ಗೋಕಾಕ : ನಗರದ ಶೂನ್ಯ ಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಶನಿವಾರದಂದು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು , ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು , ಗಣ್ಯರಾದ ಮಲ್ಲಿಕಾರ್ಜುನ ಈಟಿ , ಎಂ.ಎಸ್. ವಾಲಿ , ಲೋಕಯ್ಯಾ ಹಿರೇಮಠ, ಬಸವರಾಜ ಹಿರೇಮಠ …
Read More »ಮಕ್ಕಳ-ಶಿಕ್ಷಕರ ಆರೋಗ್ಯಕ್ಕಿಂತ ಇನ್ನಾವ ಕಾರ್ಯಕ್ರಮವೂ ಮುಖ್ಯವಲ್ಲ : ಸುರೇಶ್ ಕುಮಾರ್
ಬೆಂಗಳೂರು: ಕೋವಿಡ್ ಕಾಲದಲ್ಲಿ ಅನುಷ್ಠಾನಕ್ಕೆ ಬಂದ ವಿದ್ಯಾಗಮ ಯೋಜನೆಯ ಕಾರಣದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸಲು ಆಗ್ರಹಗಳು ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. https://m.facebook.com/story.php?story_fbid=3912186332142016&id=100000520624203 ವಿಶೇಷವಾಗಿ ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸುತ್ತಿರುವ ವಿದ್ಯಾಗಮ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇಂದು ಬಹುಪಾಲು ನಮ್ಮ ಸರ್ಕಾರಿ ಶಾಲೆಗಳಿಗೆ …
Read More »ಶಾಲೆ ಪ್ರಾರಂಭ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದೇನು?
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಲೆಗಳನ್ನು ಆರಂಭಿಸುವ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕೋವಿಡ್ -19 ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಪರ ಮತ್ತು ವಿರೋಧ ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ಮಾಧ್ಯಮಗಳು ಸಹ ಅಭಿಯಾನವನ್ನು ಪ್ರಾರಂಭಿಸಿರುವುದನ್ನು ಗಮನಿಸಿರುತ್ತೇನೆ. ಅಲ್ಲದೆ ಈ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಹ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿರುತ್ತಾರೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತ ದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸುವ ಮುನ್ನ …
Read More »ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ!
ಬೆಂಗಳೂರು, ಅಕ್ಟೋಬರ್ 09: ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 2020ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು www.karresults.nic.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪೂರಕ ಪರೀಕ್ಷೆಯಲ್ಲಿ ಒಟ್ಟು 2,12,678 ವಿದ್ಯಾರ್ಥಿಗಳು ಹಾಜರಾಗಿದ್ದರು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ 87,784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
Read More »ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಯುಜಿಸಿ ಪ್ರಸ್ತಾವಿಕ ಮಾರ್ಗಸೂಚಿ ಪ್ರಕಟ…!
ನವದೆಹಲಿ : ಕೋವಿಡ್ 19 ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಶೈಕ್ಷಣಿಕ ವರ್ಷದ ಕಾಲೇಜು ತರಗತಿ ನವೆಂಬರ್ 1ರಿಂದ ಶುರುವಾಗಲಿದೆ. ಈ ಸಂಬಂಧ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್(UGC) ಪ್ರಸ್ತಾವಿತ ಮಾರ್ಗಸೂಚಿ ಪ್ರಕಟಿಸಿದೆ. ಇದರಂತೆ, ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ನವೆಂಬರ್ 1ರಿಂದ ಕಾಲೇಜು ತರಗತಿಗಳು ಪ್ರಾರಂಭವಾಗಲಿದ್ದು, ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ 8 ರಿಂದ 23ರ ನಡುವೆ ನಡೆಯಲಿದೆ. ಎರಡನೇ ಸೆಮಿಸ್ಟರ್ ಏಪ್ರಿಲ್ 5ರಿಂದ …
Read More »ಸೆಪ್ಟಂಬರ್ 21ರಿಂದ ಕೇವಲ ಶಾಲೆಗಳು ಮಾತ್ರ ತೆರೆಯಲಿದೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ
ಮೈಸೂರು: ಸೆಪ್ಟಂಬರ್ 21ರಿಂದ ಕೇವಲ ಶಾಲೆಗಳು ತೆರೆಯಲಿದೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸೆ. 30ರೊಳಗೆ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ಕೇಂದ್ರದ ಗ್ರೀನ್ ಸಿಗ್ನಲ್ ಬರುವವರೆಗೂ ತರಗತಿಗಳ ಆರಂಭ ಇಲ್ಲ. ಕೇವಲ ಒಂದು ಅವಧಿಯ ಶುಲ್ಕವನ್ನು ಮಾತ್ರ ಖಾಸಗಿ ಶಾಲೆ ಪಡೆಯಬೇಕು. ಒಂದು ವೇಳೆ ಸಮಸ್ಯೆ ಆದರೆ ಡಿಡಿಪಿಐ, ಬಿಇಒ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಈಗಾಗಲೇ …
Read More »ಮಾನ್ಯ ಗೃಹ ಸಚಿವರ ಗಮನಕ್ಕೆ
ವಿಷಯ: ಪರೀಕ್ಷಾ ಕೇಂದ್ರ ಬದಲಿಸುವ ಕುರಿತು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುವುದೆನೆಂದರೆ ದಿನಾಂಕ ೨೦-೦೯-೨೦೨೦ ರಂದು ನಡೆಯುವ ನಾಗರಿಕ ಪೊಲೀಸ್ ಹುದ್ದೆಯ ಪರೀಕ್ಷೆಯು ನಡೆಯಲಿದ್ದು ಆದರೆ ಪರೀಕ್ಷಾ ಕೇಂದ್ರ ಗಳು ಬಹಳ ದೂರವಾಗಿರತ್ತವೆ ನಾಗರಿಕ ಪೊಲೀಸ್ ಹುದ್ದೆಯ ಆಕಾಂಕ್ಷಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಲು ಕಷ್ಟಕರ ವಾಗುತ್ತಿದೆ ಮತ್ತು ಆ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಬೀಳುತ್ತಿದ್ದು ಅಭ್ಯರ್ಥಿಗಳು ಹೊಗಲು ಹಿಂದೇಟು ಹಾಕುತ್ತಿದ್ದಾರೆ ಆದ ಕಾರಣ ಪರೀಕ್ಷಾ ಕೇಂದ್ರ ಗಳನ್ನು ಬದಲಿಸಿ ಆಯಾ …
Read More »ಶಾಲೆಗಳು ಕೊರೋನಾ ಹೆಸರಿನಲ್ಲಿ ಹೆಚ್ಚಿನ ಶುಲ್ಕ ಪಡೆದರೆ ಶಿಸ್ತುಕ್ರಮ : ಸಚಿವ ಎಸ್. ಸುರೇಶ್‌ಕುಮಾರ್
ಧಾರವಾಡ: ‘ಶಾಲಾ ಶುಲ್ಕ ಭರಿಸಿಕೊಳ್ಳುವುದರ ಜತೆಗೆ ಸ್ಯಾನಿಟೈಸೇಷನ್ ನೆಪದಲ್ಲಿ ಕೊರೊನಾ ಶುಲ್ಕವನ್ನು ಪಾಲಕರಿಂದ ವಸೂಲು ಮಾಡಿದ್ದು ಕಂಡುಬಂದರೆ, ಅಂಥ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕೋವಿಡ್ ಕಾನೂನಿನಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದರು. ‘ವಿದ್ಯಾಗಮ’ ಅನುಷ್ಠಾನ ಕುರಿತು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ಶುಲ್ಕ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ …
Read More »ಪದವಿ ಶೈಕ್ಷಣಿಕ ವರ್ಷ ಆರಂಭ: ಸೆಪ್ಟೆಂಬರ್ 1ರಿಂದ ಆನ್ ಲೈನ್ ||ಅಕ್ಟೋಬರನಿಂದ ನೇರ(ಆಫ್‍ಲೈನ್) ತರಗತಿ .
ಬೆಂಗಳೂರು, ಆ.26: ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ(ಆಫ್‍ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನ ಸುಬ್ರಹ್ಮಣ್ಯ ನಗರದ ವಾರ್ಡ್ ಸಂಖ್ಯೆ 66ರಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ನೇರವಾಗಿ …
Read More »ಎರಡೂ ಕೈಗಳಿಲ್ಲದಿದ್ದರೂ ಕೌಶಿಕ್ SSLC ಯಲ್ಲಿ ಫಸ್ಟ್ ಕ್ಲಾಸ್ ಪಾಸ್.
ಮಂಗಳೂರು : ಎರಡೂ ಕೈಗಳಿಲ್ಲದಿದ್ದರೂ ಕಾಲಿನಿಂದಲೇ SSLC ಪರೀಕ್ಷೆ ಬರೆದು ಶ್ಲಾಘನೆಗೆ ಪಾತ್ರವಾಗಿದ್ದ ಕೌಶಿಕ್ ಪರೀಕ್ಷೆಯಲ್ಲಿ ಮೆಚ್ಚುಗೆಯ ಅಂಕ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಕೌಶಿಕ್ ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಅಂಕ ಗಳಿಸಿದ್ದಾರೆ. ಕನ್ನಡದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 …
Read More »