Breaking News

ಬೆಳಗಾವಿ

*ಮೂಡಲಗಿ ವಲಯದ 29 ಪ್ರೌಢ ಶಾಲೆಗಳಿಂದ ಶೇ 100 ರಷ್ಟು ಫಲಿತಾಂಶ*

*ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ವಿತರಣೆ*      *ಗೋಕಾಕ* : ಶೈಕ್ಷಣಿಕ ಕ್ಷೇತ್ರದಲ್ಲಿ ಮೂಡಲಗಿ ವಲಯವು ಉತ್ತಮ ಸಾಧನೆ ಮಾಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಲು ಶಿಕ್ಷಕರು ಶ್ರಮಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.    ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ …

Read More »

*ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಆರ್ ಡಿ ಹುದ್ದಾರ ಅವರಿಗೆ ಸತ್ಕಾರ ಸಮಾರಂಭ*

ಗೋಕಾಕ : ನಗರದ ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯ ವತಿಯಿಂದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಆರ್ ಡಿ ಹುದ್ದಾರ ಅವರಿಗೆ ವ್ಯವಸ್ಥಾಪಕ ನಿರ್ದೇಶಕರಾದ ಸನತ್ ಜಾರಕಿಹೊಳಿ ಅವರು ಸತ್ಕಾರ ಮಾಡಿದರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಆರ್ ಡಿ ಹುದ್ದಾರ ಅವರು ಈ ಹಿಂದೆ ಗೋಕಾಕದ ಪ್ರತಿಷ್ಠಿತ ಎಸ್ಎಲ್ ಜೆ ಕಾನೂನು ಮಹಾವಿದ್ಯಾಲಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಗೋಕಾಕ ತಾಲೂಕಿನಲ್ಲೇ ಪ್ರಥಮ ಹೈಕೋರ್ಟ್ …

Read More »

ವಿಕಲಚೇತನ ಫಲಾನುಭವಿಗಳಿಗೆ ಗುರುತಿನ ಯುಡಿಐಡಿ ಕಾರ್ಡ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ* : ವಿಕಲಚೇತನ ಗುರುತಿನ ಯುಡಿಐಡಿ ಕಾರ್ಡ ದೇಶಾದ್ಯಂತ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತಿದ್ದು, ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸಮನ್ವಯ ಶಿಕ್ಷಣ, ಪುನರ್ವಸತಿ ಯೋಜನೆ, ಪಿಂಚಣಿ, ರೈಲ್ವೆ ರಿಯಾಯತಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ ಪೂರಕವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.      ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಜರುಗಿದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ವಿತರಿಸಿ ಮಾತನಾಡಿದ …

Read More »

*ಸ್ವಾತಂತ್ರ್ಯೋತ್ಸವದ ಅಂಗವಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ*

ಗೋಕಾಕ : ಸ್ವಾತಂತ್ರ್ಯ ದಿನಾಚರಣೆ ನಿಮಿತ್ತವಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನಗರದ ಸಭಾ ಭವನದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಆಯೋಜಿಸಿದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕೆಐಎಚ್ಎಸ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ನೆರವೇರಿಸಿದರು. ಈ ಶಿಬಿರವನ್ನು ಗೋಕಾಕ ನಗರದ ಅನೇಕ ಸಾರ್ವಜನಿಕರು , ಮಕ್ಕಳ, ವೃದ್ದರು ಸದುಪಯೋಗ ಪಡಿಸಿಕೊಂಡರು. ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರಾದ ರಿಯಾಜ್ ಚೌಗಲಾ , …

Read More »

*ಮಹಾನ್ ಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬೇಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ*

*ರಾಜಾಪೂರ ಗ್ರಾಮದಲ್ಲಿ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಈ ಹೇಳಿಕೆ*        *ಮೂಡಲಗಿ* : ಸಂತ ಶ್ರೇಷ್ಠ ಕನಕದಾಸ ಮತ್ತು ಶೂರ ಸಂಗೊಳ್ಳಿ ರಾಯಣ್ಣನಂತಹ ಅಪ್ರತಿಮ ಸಾಧಕರನ್ನು ಪಡೆದಿರುವುದು ಹಾಲುಮತ ಸಮಾಜದ ಸೌಭಾಗ್ಯವಾಗಿದೆ. ಆದರೂ ಇಂತಹ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೇ ಎಲ್ಲ ಸಮಾಜಗಳು ಇವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕಾದ ಅಗತ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. …

Read More »

*ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಬದ್ಧ : ಶಾಸಕ ಬಾಲಚಂದ್ರ ಜಾರಕಿಹೊಳಿ*

ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ      *ಗೋಕಾಕ* : ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ರೈತರ ಸಹಕಾರದೊಂದಿಗೆ ಶ್ರಮಿಸಿ ಕಾರ್ಖಾನೆಯನ್ನು ಮಾದರಿಯನ್ನಾಗಿ ಪರಿವರ್ತಿಸುವುದಾಗಿ ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.      ಸೋಮವಾರದಂದು ಇಲ್ಲಿಗೆ ಸಮೀಪದ ಪ್ರಭಾಶುಗರ್ಸ್‍ದಲ್ಲಿ ಜರುಗಿದ ಕಾರ್ಖಾನೆಯ ನೂತನ ಆಡಳಿತ ಮಂಡಳಿ ಸದಸ್ಯರ …

Read More »

ಗ್ಯಾರಂಟಿ ಯೋಜನೆ ಟೀಕಿಸಿದವರಿಗೆ ತಕ್ಕ ಉತ್ತರ ನೀಡಿದ್ದೇವೆ ಎಂದ ಸಚಿವ ಸತೀಶ್‌ ಜಾರಕಿಹೊಳಿ

ಯಮಕನಮರಡಿ: ಕಾಂಗ್ರೆಸ್‌ ಪಕ್ಷದ 135 ಅಭ್ಯರ್ಥಿಗಳು ಗೆಲುವು ಸಾಧಿಸಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಲು ಕಾರಣಿಕರ್ತರಾದ ಮುಖಂಡರಿಗೆ, ಮತದಾರರಿಗೆ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದರು. ಯಮಕನಮರಡಿ ಮತಕ್ಷೇತ್ರದ ಅರಳಿಕಟ್ಟಿ ಗ್ರಾಮದ ಮುಖಂಡ ಕರುಣಾಕರ ಶೆಟ್ಟಿಯವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆಗಳ ಸಭೆ ಹಾಗೂ ಬನ್ನಿಬಾಗಿ, ಚಿಲಬಾಂವಿ, ಜಾರಕಿಹೊಳಿ ಗ್ರಾಮಸ್ಥರಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ …

Read More »

*ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮನಿರ್ದೇಶಕ ಸದಸ್ಯರಿಂದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸತ್ಕಾರ!*

ಗೋಕಾಕ : ವಿಶ್ವಕರ್ಮ ಅಭಿವೃದ್ಧಿ ನಿಗಮ ಬೆಳಗಾವಿ ಜಿಲ್ಲೆಯ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆಯಾದ ಯಮಕನಮರಡಿ ಮತಕ್ಷೇತ್ರದ ಹೊನಗ ಗ್ರಾಮದ ಬಸವರಾಜ್ ಸುತಾರ್ ಅವರು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ನೂತನವಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಬಸವರಾಜ್ ಸುತಾರ ಅವರು ಹಾಗೂ ಸಮಾಜದ ಮುಖಂಡರು ಸೇರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸತ್ಕರಿಸಿದರು. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ …

Read More »

ವಿದ್ಯಾರ್ಥಿಗಳು ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ವೃದ್ಧಿಸಿಕೊಳ್ಳಿ : ಈರಸಂಗ್ಯಯಾ ಬಾಗೋಜಿಮಠ

ಯುವ ನಾಯಕ ಸನತ್ ಜಾರಕಿಹೊಳಿ ಅವರಿಂದ “ಕೌಶಲ್ಯ ಅಭಿವೃದ್ಧಿ” ಕೃತಿ ಲೋಕಾರ್ಪಣೆ ಗೋಕಾಕ ಅ 11 : ವಿದ್ಯಾರ್ಥಿಗಳು ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ವೃದ್ಧಿಸಿಕೊಂಡು ಪ್ರತಿಭಾವಂತರಾಗಿರೆಂದು ಕೌಶಲ್ಯ ಅಭಿವೃದ್ಧಿ ತರಬೇತಿದಾರ ಹಾಗೂ ಲೇಖಕ ಈರಸಂಗ್ಯಯಾ ಬಾಗೋಜಿಮಠ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾಲೇಜಿನ ಹಳೆಯ ವಿದ್ಯಾರ್ಥಿ ಈರಸಂಗ್ಯಯಾ ಬಾಗೋಜಿಮಠ ರಚಿಸಿದ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ …

Read More »

*ಜನ ಜಾಗೃತಿ ಮೂಡಿಸಲು ಹಳ್ಳಿ- ಹಳ್ಳಿಗೂ ಕನಕದಾಸರ ಮಹಾಪೂಜೆ ನಡೆಸುತ್ತಿರುವುದು ಶ್ಲಾಘನೀಯ; ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ*

ಗೋಕಾಕ್- ದೇಶಪ್ರೇಮಿ ಶೂರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ಅಧಿಕ ಮಾಸದಲ್ಲಿ ಕಪರಟ್ಟಿಯ ಬಸವರಾಜ ಹಿರೇಮಠ ಅವರು ಜನ ಜಾಗೃತಿ ಮೂಡಿಸಲು ಹಳ್ಳಿ- ಹಳ್ಳಿಗೂ ಕನಕದಾಸರ ಮಹಾಪೂಜೆ ನಡೆಸುತ್ತಿರುವುದು ಶ್ಲಾಘನೀಯ ಎಂದು ಯುವ ಧುರೀಣ ಸರ್ವೊತ್ತಮ ಜಾರಕಿಹೊಳಿ ಪ್ರಶಂಶಿಸಿದರು. ಶನಿವಾರ ನಗರದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರತಿ ಹಳ್ಳಿ- ಹಳ್ಳಿಗಳಲ್ಲಿಯೂ ನಡೆಯಬೇಕು. ಇದರಿಂದ ಇಂದಿನ ಯುವ ಜನಾಂಗಕ್ಕೆ ಮಹಾನ್ …

Read More »