ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಎಲ್ಲ ಶಿಕ್ಷಕರು, ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬೆಳಗಾವಿ ಮತ್ತು ಚಿಕ್ಕೋಡಿ ಡಿಡಿಪಿಐ ಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಎಲ್ಲರಿಗೂ ವಿಶೇಷ ಸಂದೇಶ ಒಳಗೊಂಡಿರುವ ಶುಭಾಶಯ ಪತ್ರಗಳನ್ನು ವಿತರಿಸಿದ್ದಾರೆ. ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸತೀಶ ಅವರು ಎಲ್ಲ ತಾಲೂಕಿನ …
Read More »ಲೋಳಸೂರ ಸೇತುವೆಗೆ ಚಾಲನೆ; ಸಂಚಾರ ಪುನರಾರಂಭ ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
ಗೋಕಾಕ: ಕಳೆದ ಎರಡು ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡು ಸಂಪೂರ್ಣ ಕೊಚ್ಚಿ ಹೋಗಿದ್ದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಯ ದುರಸ್ತಿ ಕಾಮಗಾರಿ ಮುಕ್ತಾಯಗೊಂಡಿದ್ದು, ಸೇತುವೆಗೆ ಇಂದು ಚಾಲನೆ ನೀಡಲಾಗಿದೆ. ಇಂದಿನಿಂದ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷರು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಸೇತುವೆಯನ್ನು ಇಂದು ಉದ್ಘಾಟಿಸಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ …
Read More »ಉನ್ನತ ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ: ಆರೋಗ್ಯಸ್ವಾಮಿ ಎ.ಕೆ
ಗೋಕಾಕ ಸೆ 4 :ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಿರುವುದರಿಂದ ಉನ್ನತ ಶಿಕ್ಷಣ ಅಥವಾ ಉದ್ಯೋಗದೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದು ಬಿಸಿಇ ,ಸಿಸಿಎ ಕಾಲೇಜ ಧಾರವಾಡದ ಪ್ರಾಚಾರ್ಯ ಆರೋಗ್ಯಸ್ವಾಮಿ ಎ.ಕೆ ಹೇಳಿದರು. ಶನಿವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜ ಗೋಕಾಕ ಕೊನೆಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಪಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. …
Read More »ಲೋಳಸೂರ ಸೇತುವೆ ಪರಿಶೀಲಿಸಿದ ಶಾಸಕ ಸತೀಶ ಜಾರಕಿಹೊಳಿ; ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚನೆ
ಗೋಕಾಕ: ಕಳೆದೆರಡು ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡು ಸಂಪೂರ್ಣ ಕೊಚ್ಚಿ ಹೋಗಿದ್ದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಯ ಕಾಮಗಾರಿ ಸದ್ಯ ಮುಕ್ತಾಯಗೊಂಡಿದ್ದು, ಸೇತುವೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಸತೀಶ ಜಾರಕಿಹೊಳಿ ಅವರು ಖುದ್ದಾಗಿ ಸೇತುವೆಯನ್ನು ಪರಿಶೀಲನೆ ಮಾಡಿ, ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಳೆಯಿಂದ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. …
Read More »ಬೆಳಗಾವಿಯ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ಇಲ್ಲಿನ ಉದ್ಯಮಬಾಗ್ ನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ, ಕಾಲೇಜಿನಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ತರಬೇತಿಯ ಬಗ್ಗೆ ಸತೀಶ ಮಾಹಿತಿ ಪಡೆದರು. ಯಂತ್ರೋಪಕರಣಗಳ ಆಪರೇಟಿಂಗ್ ಕುರಿತು ಸಹ ಪರಿಶೀಲಿಸಿದರು. ಮ್ಯಾನುಪ್ಯಾಕ್ಚರಿಂಗ್ ಟೆಕ್ನಾಲಜಿ, ಕನ್ಸ್ಟ್ರಕ್ಷನ್ ಟೆಕ್ನಾಲಜಿ, ಇಂಡಸ್ಟ್ರಿಯಲ್ ಆಟೊಮೇಶನ್, ಆಟೊಮೇಟಿವ್ ಟೆಕ್ನಾಲಜಿ, ಎನರ್ಜಿ ಮ್ಯಾನೇಜ್ ಮೆಂಟ್, ವೆಲ್ಡಿಂಗ್ ಟೆಕ್ನಾಲಜಿ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ಕುರಿತು ಕಾಲೇಜಿನ …
Read More »ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ :ಅರಭಾಂವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ
ಮೂಡಲಗಿ: ಆರೋಗ್ಯಯುತ ಶರೀರವಿದ್ದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾದ್ಯವಾಗುವದು. ಜನ ಸಾಮಾನ್ಯರಿಗೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಸರಕಾರವು ಆರೋಗ್ಯ ಇಲಾಖೆಗೆ ನೀಡಿರುವ ಸೌಲಭ್ಯಗಳನ್ನು ಉಪಯೋಗ ಪಡೆದುಕೊಳ್ಳ ಬೇಕು ಎಂದು ಅರಭಾಂವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅವರು ಪಟ್ಟಣದ ಮೇಲ್ದರ್ಜೆಗೆರಿದ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಸೊನೋಗ್ರಾಫಿ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಾಧುನಿಕ ರೋಗ ಪರೀಶೋಧಕ ಯಂತ್ರದಿಂದಾಗಿ ಸ್ತ್ರೀಯರ ಪ್ರಸವ ಪೂರ್ವ ನಂತರದ ದಿನಗಳಲ್ಲಿ …
Read More »ಡಾ.ಎನ್.ಎಸ್.ಹರ್ಡೀಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಪ್ರಿಯಾಂಕಾ ಜಾರಕಿಹೊಳಿ
ಗೋಕಾಕ : ‘ ಸೇವಾದಳವನ್ನು ನಾಡಿನಾದ್ಯಂತ ಕಟ್ಟಿದ ಡಾ.ಎನ್.ಎಸ್.ಹರ್ಡೀಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ‘ಎಂದು ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಘಟಪ್ರಭಾದ ಡಾ.ಎನ್.ಎಸ್.ಹರ್ಡೀಕರ್ ಸೇವಾದಳ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಸೇವಾದಳದ ಪ್ರಪ್ರಥಮ ಮಹಿಳಾ ಸಮರ್ಥ್ 5 ದಿನದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ‘ಸೇವಾದಳ ಕೇಂದ್ರದಲ್ಲಿ ಹೆಚ್ಚು ಹೆಚ್ಚು ಕಾರ್ಯಕರ್ತರಿಗೆ ತರಬೇತಿ ನೀಡುವುದರ ಮೂಲಕ ಸತ್ಯ, ಅಹಿಂಸೆ …
Read More »ಅಭಿವೃದ್ಧಿ ಕಾರ್ಯಗಳೇ ನಮ್ಮ ಸಾಧನೆಯನ್ನು ಹೇಳುತ್ತವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
ಬೆಳಗಾವಿ: ನಗರದ 45ನೇ ವಾರ್ಡ್ ನ ಹಿಂಡಾಲ್ಕೊ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ನಾಯ್ಕ್ ಪರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವ ಹಾಗೂ ಫೀರೋಜ್ ಸೇಠ್ ಶಾಸಕರಾಗಿದ್ದ ಸಂದರ್ಭದಲ್ಲಿ ಸಮೀಪದ ಬಸವನಕೊಳ್ಳ ಅರಣ್ಯಭೂಮಿಯಲ್ಲಿ ನೀರಿನ ಶುದ್ಧೀಕರಣ ಘಟಕ ನಿರ್ಮಿಸುವ ಮೂಲಕ 45ನೇ ವಾರ್ಡ್ ಸೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ. …
Read More »Gokak BREAKING:ಪೆಟ್ರೋಲ್ ಕಳ್ಳನಿಗೆ ಬುದ್ಧಿ ಹೇಳಿದಕ್ಕೆ ಬಲಿಯಾದ ಅಮಾಯಕ!
ಗೋಕಾಕ : ಆತ ತಿಂದುಂಡು ತಿರುಗೋ ಪೋಕರಿ. ಶೋಕಿಯ ಜೀವನಕ್ಕೆ ಬಿದ್ದಿದ್ದ ಆತ ರಾತ್ರಿಯಾದ್ರೆ ಪೆಟ್ರೊಲ್ ಕಳ್ಳತನ ಮಾಡೋ ಖಯಾಲಿ ರೂಢಿ ಮಾಡಿಕೊಂಡಿದ್ದ. ನಿಂತಿರುವ ಗಾಡಿಯ ಪೆಟ್ರೋಲ್ ತೆಗೆದು ಅದನ್ನ ತನ್ನ ಗಾಡಿಗೆ ಹಾಕಿ ಓಡಿಸುತ್ತಿದ್ದ ಖದೀಮ. ಮಾಡಬಾರದ ಕೆಲಸ ಮಾಡುವಾಗ ಸಿಕ್ಕಿಬಿದ್ದ ಖದೀಮ ತನ್ನ ಮರ್ಯಾದೆ ಉಳಿಸಿಕೊಳ್ಳೋಕೆ ನೋಡಿದವನನ್ನೆ ಕೊಂದು ತಿಪ್ಪೆಯಲ್ಲಿ ಹೆಣ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನೂ ಚಿಗುರು ಮೀಸೆ. ಯಳಸು ವಯಸ್ಸು ಅತ್ತ ಜೀವನ …
Read More »ರಾಯಭಾಗದ ಹೆಸ್ಕಾಂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ!
ಚಿಂಚಲಿ: ವಿದ್ಯುತ್ ಟ್ರಾನ್ಸಫಾರ್ಮರ ಅಳವಡಿಸಲು ಮತ್ತು ವಿದ್ಯುತ ಸಂಪರ್ಕ ನೀಡಲು ರೈತರು ಹಾಗೂ ಸಾರ್ವಜನಿಕರಿಂದ ಲಂಚವನ್ನು ಕೇಳಲಾಗುತ್ತಿದೆ ಮತ್ತು ಲಂಚ ನೀಡದಿದ್ದರೆ ವಿನಾಕಾರಣ ಪರವಾನಿಗೆಯನ್ನು ನೀಡಲು ವಿಳಂಬ ಮಾಡಲಾಗುತ್ತದೆ ಎನ್ನುವ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಯಬಾಗ ತಾಲೂಕಿನ ಹೆಸ್ಕಾಂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ವತಿಯಿಂದ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲಾಗಿದೆ. ರಾಯಬಾಗ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಶಾಖಾಧಿಕಾರಿಗಳ …
Read More »