ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಕರಗುಪ್ಪಿ ಗ್ರಾಮದಲ್ಲಿ ಬಸವಣ್ಣ ದೇವರ ಕಾರ್ತಿಕೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಜೋಡೆತ್ತಿನ ಖಾಲಿ ಗಾಡಾ ಸ್ಪರ್ಧೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಚಾಲನೆ ನೀಡಿದರು. ಕುಂದರಗಿಯ ಅಡವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಡಿಸೆಂಬರ್ 22ರಿಂದ 25ರವೆಗೆ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನವೂ ವಿವಿಧ ಸ್ಪರ್ಧೆಗಳಾದ ಜೋಡು ಎತ್ತಿನ ಖಾಲಿ ಗಾಡಾ ಓಡಿಸುವ , ಟಗರು ಕಾಳಗ, ರಂಗೋಲಿ ಸ್ಪರ್ಧೆ, ಸ್ಲೋ ಸೈಕಲ್ ಸ್ಪರ್ಧೆ, …
Read More »ರಾಷ್ಟ್ರೀಯ ಗಣಿತ ದಿನ ಆಚರಣೆಯ ಕಾರ್ಯಕ್ರಮವನ್ನ ಉದ್ಘಾಟಿಸಿದ ಯುವ ನಾಯಕ ಸನತ್ ಜಾರಕಿಹೊಳಿ
ಗೋಕಾಕ : ಗಣಿತ ವಿಷಯದಲ್ಲಿ ಫೆಲೋಸಿಫ್ ಪಡೆದ ಪ್ರಥಮ ಭಾರತೀಯ ಶ್ರೀನಿವಾಸ ರಾಮಾನುಜ : ಬಿ ಕೆ ಕುಲಕರ್ಣಿ ಗಣಿತ ತಜ್ಞ ಶ್ರೀನಿವಾಸ ರಾಮಾನುಜ ಅವರು ಗಣಿತ ಲೋಕಕ್ಕೆ ನೀಡಿದ ಕೊಡುಗೆಯ ನೆನಪಿಗಾಗಿ ಅವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಎಸ್.ಎಲ್.ಜೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ ಕೆ ಕುಲಕರ್ಣಿ ಹೇಳಿದರು . ಬುಧವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಆಚರಿಸಲಾದ ರಾಷ್ಟ್ರೀಯ ಗಣಿತ ದಿನ …
Read More »ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ,ಸಂಧಾನ ಸಫಲ!
ಬೆಳಗಾವಿ : ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬದಲಾವಣೆಗೆ ಪೂರ್ಣ ವಿರಾಮ ಹಾಕಿದ್ದು, ಅಧ್ಯಕ್ಷ ರಮೇಶ ಕತ್ತಿ ಮತ್ತು ಬ್ಯಾಂಕಿನ ನಿರ್ದೇಶಕರುಗಳ ಮಧ್ಯೆ ನಡೆದ ಸಂಧಾನ ಸಭೆ ಯಶಸ್ವಿಯಾಗುವ ಮೂಲಕ ಅಧ್ಯಕ್ಷ ಹುದ್ದೆಯಲ್ಲಿಯೇ ಕತ್ತಿ ಅವರನ್ನು ಮುಂದುವರೆಯಲಿದ್ದಾರೆ. ಬುಧವಾರ ಸಂಜೆ ನಗರದ ಖಾಸಗಿ ಹೊಟೇಲ್ನಲ್ಲಿ ಜರುಗಿದ ಸಂಧಾನ ಸಭೆಯಲ್ಲಿ ರಮೇಶ ಕತ್ತಿ ಮತ್ತು ನಿರ್ದೇಶಕರುಗಳ ಮಧ್ಯೆ ಮೂಡಿದ್ದ ಬಿರುಕು ಸಂಪೂರ್ಣ ನಿವಾರಣೆಯಾಗಿದ್ದು, ಕತ್ತಿ …
Read More »ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತ ಸಂವಿಧಾನದಿಂದ ನಾವೆಲ್ಲರೂ ಬೆಳೆಯಲು ಅನುಕೂಲ : ಸತೀಶ್ ಜಾರಕಿಹೊಳಿ
ಬೆಳಗಾವಿ : ದೇಶದಲ್ಲಿ ಕೆಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷಗಳ ಕಳೆದರೂ ಇಂದಿಗೂ ಕುದುರೆ ಮೇಲೆ ಕುಳಿತು ಮದುವೆಯಲ್ಲಿ ಸಂಭ್ರಮಿಸುವ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದರು. ಇಲ್ಲಿನ ಗಾಂಧಿಭವನದಲ್ಲಿ ಬುಧವಾರ ಅಲ್ಪಸಂಖ್ಯಾತ ಸಮಿತಿ ಆಶ್ರಯದಲ್ಲಿ ನಡೆದ ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಲ್ಪ ಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ …
Read More »ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದ ಪ್ರಿಯಾಂಕಾ ಜಾರಕಿಹೊಳಿ
ಗೋಕಾಕ್ : ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಪ್ರತಿನಿಧಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಚೆಕ್ ಮೂಲಕ ಧನ ಸಹಾಯ ಮಾಡಿದರು. ಗೋಕಾಕದ ಕರಾಟೆ ಪಟುಗಳಾದ ಕಿರಣ್ ಹೊರಟ್ಟಿ ( ಪ್ರಥಮ), ಅಬ್ಬನ್ ಸಾಬ್ ಮುಲ್ಲಾ( ದ್ವಿತಿಯ), ವಿಷ್ಟು ಮಾವರ್ಕರ್ (ತೃತಿಯ) ಸ್ಥಾನ ಪಡೆದಿದ್ದಾರೆ. ಡಿ.24,25ರಂದು ಹರಿಯಾಣದಲ್ಲಿ ನಡೆಯುವ ಕರಾಟೆ ಸ್ಪರ್ಧೆಯಲ್ಲಿ ರಾಜ್ಯದಿಂದ …
Read More »ನಾಡದ್ರೋಹಿ ಎಂಇಎಸ್ ಹಾಗೂ ಶಿವಸೇನೆ ನಿಷೇಧಿಸಲು ಆಗ್ರಹ
ಘಟಪ್ರಭಾ :ನಾಡ ದ್ರೋಹಿ ಎಂ.ಇ.ಎಸ್ ಹಾಗೂ ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇದಿಸುವಂತೆ ಮತ್ತು ಕೊಲ್ಹಾಪುರದಲ್ಲಿ ಕನ್ನಡ ದ್ವಜ ಸುಟ್ಟಂತಹ ಹಾಗೂ ಜಗದ್ಗುರು ಶ್ರೀ ಬಸವೇಶ್ವರ,ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿ ಅವಮಾನ ಮಾಡಿರುವ ನಾಡ ದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮೃತ್ಯುಂಜಯ ವೃತ್ತದಲ್ಲಿ ಸಂಕೇಶ್ವರ ಹಾಗೂ ಜೇವರ್ಗಿ …
Read More »ಪಾಮಲದಿನ್ನಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ: ಆಹಾರ ಸಚಿವ ಉಮೇಶ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯ ನೀರು ಹಳ್ಳಕ್ಕೆ ಬಿಡುತ್ತಿರುವುದನ್ನು ಖಂಡಿಸಿ ಸುವರ್ಣ ಗಾರ್ಡನ್ ನಲ್ಲಿ ಪಾಮಲದಿನ್ನಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಪ್ರತಿಭಟನಾಕಾರ ಸಮಸ್ಯೆ ಆಲಿಸಿದರು. ಸಚಿವ ಕತ್ತಿ ಒಡೆತನದ ವಿಶ್ವರಾಜ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ತಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುತ್ತಿರುವ ಬಗ್ಗೆ ಈಗಾಗಲೇ ತಹಶೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗಳ ವರೆಗೆ ದೂರು ನೀಡಿದ್ದರು …
Read More »ಕೋವಿಡ್ ನಿಂದ ಮೃತ ಪಟ್ಟ ಕುಟುಂಬಸ್ಥರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಚೆಕ್ ವಿತರಣೆ
ಬೆಳಗಾವಿ: ಕೋವಿಡ್ ನಿಂದ ಮೃತ ಪಟ್ಟ ಕುಟುಂಬಸ್ಥರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಚೆಕ್ ವಿತರಿಸಿದರು. ಬೆಳಗಾವಿ ಜಾದವ ನಗರ ಕಚೇರಿಯಲ್ಲಿಕೋವಿಡ್ ನಿಂದ ಮೃತ ಪಟ್ಟ ಕುಟುಂಬಸ್ಥರಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ನಿಂದ ಹಲವು ಜನ ಮೃತಪಟ್ಟಿದ್ದು, ಕುಟುಂಬ ಸದಸ್ಯರು ಅವರನ್ನು ಮರೆತು ಜೀವನ ನಡೆಸಬೇಕು. ಸರ್ಕಾರ ಮೃತರ ಕುಟುಂಬಸ್ಥರಿಗೆ ತಲಾ ಒಂದು ಲಕ್ಷ ರೂ. ನೀಡುತ್ತಿದ್ದು, ಈ ದುಡ್ಡನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. …
Read More »ರಮೇಶ್ ಕತ್ತಿ ವಿರುದ್ಧ ಬುಗಿಲೆದ್ದ ಬಂಡಾಯ ಬಿಡಿಸಿಸಿ ಬ್ಯಾಂಕ್ ಕದನ ಶುರುವಾಗುತ್ತಾ? ಸರ್ವಾಧಿಕಾರತ್ವಕ್ಕೆ ಸೆಡ್ಡು ಹೊಡೆದ್ರಾ?ನಿರ್ದೇಶಕರು!
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ “ಅಹಂ” ಮುರಿಯಲು ಬಂಡಾಯದ ಬಾವುಟ ಹಾರಿಸಿದ ಬ್ಯಾಂಕಿನ ನಿರ್ದೇಶಕರು. ನಿನ್ನೆ ಶನಿವಾರದಂದು ಕೋರಂ ಇಲ್ಲದೇ ಆಡಳಿತ ಮಂಡಳಿ ಸಭೆ ನಡೆಸಿದ ಆರೋಪ ಹೊತ್ತಿರುವ ರಮೇಶ ಕತ್ತಿ ಬೆಳಗಾವಿ : ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಗೆ 10 ಜನ ನಿರ್ದೇಶಕರು ಗೈರು ಹಾಜರಾಗುವ ಮೂಲಕ ಅಧ್ಯಕ್ಷ ರಮೇಶ ಕತ್ತಿ ಅವರ ಸರ್ವಾಧಿಕಾರತ್ವಕ್ಕೆ ಸೆಡ್ಡು ಹೊಡೆದಿದ್ದಾರೆ. ಶನಿವಾರ ದಿನಾಂಕ 18 ರಂದು …
Read More »ನಿರುದ್ಯೋಗ ತಡೆಗೆ ದೇಶ, ರಾಜ್ಯದಲ್ಲಿ ಹೋರಾಟ ನಡೆಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ: ನಿರುದ್ಯೋಗ ಬಗ್ಗೆ ದೇಶ, ರಾಜ್ಯದಲ್ಲಿ ಪ್ರಸ್ತುತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ರಾಜ್ಯ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿಸಾಕಷ್ಟು ಸಮಸ್ಯೆಗಳು ಇವೆ, ಅವುಗಳ ಬಗ್ಗೆ ಕೂಡ ಹೋರಾಟ ನಡೆಸಬೇಕು ಎಂದರು. ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅವುಗಳ ಭರ್ತಿಗೆ ಹೋರಾಟ ನಡೆಸಿ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಜಾಗೃತಿ …
Read More »