ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ, ಇಂದು ಸಿಬಿಎಸ್ಇ 10 ನೇ ತರಗತಿ ಫಲಿತಾಶವನ್ನು ಪ್ರಕಟಿಸಲಿದೆ. ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. 10 ನೇ ತರಗತಿಗೆ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳು, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಸಿಬಿಎಸ್ಇ ಫಲಿತಾಂಶ ನೋಡಬಹುದಾಗಿದೆ.
10 ನೇ ತರಗತಿಯ ಫಲಿತಾಂಶವನ್ನು https://www.cbse.gov.in/ ಮತ್ತು https://www.cbse.gov.in/ ನಲ್ಲಿ ಪರಿಶೀಲಿಸಬಹುದು. ಇವುಗಳಲ್ಲದೆ, ಐವಿಎಸ್, ಎಸ್ಎಂಎಸ್ ಮತ್ತು Umang App ನಲ್ಲಿ ನೋಂದಾಯಿತ ಎಲ್ಲ ಅಭ್ಯರ್ಥಿಗಳಿಗೆ ಫಲಿತಾಂಶಗಳು ಲಭ್ಯವಿರುತ್ತವೆ. ಅಭ್ಯರ್ಥಿಗಳು CBSE DigiLocker ವೆಬ್ಸೈಟ್, digilocker.gov.in ಗೆ ಲಾಗ್ ಇನ್ ಮಾಡಿ, ಸಿಬಿಎಸ್ಇ ಫಲಿತಾಂಶದ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು.
ಕೊರೊನಾ ಹಿನ್ನಲೆಯಲ್ಲಿ 10ನೇ ತರಗತಿಗೆ ಪರೀಕ್ಷೆ ನಡೆದಿಲ್ಲ. ಮೌಲ್ಯಮಾಪನ ವಿಧಾನದಲ್ಲಿ ಫಲಿತಾಂಶ ನೀಡಲಾಗಿದೆ. ಮೌಲ್ಯಮಾಪನ ವಿಧಾನದಲ್ಲಿ ತೃಪ್ತಿ ಇಲ್ಲದವರು ಕೊರೊನಾ ನಂತ್ರ ಪರೀಕ್ಷೆ ಬರೆಯಬಹುದು.
ಸಿಬಿಎಸ್ಇ 10 ನೇ ತರಗತಿಯ ಮೌಲ್ಯಮಾಪನ ಮಾನದಂಡಗಳ ಪ್ರಕಾರ, ಆಂತರಿಕ ಮೌಲ್ಯಮಾಪನ, ಆವರ್ತಕ ಪರೀಕ್ಷೆಗಳು, ಅರ್ಧ ವಾರ್ಷಿಕ ಅಥವಾ ಮಧ್ಯ-ಅವಧಿಯ ಪರೀಕ್ಷೆಗಳು ಮತ್ತು ಪೂರ್ವ-ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಅಂಕಗಳನ್ನು ನೀಡಲಾಗಿದೆ.