಪದಲ್ಲಿ ಜನರು ವೈದ್ಯರನ್ನು ನೋಡ್ತಾರೆ..
ಆದರೆ ಕೆಲವು ವೈದ್ಯರು ಮಾತ್ರ ರಕ್ತ ಹೀರುವ ತಿಗಣೆ ತರಹ ಜನರನ್ನು ಹಣಕ್ಕಾಗಿ ಪೀಡಿಸುತ್ತಾರೆ.
ಸದ್ಯ ಇಂತಹ ತಿಗಣೆ ತರಹವಿರೋ ವೈದ್ಯರ ಸಾಲಿನಲ್ಲಿ ನಿಲ್ಲುತರಂತೆ ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಾ. ಕಮಲಾ ಗಡದ್.
ಅಂದ ಹಾಗೇ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎನ್ನುವುದು ಒಂದು ತರಹ ಲಂಚದ ಅಡ್ಡೆಯಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಇನ್ನು ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಡಾ. ಕಮಲಾ ಗಡದ್ ಒಂದು ಶಸ್ತ್ರಚಿಕಿತ್ಸೆಯ ಹೆರಿಗೆಗೆ 4 ಸಾವಿರ ಹಣ ಪಡೆಯುತ್ತಾರೆಂದು ಜನರು ಆರೋಪಿಸಿದ್ದಾರೆ.
ಇದಲ್ಲದೆ, ಈ ಡಾಕ್ಟರ್‌ಗೆ 4 ಸಾವಿರ ಲಂಚ ಕೊಟ್ಟಿರುವ ಬಗ್ಗೆ ಇಬ್ಬರು ವ್ಯಕ್ತಿಗಳು ಆರೋಪ ಮಾಡಿದ್ದು,ಕಮಲ ಮೇಡಂ ನನ್ನ ಬಳಿ 4 ಸಾವಿರ ಕೇಳಿದ್ದು,ನಾವು ಅದನ್ನು ಕೊಟ್ಟಿದ್ದೆವೆ.ಜೊತೆಗೆ ಸ್ಕ್ಯಾನಿಂಗ್‌ಗೆ 800 ರೂ.ಪಡೆಯಲಾಗಿದೆ.ನಮಗೆ ಇದು ಖಾಸಗಿ ಆಸ್ಪತ್ರೆಯೋ ಅಥವಾ ಸರ್ಕಾರಿ ಆಸ್ಪತ್ರೆಯೋ ಗೊತ್ತಾಗುತ್ತಿಲ್ಲ.ಹೀಗೆ ಪ್ರತಿಯೊಂದಕ್ಕೆ ಹಣ ಪಡೆದರೇ ಬಡವರು ಎಲ್ಲಿಗೆ ಹೋಗಬೇಕು.ಇದಕ್ಕೆ ಯಾರು ಹೊಣೆ?ಯಾರು ಉತ್ತರ ಹೇಳುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಕಮಲಮ್ಮನ ಲಂಚದ ಹಾವಳಿ ಹೆಚ್ಚಾಗಿದ್ದು,ಇನ್ನಾದರೂ ಕಮಲಮ್ಮ ದುಡ್ಡು ತಿನ್ನೊದನ್ನು ಬಿಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.