Breaking News

ಅಂತರಾಷ್ಟ್ರೀಯ

ಸರ್ಕಾರಿ ಕಛೇರಿಗಳಲ್ಲಿ ಫೋಟೋ ಹಾಗೂ ವಿಡಿಯೋಗ್ರಫಿ ನಿಷೇಧ; ಭ್ರಷ್ಟಾಚಾರ, ಲಂಚಬಾಕ ಅಧಿಕಾರಿಗಳಿಗೆ ಅನುಕೂಲವಾಯಿತಾ?

ಸರ್ಕಾರಿ ಕಛೇರಿಗಳಲ್ಲಿ ಫೋಟೋ ಹಾಗೂ ವಿಡಿಯೋಗ್ರಫಿಯನ್ನು ನಿಷೇಧಿಸಿ ಆಡಳಿತ ಸುಧಾರಣಾ ಇಲಾಖೆ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಈ ರೀತಿ ಮೊಬೈಲ್‌ ಮೂಲಕ ತೆಗೆದ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಇದರಿಂದ ಲಂಚಬಾಕ ಅಧಿಕಾರಿಗಳಿಗೆ ಅನುಕೂಲವಾಗಲಿದೆ. ಕಡೆ ಪಕ್ಷ ಈವರೆಗೆ ಲಂಚ ತೆಗೆದುಕೊಳ್ಳುತ್ತಿರುವ ತಮ್ಮ ಫೋಟೋ …

Read More »

ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಸೇರಿದಂತೆ ನಾಲ್ವರ ರಾಜ್ಯಸಭೆಗೆ ನಾಮನಿರ್ದೇಶನ!

ನವದೆಹಲಿ: ಜನಪ್ರಿಯ ಸಂಗೀತ ಸಂಯೋಜಕ ಇಳಯರಾಜಾ ಮತ್ತು ಮಾಜಿ ಒಲಿಂಪಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪಿ.ಟಿ.ಉಷಾ, ಧರ್ಮಸ್ಧಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ಅವರನ್ನು ಅಭಿನಂದಿಸಿದ್ದಾರೆ. ಇಳಯರಾಜಾ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ‘ಇಳಯರಾಜಾ ಜೀ ಅವರ ಸೃಜನಶೀಲ ಪ್ರತಿಭೆ ತಲೆಮಾರುಗಳಾದ್ಯಂತ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ. ಅವರ ಕೃತಿಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ. ಅಷ್ಟೇ …

Read More »

ಫೇಸ್ ಬುಕ್, ವಾಟ್ಸಾಪ್ ಸೇವೆ ಸರಿಯಾಗಿದ್ದು, ಬಳಕೆದಾರರು ನಿಟ್ಟುಸಿರು!

ನವದೆಹಲಿ: ಜನಪ್ರಿಯ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಹಲವು ಜಾಲತಾಣಗಳ ಸರ್ವರ್ ಡೌನ್ ಆಗಿ ಸೇವೆಯಲ್ಲಿ ಅಡಚಣೆಯಾಗಿ ಬಳಕೆದಾರರು ಗಂಟೆಗಟ್ಟಲೆ ತೊಂದರೆ ಅನುಭವಿಸಿದ್ದಾರೆ. ರಾತ್ರಿ 9 -10 ಗಂಟೆ ಸುಮಾರಿಗೆ ಈ ಅಡಚಣೆ ಉಂಟಾಗಿದ್ದು, ಬಳಕೆದಾರರು ತಮಗೆ ಆದ ತೊಂದರೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೊಸ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಾದ …

Read More »

ರಾಜೀನಾಮೆ ಬಗ್ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಮಹತ್ವದ ಹೇಳಿಕೆ.

ನವ ದೆಹಲಿ, ಜು. 17: ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. “2023ರಲ್ಲಿ ನಡೆಯುವ ಕರ್ನಾಟಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ” ಎಂದು ನಡ್ಡಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಮಾಹಿತಿ ಕೊಟ್ಟಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ …

Read More »

ಮಾಜಿ ಬ್ಯಾಟ್ಸ್ ಮನ್ ಯಶಪಾಲ್ ಶರ್ಮಾ ನಿಧನ.

ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಮಾಜಿ ಬ್ಯಾಟ್ಸ್ ಮನ್ ಯಶಪಾಲ್ ಶರ್ಮಾ (66) ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ 7.30 ರ ಸುಮಾರಿಗೆ ನಿಧನರಾಗಿದ್ದಾರೆ. 1983 ರಲ್ಲಿ ಕಪಿಲ್ ದೇವ್ ನೇತೃತ್ವದ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿದ್ದ ಯಶ್ ಪಾಲ್ ಶರ್ಮಾ ಅವರು 37 ಏಕದಿನ ಮತ್ತು 49 ಟೆಸ್ಟ್ ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ ಮತ್ತು 1979-83 ರವರೆಗೆ ಭಾರತ ಕ್ರಿಕೆಟ್ ತಂಡದ …

Read More »

ಮೋದಿಯ ಹೊಸ ತಂಡದಲ್ಲಿ ಶೈಕ್ಷಣಿಕ ಸಚಿವರುಗಳ ಶಿಕ್ಷಣಾರ್ಹತೆ

ನವದೆಹಲಿ, ಜು.08: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಕೊನೆಯಾಗಿದೆ. 43 ಮಂದಿ ನೂತನ ಸಚಿವರು ಸಂಪುಟ ಸೇರಿದ್ದಾರೆ. ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿದಂತೆ ಕರ್ನಾಟಕದ ನಾಲ್ಕು ಮಂದಿ ಕೇಂದ್ರ ಸಂಪುಟ ಸೇರಿದ್ದಾರೆ. ಕೇಂದ್ರ ಸಂಪುಟ ವಿಸ್ತರಣೆ: ದಾಖಲೆಯ ಎಸ್‌ಸಿ/ಎಸ್‌ಟಿ ಪ್ರಾತಿನಿಧ್ಯ, …

Read More »

ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಸಚಿವರಾಗಿ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕಾರ.

ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ 2.0 ವಿಸ್ತರ್ಣೆಯಾಗಿದೆ. ಇಂತಹ ನೂತನ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ನೂತನ ಸಚಿವರಾಗಿ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಶೋಭಾ ಕರಂದ್ಲಾಜೆ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇಂದ್ರ ಸಚಿವ ಸಂಪುಟವು ಪುನಾರಚನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ನೂತನ ಸಚಿವರಾಗಿ 43 ಸಚಿವರು ಸೇರ್ಪಡೆಗೊಳ್ಳುತ್ತಿದ್ದಾರೆ. ಇಂತಹ ಮೋದಿ ನೇತೃತ್ವದ ಸಚಿವ ಸಂಪುಟಕ್ಕೆ ಕರ್ನಾಟಕದಿಂದ ಸಂಸದ ರಾಜೀವ್ …

Read More »

ಡಿ ವಿ ಸದಾನಂದಗೌಡ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ!

ನವದೆಹಲಿ, ಜು.7- ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಪುನಾರ್ರಚನೆಯಾಗುವ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಗಂಗ್ವಾರ್, ಶಿಕ್ಷಣ ಸಚಿವ ರಮೇಶ್ ಪೊಕ್ರಿಯಾಲ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ದಿಬೇಶ್ರೀ ಚೌದರಿ ಸೇರಿದಂತೆ ಹಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿವಿ ಸದಾನಂದ ಗೌಡ ಅವರೂ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಥಾವರ್ …

Read More »

ಕೊವೀಡ್ ನಿಯಂತ್ರಣದಲ್ಲಿ ಪರಿಶ್ರಮ ಪಟ್ಟ ಆರೋಗ್ಯ ಇಲಾಖೆಯವರು ಮಾಡಿದ ಸೇವೆ ಶ್ಲಾಘನೀಯ : ಶಾಸಕ ರಮೇಶ್‌ ಜಾರಕಿಹೊಳಿ.

ಕೊವೀಡ್ ನಿಯಂತ್ರಣದಲ್ಲಿ ಪರಿಶ್ರಮ ಪಟ್ಟ ಆರೋಗ್ಯ ಇಲಾಖೆಯವರು ಮಾಡಿದ ಸೇವೆ ಶ್ಲಾಘನೀಯವಾಗಿದೆ ಎಂದು ಮಾಜಿ ಸಚಿವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಸ್ಥಳೀಯ ರಾಕೆಟ್ ಇಂಡಿಯಾ ಪೈ.ಲಿಮಿಟೆಡ್ ನವರ ನೀಡಿದ ಐಸಿಯು ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೋಕಾಕ ಸರಕಾರಿ ಆಸ್ಪತ್ರೆಗೆ ರಾಜ್ಯದಲ್ಲಿ ಉತ್ತಮ ಹೆಸರಿದ್ದು ಇದಕ್ಕೆ ಡಿ.ದರ್ಜೆಯ ನೌಕರರರಿಂದ ಹಿಡಿದ ಎಲ್ಲ ಉನ್ನತ ಮಟ್ಟದ ಅಧಿಕಾರಿಗಳ ಸಹಕಾರ ಮುಖ್ಯ …

Read More »

ಇನ್ನೂ ಎಕ್ಸಾಮ್ ಮುಗಿದಿಲ್ಲ ಆಗಲೇ ಮುಂದಿನ ಸೆಮಿಸ್ಟರ್ ಆನ್ಲೈನ್ ಕ್ಲಾಸ್ ॥ RCU ಆಡಳಿತ ನಡೆಗೆ ವಿದ್ಯಾರ್ಥಿಗಳ ವಿರೋಧ॥

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೊದಲಿನಿಂದಲೂ ವಿದ್ಯಾರ್ಥಿಗಳನ್ನೂ ಗೊಂದಲದಲ್ಲಿ ಸಿಲಿಕಿಸುತ್ತಾ ಬಂದಿದೆ, ಯಾವುದೇ ರೀತಿಯ ಮುನ್ನ ತಯಾರಿ ಇಲ್ಲದೇ ಅವರು ತೆಗೆದುಕೊಳ್ಳುವ ನಿರ್ಧಾರ, ಪರೀಕ್ಷೆ ಸಮಯದಲ್ಲಿ ಮಾಡುವ ಗೊಂದಲ ಹೀಗೆ ಅನೇಕ ಸಮಸ್ಯೆಗಳಿಗೆ ಮಾಡುತ್ತಲೇ ಬಂದಿದೆ. ಅದೇ ರೀತಿ ಈ ಬಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳೇ ಇನ್ನೂ ಮುಗಿದಿಲ್ಲ. ಅಷ್ಟರಲ್ಲೇ ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್​ಲೈನ್ ಮೂಲಕ ನಡೆಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್​ಸಿಯು) …

Read More »