ಬೆಳಗಾವಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ ತಾಲೂಕುಗಳ 8 ಸೇತುವೆಗಳು ಜಲಾವೃತಗೊಂಡಿದ್ದು, ನದಿ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಡೂರು-ಕಲ್ಲೋಳ ಸೇತುವೆ ಮುಳಗಡೆಯಾಗಿದೆ. ಕೃಷ್ಣಾ ನದಿಗೆ 70 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಪ್ರಮಾಣದ ಒಳ ಹರಿವು ಬಂದಿದೆ. ದೂದಗಂಗಾ, ವೇದಗಂಗಾ ಹಾಗೂ …
Read More »KSRTC ಟ್ರಾಫಿಕ್ ಕಂಟ್ರೋಲರ್ನ ಎಸಿಬಿ ಬಲೆಗೆ.
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಡಿಪೋದ ಕೆಎಸ್ಆರ್ಟಿಸಿ ಟ್ರಾಫಿಕ್ ಕಂಟ್ರೋಲರ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟ್ರಾಫಿಕ್ ಕಂಟ್ರೋಲರ್ ಬಿ.ಎಸ್.ವೆಂಕಟಾಚಲಪತಿ ಸ್ವಯಂ ನಿವೃತ್ತಿ ಪ್ರಮಾಣ ಪತ್ರ ನೀಡಲು ಸುಮಾರು 50.000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡ್ರೈವರ್ ಕಂ ಕಂಡಕ್ಟರ್ ಜಿ.ಎನ್.ವೆಂಕಟಾಚಲಪತಿಯಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 50.000 ರೂ. ನಲ್ಲಿ ಇಂದು (ಜುಲೈ 21) 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಿ.ಎಸ್.ವೆಂಕಟಾಚಲಪತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರದ ಎಸಿಬಿ ಅಧಿಕಾರಿಗಳು ಬಿ.ಎಸ್.ವೆಂಕಟಾಚಲಪತಿಯನ್ನು …
Read More »ಗೋವುಗಳನ್ನು ರಕ್ಷಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು.
ಘಟಪ್ರಭಾ : ಹಬ್ಬಕಾಗಿ ಬಲಿ ಕೊಡಲು ತಂದಿದ್ದ ಹಸುಗಳನ್ನು ಸಾರ್ವಜನಿಕರ ಸಹಕಾರದಿಂದ ಮೂರು ಗೋವುಗಳನ್ನು ರಕ್ಷಿಸಿದ ಘಟನೆ ಬುಧವಾರ ಮುಂಜಾನೆ ಗೋಕಾಕ ತಾಲೂಕಿನ ಶಿಂಗಳಾಪೂರ ಗ್ರಾಮದಲ್ಲಿ ನಡೆದಿದೆ. ಹಬ್ಬಕ್ಕಾಗಿ ಬಲಿ ಕೊಡಲು ಸುಮಾರು ಏಳೆಂಟು ಹಸುಗಳನ್ನು ಅಕ್ರಮವಾಗಿ ತಂದಿಟ್ಟಿರುವ ಖಚಿತ ಮಾಹಿತಿ ಪಡೆದ ಘಟಪ್ರಭಾ ಪೊಲೀಸರು, ಗೋಕಾಕದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ಮೂರು ಹಸುಗಳನ್ನು ರಕ್ಷಿಸಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುವ …
Read More »ಇನ್ನೂ ಒಂದು ವಾರ ಭಾರಿ ಮಳೆಯಾಗುವ ಸಾಧ್ಯತೆ!
ಬೆಂಗಳೂರು, ಜು.21- ಕಳೆದ ಎಂಟತ್ತು ದಿನಗಳಿಂದ ರಾಜ್ಯದ ಹಲವೆಡೆ ಬೀಳುತ್ತಿರುವ ಮಳೆ ಇದೇ ರೀತಿ ಇನ್ನೂ ಒಂದು ವಾರ ಕಾಲ ಮುಂದುವರಿಯುವ ಮುನ್ಸೂಚನೆಗಳಿವೆ. ಮುಂಗಾರು ಚೇತರಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಮಳೆ ಕೊರತೆ ನಿವಾರಣೆಯಾಗಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಆದರೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನ ಹಲವೆಡೆ …
Read More »ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನೇ ಕೊಂದ ಅಪ್ಪ!
ಧಾರವಾಡ: ಮದ್ಯಪಾನ ಮಾಡಲು ಹಣ ನೀಡುವಂತೆ ಪದೇ ಪದೇ ಪೀಡಿಸುತ್ತಿದ್ದ ಮಗನನ್ನು ತಂದೆ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ತೆಲುಗರ ಓಣಿಯಲ್ಲಿ ನಡೆದಿದೆ. ತಂದೆ ಫಕೀರಪ್ಪ ಹಿರೇಕುಂಬಿ ತನ್ನ ಮಗ ಬಸವರಾಜ ಹಿರೇಕುಂಬಿ (36)ಯನ್ನು ಕೊಲೆ ಮಾಡಿದ್ದಾನೆ. ಕುಡಿಯಲು ಹಣ ನೀಡುವಂತೆ ನಿತ್ಯ ಮಗ ಪೀಡಿಸುತ್ತಿದ್ದ ಎನ್ನಲಾಗಿದ್ದು, ಕಳೆದ ರಾತ್ರಿ ಇದೇ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ ಆರಂಭವಾಗಿದೆ. ಕೊಲೆಯಾದ ಮಗ ಬಸವರಾಜ್, ತಾಯಿಯ ಮೇಲೆ ಹಲ್ಲೆ …
Read More »ನಾಯಕತ್ವ ಬದಲಾವಣೆ ಚರ್ಚೆ,ಸಚಿವ ಶ್ರೀರಾಮುಲುಗೆ ದೆಹಲಿ ವರಿಷ್ಠರು ಬುಲಾವ್ .
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆ, ವಿವಿಧ ಮಠಾಧೀಶರ ಭೇಟಿ, ಶಾಸಕಾಂಗ ಸಭೆ ರದ್ದು, ಜುಲೈ 26ರ ಗಡುವು.. ಎಲ್ಲದರ ಮಧ್ಯೆ ಸಚಿವ ಶ್ರೀರಾಮುಲುಗೆ ದೆಹಲಿ ವರಿಷ್ಠರು ಬುಲಾವ್ ನೀಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಇಂದು ಬೆಳಗ್ಗೆ ದೆಹಲಿಗೆ ಭೇಟಿ ನೀಡಿದ್ದಾರೆ. ಸಚಿವರಿಗೆ ದೆಹಲಿ ಬಿಜೆಪಿ ವರಿಷ್ಠರೇ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ತಾರಕ್ಕೇರಿರುವ ಸಂದರ್ಭದಲ್ಲಿ ಹೈಕಮಾಂಡ್ ಬುಲಾವ್ ಬಿಜೆಪಿಯ ಎರಡೂ …
Read More »ಮಠಮಾನ್ಯಗಳು ಸಾಮಾಜಿಕ ಭಾಗವಾಗಬೇಕೆ ಹೊರತು, ಒಬ್ಬ ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲಬಾರದು .
ಮೈಸೂರು : ಸ್ವಯಂಕೃತ ಅಪರಾಧಿಂದ ನೀವೂ ಜೈಲು ಪಾಲಾದ್ರಿ. ನಿಮ್ಮ ಕುಟುಂಬ ಮಾಡಿದ ತಪ್ಪಿಗೆ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ್ರಿ. ಇದಕ್ಕಾಗಿ ಬಿಜೆಪಿ ಪಕ್ಷ ನಿಮ್ಮನ್ನ 6 ವರ್ಷ ಉಚ್ಚಾಟನೆ ಮಾಡ್ತು. ಆ ವೇಳೆ ಕೆಜಿಪಿ ಪಕ್ಷ ಕಟ್ಟಿದ್ರಿ, ಈ ವೇಳೆ ಯಾರು ಬಂದ್ರು.? ಯಾವ ಮಠಾಧೀಶರು ನಿಮ್ಮ ಪರವಾಗಿ ನಿಂತ್ರು ಹೇಳಿ.? ಮಠಮಾನ್ಯಗಳು ಸಾಮಾಜಿಕ ಭಾಗವಾಗಬೇಕೆ ಹೊರತು, ಒಬ್ಬ ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲಬಾರದು ಎಂಬುದಾಗಿ ಎಂ.ಎಲ್.ಸಿ ವಿಶ್ವನಾಥ್ ಮಠಾಧೀಶರ …
Read More »ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ರದ್ದು!
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ. ಜುಲೈ 25 ರಂದು ಸಿಎಂ ಯಡಿಯೂರಪ್ಪ ಶಾಸಕಾಂಗ ಸಭೆಯಲ್ಲಿ ಪ್ರಮುಖ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದೆಲ್ಲಾ ಹೇಳಲಾಗಿತ್ತು. ಸ್ವಾಮೀಜಿಗಳು ಕೂಡ ಸಿಎಂ ಬೆನ್ನಿಗೆ ನಿಂತು ಬಿ.ಎಸ್.ವೈ. ಬದಲಾವಣೆ ಮಾಡಿದ್ರೆ ಸರಿ ಇರಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದು, ಈ ರೀತಿ ಅನೇಕ ಬೆಳವಣಿಗೆಗಳ ನಡುವೆ ಬಿಜೆಪಿಯಲ್ಲಿ ತೆರೆಮರೆಯಲ್ಲೇ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಲು …
Read More »ಗ್ಯಾಂಗ್ ವಾರ್, ಹೆದ್ದಾರಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಹೈಟೆಕ್ ದರೋಡೆಕೋರರ ಬಂಧನ.
ಚಿಕ್ಕಮಗಳೂರು: ಗ್ಯಾಂಗ್ ವಾರ್, ಹೆದ್ದಾರಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಹೈಟೆಕ್ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Read More »ಮಾರ್ಗಸೂಚಿ ಅನುಸರಿಸಿ ಬಕ್ರೀದ್ ಹಬ್ಬ ಆಚರಿಸಿ: ಡಿಸಿ ಎಮ್.ಜಿ.ಹಿರೇಮಠ ಆದೇಶ
ಬೆಳಗಾವಿ: ಬೆಳಗಾವಿ ಜಿಲ್ಲೆಯಾದ್ಯಂತ (ಬೆಳಗಾವಿ ತಾಲೂಕು ಹೊರತುಪಡಿಸಿ) ಬಕ್ರೀದ್ ಹಬ್ಬವನ್ನು ಆಚರಿಸಲಿರುವ ಪ್ರಯುಕ್ತ ಜು.21 ರ ಬೆಳಿಗ್ಗೆ 06 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲ ಮದ್ಯದ ಅಂಗಡಿ ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಮ.ಜಿ.ಹಿರೇಮಠ ಅವರು ಸೂಚಿಸಿರುತ್ತಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಮಾಲೀಕರು ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮದ್ಯದ ಅಂಗಡಿಗಳನ್ನು ಮತ್ತು …
Read More »