ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಾಲೂಕಿನ ಬೆಣಚಿನಮರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಭೇಟಿ ನೀಡಿದರು. ಶಾಲೆಯಲ್ಲಿ ನೂತನವಾಗಿ ಮುಖ್ಯಧ್ವಾರ ಹಾಗೂ ಧ್ವಜ ಸ್ತಂಭಗಳನ್ನು ನಿರ್ಮಿಸಲಾಗಿದ್ದು, ಆ.15 ರಂದು ಇವುಗಳ ಉದ್ಘಾಟನೆ ಮಾಡಲಾಗುತ್ತಿದೆ. ಇವುಗಳನ್ನು ವೀಕ್ಷಿಸಿದ ಸತೀಶ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಗಿಡ್ಡಣವರ, ಯಲ್ಲಪ್ಪ ಬೀರನಗಡ್ಡಿ, ಯಮನಪ್ಪ ಮಾಳಗಿ, ಶಿವಪ್ಪ ಮಾಗಿ, ಅಸ್ಪಾಕ್ ಮುಜಾವರ್, ಭಗವಂತ ಹುಳ್ಳಿ, ಚನ್ನಬಸು …
Read More »ಸರ್ಕಾರದ ಅಧಿಕಾರಿಶಾಹಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಪೀಕರ್ ಕಾಗೇರಿ.
ಬೆಂಗಳೂರು: ವಿಧಾನಸಭಾ ಸ್ಪೀಕರ್ ಆಗಿ 2 ವರ್ಷಗಳಲ್ಲಿ ಅನೇಕ ಕಠಿಣ ನಿಲುವುಗಳನ್ನು ತೆಗೆದುಕೊಂಡಿದ್ದೇನೆ. ಸಭಾಧ್ಯಕ್ಷನಾಗಿ ನಿಸ್ಪಕ್ಷಪಾತ ಧೋರಣೆ ಅನುಸರಿಸಿದ್ದೇನೆ. ಸದಸ್ಯರನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದೇನೆ. ಕನಿಷ್ಠ 60 ದಿನ ಅಧಿವೇಶನ ನಡೆಸಲು ಸೂಚಿಸಿದ್ದೇನೆ. ಆದರೆ ಒಂದು ಕೆಲಸ ಸಾಧ್ಯವಾಗಿಲ್ಲ ಎಂಬ ಬೇಸರವಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕಾಗೇರಿ, ವಿಧಾನಸಭೆಯಲ್ಲಿ ಇ-ವಿಧಾನ್ ಜಾರಿ ಸಾಧ್ಯವಾಗಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ಧೋರಣೆ ಹಾಗೂ ನಿಲುವುಗಳೇ ಕಾರಣ. ಅನುದಾನದ ನೆರವಿಗೆ …
Read More »ಕಡೋಲಿ, ಕಾಕತಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹ ಹಾನಿ ಪರಿಶೀಲಿಸಿದ ರಾಹುಲ್ ಜಾರಕಿಹೊಳಿ
ಬೆಳಗಾವಿ: ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಜಾಪರವಾಡಿ, ಕಡೋಲಿ, ದೇವಗಿರಿ ಹಾಗೂ ಕಾಕತಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕಾಕತಿ, ಹೊನಗಾ, ಜಮನಾಳ, ಕೆಂಚನಟ್ಟಿ, ಬೈಲೂರ, ಮಳವಳ್ಳಿ, ಹೊಸವಂಟಮುರಿ ಗ್ರಾಮಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು ಭೇಟಿ ನೀಡಿ ಪ್ರವಾಹದಿಂದಾದ ಹಾನಿ ಪರಿಶೀಲನೆ ಮಾಡಿದರು. ಈ ಗ್ರಾಮಗಳಲ್ಲಿ ಪ್ರವಾಹ ಹಾಗೂ ಮಳೆಯಿಂದಾಗಿ ಮನೆ, ಬೆಳೆ, ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದ್ದು, ಇವುಗಳನ್ನು ರಾಹುಲ್ ಪರಿಶೀಲಿಸಿದರು. …
Read More »ಹುಬ್ಬಳ್ಳಿ ಮಹಿಳಾ ಘಟಕದ ಕಾರ್ಯವನ್ನು ಶ್ಲಾಘೀಸಿದ ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ : ‘ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ, ಪಕ್ಷ ಸಂಘಟನೆಯಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಗುರುವಾರ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಮೊದಲೆ ಹಾಗೂ ಎರಡನೇ ಅಲೆಯಲ್ಲಿ ಮಹಿಳಾ ಕಾಂಗ್ರೆಸ್ ಬಡವರಿಗೆ ಕಿಟ್ ನೀಡುವ ಮೂಲಕ ಒಳ್ಳೆಯ ಕಾರ್ಯವನ್ನು ಮಾಡಿದ್ದೀರಿ …
Read More »ಪದವಿ ಕಾಲೇಜುಗಳ ಆರಂಭದ ಕುರಿತು ನೂತನ ಮಾರ್ಗಸೂಚಿ ಪ್ರಕಟ!
ನವದೆಹಲಿ : ಪದವಿ ಕಾಲೇಜುಗಳ ಆರಂಭದ ಕುರಿತಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸೂಚನೆ ನೀಡಿದೆ. ಯುಜಿಸಿ ಮಾರ್ಗಸೂಚಿ ಪ್ರಕಾರ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷ / ಸೆಮಿಸ್ಟರ್ ಪರೀಕ್ಷೆಗಳನ್ನು ಆನ್ ಲೈನ್, ಆಫ್ ಲೈನ್ ಅಥವಾ ಬ್ಲೆಂಡ್ ಮಾಡಿದ ಮೋಡ್ ನಲ್ಲಿ ಆಗಸ್ಟ್ 31 ರೊಳಗೆ ಪೂರ್ಣಗೊಳಿಸಬೇಕು. ಇದಲ್ಲದೆ, ಆಂತರಿಕ ಮೌಲ್ಯಮಾಪನ ಮತ್ತು …
Read More »ಮಾದಕ ವಸ್ತುಗಳಿಂದ ಅಪರಾಧಿಗಳು ಜಾಸ್ತಿ!
ಆನೇಕಲ್: ಆನೇಕಲ್ ಪೊಲೀಸ್ ಉಪ ವಿಭಾಗದ ಏಳು ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ 100 ಬೈಕ್, ಮೊಬೈಲ್‌ಗಳು ಮತ್ತು ಚಿನ್ನಾಭರಣ ಸೇರಿದಂತೆ ಒಟ್ಟು ₹ 1.74 ಕೋಟಿ ಮೌಲ್ಯದ ವಸ್ತುಗಳನ್ನು ಹೆಬ್ಬಗೋಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಲಯ ಐಜಿಪಿ ಎಂ. ಚಂದ್ರಶೇಖರ್ ವಾರಸುದಾರರಿಗೆ ಹಸ್ತಾಂತರಿಸಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ 37 ಪ್ರಕರಣಗಳಲ್ಲಿ 56 ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಕ್ಕೆ ಪಡೆದಿದ್ದು, ಸಂಬಂಧಿಸಿದವರಿಗೆ ನೀಡಲಾಯಿತು. ಹೆಬ್ಬಗೋಡಿ ಠಾಣೆ …
Read More »ಭಾರಿ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಸಂಪೂರ್ಣ ಮುಳುಗಡೆ.
ಸುಬ್ರಹ್ಮಣ್ಯ: ನಿರಂತರ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಕಳೆದ 4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಸುಬ್ರಹ್ಮಣ್ಯ ಅಲ್ಲದೆ ಘಟ್ಟ ಪ್ರದೇಶ ಹಾಗೂ ಕುಮಾರ ಪರ್ವತದಲ್ಲಿ ಭಾರಿ ಮಳೆಯಿಂದಾಗಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕ್ಷೇತ್ರಕ್ಕೆ ಬಂದಿರುವ ಭಕ್ತಾದಿಗಳು ಕುಮಾರಧಾರಾ ನದಿಯ ದಡದಲ್ಲಿ ತೀರ್ಥಸ್ನಾನ ನೆರವೇರಿಸುತ್ತಿದ್ದಾರೆ. ನದಿಯ ದಡದಲ್ಲೇ ತೀರ್ಥಸ್ನಾನ ನೆರವೇರಿಸಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ. ಸ್ನಾನಘಟ್ಟದ ಬಳಿಯಿರುವ ಕಿಂಡಿ ಅಣೆಕಟ್ಟು ಕೂಡ ಸಂಪೂರ್ಣ ಮುಳುಗಡೆಯಾಗಿದೆ.
Read More »ಜಲಜೀವನ ಮಿಷನ್ ಕಾಮಗಾರಿಗೆ 36.50 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ವಡೇರಹಟ್ಟಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳನ್ನು ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನದಡಿ ಅರಭಾವಿ ಮತಕ್ಷೇತ್ರಕ್ಕೆ ಜೆಜೆಎಂ ಯೋಜನೆಯಡಿ 36.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರದoದು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ 1.60 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ …
Read More »ಜೀವ ಜಲ ಪೋಲು , ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ!
ಹರಿಹರ: ಜಲಸಿರಿ ಯೋಜನೆಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ನಗರದ ಒಂದು ಭಾಗದಲ್ಲಿ ಲಕ್ಷಾಂತರ ಲೀಟರ್ ಜೀವಜಲ ಪೋಲಾಗುಗುತ್ತಿದ್ದರೆ, ಮತ್ತೊಂದು ಭಾಗದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ನಗರದ ಮಹಾತ್ಮ ಗಾಂಧಿ ಕೊಳೆಗೇರಿ ಪ್ರದೇಶದ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್‍ಗೆ ಹೆಚ್ಚುವರಿ ನೀರು ಹರಿಸುವುದರಿಂದ ಟ್ಯಾಂಕ್ ತುಂಬಿ ನಿತ್ಯ ಲಕ್ಷಾಂತರ ಲೀಟರ್ ನೀರು ಅಪವ್ಯಯವಾಗುತ್ತಿದೆ. ಭಾರತ್ ಆಯಿಲ್ ಮಿಲ್ ಕಾಂಪೌಂಡ್, ಬಾತಿ ಶಿವನಾಗಪ್ಪ ಕಾಂಪೌಂಡ್ ಹಾಗೂ …
Read More »ನಾಲ್ಕು ದಿನ ಮಳೆ ಆಗುವ ಸಾಧ್ಯತೆ, ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ.
ಬೆಂಗಳೂರು : ವಾಯಭಾರ ಕುಸಿತದ ಹಿನ್ನೆಲೆ ಜುಲೈ 8 ರಿಂದ 11ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗಿನಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಜುಲೈ 8 ಹಾಗೂ 9ರಂದು ರಾಜ್ಯಾದ್ಯಂತ ಮಳೆ ತೀವ್ರತೆ ಹೆಚ್ಚಳವಾಗುವ ಸಾಧ್ಯತೆ ಇದೆ, ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಹಲವೆಡೆ …
Read More »