ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ. ರಾಯಚೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮೀಸಲಾತಿ ಹೆಚ್ಚಳ ನಿರ್ಧಾರ ಚುನಾವಣೆ ಗಿಮಿಕ್ ಆಗಿದೆ, ಶ್ರೀಗಳು ಧರಣಿಗೆ ಕೂತಾಗಲೇ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ವಾಲ್ಮಿಕಿ ಸ್ವಾಮೀಜಿಗಳು 6 ತಿಂಗಳು ಧರಣಿ ಮಾಡಿದ್ದಾರೆ. ಈಗ ತರಾತುರಿಯಲ್ಲಿ ಸರ್ವಪಕ್ಷ ಸಭೆ ನಡೆಸಿ ಮೀಸಲಾತಿ ಹೆಚ್ಚಳ …
Read More »ಕಾಂಗ್ರೆಸ್ನಿಂದ ಮಾತ್ರ ದಲಿತ ಸಿಎಂ ಮಾಡಲು ಸಾಧ್ಯ: ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ
ರಾಯಚೂರು: ಬಿಜೆಪಿ, ಜೆಡಿಎಸ್ನಿಂದ ದಲಿತರು ಮುಖ್ಯಮಂತ್ರಿ ಆಗುವುದಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ, ಅದಕ್ಕೆ ಕಾಲಾವಕಾಶ ಬೇಕು ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಬಿಜೆಪಿ ಸರಕಾರ, ದಲಿತ ಸಮುದಾಯಗಳ ಅಭಿವೃದ್ಧಿಯ ಅನುದಾನ ಕಡಿತ ಮಾಡಿದೆ. ನಾರಾಯಣಪುರ ಬಲದಂಡೆ ನಾಲೆಯ ಸಮಗ್ರ ಆಧುನೀಕರಣದ ಹೆಸರಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ದೊಡ್ಡ …
Read More »ಮಂಚಲಾಪುರ ಗ್ರಾಮದ ರುದ್ರಭೂಮಿಯಲ್ಲಿ ಭಾಗ್ಯಲಕ್ಷ್ಮಿ ತಾಯಿ ಅಂತ್ಯಕ್ರಿಯೆ
ರಾಯಚೂರು : ಜಿಲ್ಲೆಯ ಮಂಚಲಾಪೂರ ಗ್ರಾಮದ ವೈ.ಬಿ.ಪಾಟೀಲ್ ಅವರ ಪತ್ನಿ ಭಾಗ್ಯಲಕ್ಷ್ಮಿ ಪಾಟೀಲ್ (70) ಅವರ ಅಂತ್ಯಕ್ರಿಯೆ ಇಂದು ನೆರವೇರಿತು. ಮಂಚಲಾಪೂರ ಗ್ರಾಮದಲ್ಲಿ ತೆರದ ವಾಹನದಲ್ಲಿ 11 ಗಂಟೆಗೆ ಅವರ ಮನೆಯಿಂದ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಅಗಲಿದ ತಾಯಿಗೆ ಅಂತಿಮ ನಮನ ಸಲ್ಲಿಸಿದರು. ಕೆಲದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪತಿ ವೈ.ಬಿ.ಪಾಟೀಲ್ , ಪುತ್ರರಾದ …
Read More »ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ,ಒಂದೇ ಕುಟುಂಬದ ನಾಲ್ವರು ಮೃತ.
ರಾಯಚೂರು: ಧಾರವಾಡದ ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ಬುಧವಾರ ನಸುಕಿನಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ವಿಠ್ಠಲ ನಗರದ ನಿವಾಸಿಗಳು. ಸಣ್ಣ ಗಂಗಣ್ಣ (56), ಪತ್ನಿ ಗಂಗಮ್ಮ (50), ಸಹೋದರ ಈರಣ್ಣ(40), ಮಗ ಹನುಮಂತ (20) ಮೃತರು. ಮಗಳು ಲಕ್ಷ್ಮೀ (18) ಮತ್ತು ಚಾಲಕ ಈರಣ್ಣ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. …
Read More »ಗಣೇಶ ಪ್ರತಿಷ್ಠಾಪನೆಯಲ್ಲಿ ಹಾಕಿದ ಭಕ್ತಿಗೀತೆಗಳ ಧ್ವನಿವರ್ಧಕವನ್ನು ತೆಗೆಸುವ ಸಮಯದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ತಹಶೀಲ್ದಾರ ದೌರ್ಜನ್ಯ ಖಂಡಿಸಿ: ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ
ರಾಯಚೂರು ನಗರದ ದೇವದುರ್ಗ ಜಿಲ್ಲೆಯಲ್ಲಿ ನಡೆದ ಶ್ರೀ ಗಣೇಶ ಪ್ರತಿಷ್ಠಾಪನೆಗೆ ಹಾಕಿದ್ದ ಭಕ್ತಿಗೀತೆಗಳ ಧ್ವನಿ ವರ್ಧಕ ತೆಗೆಯಲು ಪ್ರಯತ್ನಿಸಿದ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಅನಾವಶ್ಯಕವಾಗಿ ಕೇಸ್ ದಾಖಲಿಸಿದ್ದ ತಹಶೀಲ್ದಾರ ವಿರುದ್ದ ಖಂಡಿಸಿ ಗೋಕಾಕ್ ನಗರದ ಹಿಂದೂ ಜಾಗರಣ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು ಗೋಕಾಕ ನಗರದ ತಹಸೀಲ್ದಾರ್ ಮುಖಾಂತರ ಖಂಡಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಂಯೋಜಕರು ಸಮರ್ಥ್ ಖಾಸ್ನಿಸ್ …
Read More »