ಹಿಂಡಲಗಾ ಪಿಡಿಒ ವಸಂತಕುಮಾರಿ ವಿಚಾರಣೆಗೆ! ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ತನಿಖೆ ತೀವ್ರಗೊಂಡಿದೆ. ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಠಿಕಾಣಿ ಹೂಡಿರುವ ಉಡುಪಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇಂದು ಹಿಂಡಲಗಾ ಗ್ರಾಪಂಗೆ ಭೇಟಿ ನೀಡಿರುವ ಪೊಲೀಸರು, ಪಿಡಿಒ ವಸಂತಕುಮಾರಿ ವಿಚಾರಣೆ ನಡೆಸಿದ್ದಾರೆ. ಉಡುಪಿ ಟೌನ್ ಇನ್ಸ್‌ಪೆಕ್ಟರ್ ಶರಣಗೌಡ ನೇತೃತ್ವದ ತಂಡ ಪಿಡಿಒ ವಸಂತಕುಮಾರಿ ಅವರಿಂದ ಪ್ರಕರಣದ ಕುರಿತು ಹಲವು ಮಾಹಿತಿಯನ್ನು ಪಡೆಯಲಾಗಿದೆ. ಸಂತೋಷ್ ಪಾಟೀಲ್ …
Read More »ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರರ ಜಾತ್ರೆಯು ರದ್ದು
ಸಾವಳಗಿ ಪೀಠದ ಶೂನ್ಯ ಸಿಂಹಾಸನಾಧೀಶರು ಜಗದ್ಗುರು ಶ್ರೀ ಶ್ರೀಮನ್ ಮಹಾರಾಜ ನಿರಂಜನ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾ ಸನ್ನಿಧಿಯವರ ಸಾನ್ನಿಧ್ಯದಲ್ಲಿ.ಶ್ರೀ ಪೀಠದ ಜಾತ್ರೆಯ ಹಾಗೂ ಜಾನುವಾರುಗಳ ಜಾತ್ರೆಯ ಕಾರ್ಯಕ್ರಮಗಳನ್ನು ಈ ವರ್ಷವೂ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಪೂಜ್ಯರು , ಶ್ರೀಪೀಠದ ಸದ್ಭಕ್ತರು , ಜನಪ್ರತಿನಿಧಿಗಳು ಹಾಗೂ ನಾಲ್ಕೂ ಊರಿನ ಸಾರ್ವಜನಿಕ ಸಮಾಲೋಚಿಸಿ ನಾಡಿನ ಸದ್ಭಭಕ್ತರ ಆರೋಗ್ಯ ದೃಷ್ಟಿಯಿಂದ ಜಾತ್ರಾ ಮಹೋತ್ಸವ ರದ್ದು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ . ಸಂಪ್ರದಾಯ ಮುರಿಯದಂತೆ ಸರಳವಾಗಿ …
Read More »ರೈತರು ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಮೂಡಲಗಿ: ಪ್ರಸ್ತುತ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿ ಶೇಖರಣೆ ಮಾಡುವುದು ಅಗತ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಪಟಗುಂದಿ ಗ್ರಾಮದಲ್ಲಿ ಸತೀಶ್ ಶುಗರ್ಸ ಹುಣಶ್ಯಾಳ ಪಿ.ಜಿ ಹಾಗೂ ಶ್ರೀ 1008 ಸುಪಾರ್ಶ್ವನಾಥ ದಿಗಂಬರ ಜೈನ್ ಮಂದಿರ ಶಿಕ್ಷಣ ಟ್ರಸ್ಟ್ ಪಟಗುಂದಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕಬ್ಬಿನ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಭೂಮಿಗೂ ವಯಸ್ಸು ಇದೆ. …
Read More »ಶೀಘ್ರ ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ ಜಿಲ್ಲಾ ಪುರುಷ-ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್ 2022 ರ ಸಮಾರೋಪ ಸಮಾರಂಭ -ಕಬಡ್ಡಿ ಪಂದ್ಯಾವಳಿಯಲ್ಲಿ 70 ಪುರುಷ, 12 ಮಹಿಳಾ ತಂಡಗಳು ಭಾಗಿ ಬೆಳಗಾವಿ: ಒಂದೆರಡು ತಿಂಗಳಲ್ಲಿ ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ …
Read More »ಟ್ರಾಫಿಕ್ ನಿರ್ವಹಣೆಗೆ ಮತ್ತಷ್ಟು ಬೀಗಿ ಕ್ರಮಗಳನ್ನು ಕೈಗೊಂಡ ಗೋಕಾಕ PSI ಕೆ ವಾಲಿಕಾರ!
– ಸಂಪಾದಕೀಯ ಚೇತನ ಲ ಖಡಕಭಾಂವಿ ಗೋಕಾಕ : ವೇಗವಾಗಿ ಬೆಳೆಯುತ್ತಿರುವ ಕರದಂಟು ನಗರಿ ಗೋಕಾಕದಲ್ಲಿ ಟ್ರಾಫಿಕ್ ಸಮಸ್ಯೆ, ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಬೀಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮಾರ್ಕೇಟ್ ದಂತಹ ಮದ್ಯ ಭಾಗದಿಂದ ಹಾದು ಹೋಗುವುದರಿಂದ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ನಗರ ಪೋಲಿಸ್ …
Read More »ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ: ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಪಂ ವ್ಯಾಪ್ತಿಯ ಮನ್ನಿಕೇರಿ, ಹಂದಿಗನೂರ, ಬೋಡಕೇನಹಟ್ಟಿ ಗ್ರಾಮದಲ್ಲಿ ನಬಾರ್ಡ್ ಆರ್. ಐ. ಡಿ. ಎಫ್ ಅತಿವೃಷ್ಠಿ ಯೋಜನೆಯಲ್ಲಿ ಮುಂಜೂರಾದ 66 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಳ್ಳೆಯ ಸಮಾಜ …
Read More »ಚುನಾವಣೆ ಬಂದಾಗ ಭಾಷಣ ಮಾಡುವ ವ್ಯಕ್ತಿಗಳು ನಮಗೆ ಬೇಕಿಲ್ಲ: ಯುವ ನಾಯಕ ರಾಹುಲ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ ಫೌಂಡೇಶನ್‌ನಿಂದ ವಿವಿಧ ದೇವಸ್ಥಾನ ಹಾಗೂ ಮಸಿದಿಗಳಿಗೆ ಕುರ್ಚಿ-ಸೌಂಡ್ ಸಿಸ್ಟಮ್ ವಿತರಣೆ ಬೆಳಗಾವಿ: ಕಳೆದ 14 ದಿನದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಇಂದು(ಸೋಮವಾರವೂ) ಪ್ರತಿ ಲೀಟರ್ ಪೆಟ್ರೋಲ್‍ಗೆ 42 ಪೈಸೆ, ಡಿಸೇಲ್‍ಗೆ 39 ಪೈಸೆ ಏರಿಕೆಯಾಗಿದೆ. ಆದರೆ ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ದೂರಿದರು. ನಗರದ ಜಾಧವ ನಗರ ಕಚೇರಿಯಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಬೆಳಗಾವಿ ದಕ್ಷಿಣ, …
Read More »ಗುಪ್ತಚರ ಇಲಾಖೆಯ ರಾಜೇಂದ್ರ ಉದಯ್ ಬಡೆಸಗೋಳ ಸಿಎಂ ಪದಕ ಘೋಷಣೆ.
ಬೆಳಗಾವಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೊಡಮಾಡುವ ಮುಖ್ಯಮಂತ್ರಿ ಪದಕ ಈ ಬಾರಿ ಬೆಳಗಾವಿಯ ನಾಲ್ವರು ಅಧಿಕಾರಿಗಳು ಭಾಜನರಾಗಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯಲ್ಲಿ ಹಿರಿಯ ಗುಪ್ತಚರ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಂದ್ರ ಉದಯ್ ಬಡೆಸಗೋಳ ಅವರಿಗೆ ಏಪ್ರಿಲ್ 2 ರಂದು ಕೊಡಮಾಡುವ ಮುಖ್ಯಮಂತ್ರಿ ಪದಕ ದೊರೆತಿದ್ದು ಸಂಬಂಧಿಕರು ಸ್ನೇಹಿತರಲ್ಲಿ ಹರ್ಷ ಉಂಟು ಮಾಡಿದೆ. ರಾಜೇಂದ್ರ ಉದಯ್ ಬಡೆಸಗೋಳ ಈ …
Read More »ಕಾಂಗ್ರೆಸ್ ಬಲಪಡಿಸಲು ಕಾರ್ಯಕರ್ತರು ಮುಂದಾಗಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಸದಸ್ವತ್ವ ಗುರಿ ಹೊಂದಲಾಗಿದೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಾಲೂಕಿನ ಗದ್ದಿನಕೇರಿ ಕ್ರಾಸ್ ನಲ್ಲಿರುವ ಲಡ್ಡುಮುತ್ಯಾ ದೇವಸ್ಥಾನ ಸಭಾಭವನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ದಿಸೆಯಲ್ಲಿ ಪಕ್ಷದ ಪದಾಧಿಕಾರಿಗಳು ಸದಸ್ಯತ್ವಕ್ಕೆ ಹೆಚ್ಚಿನ ಮಹತ್ವ ನೀಡಿ ಕಾರ್ಯೋನ್ಮುಖರಾಗಬೇಕು …
Read More »ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
-ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ಶಾಲಾ ವಾರ್ಷಿಕ ಸ್ವೇಹ ಸಮ್ಮೇಳನ ಮತ್ತು ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮ ಯಮಕನಮರಡಿ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಮಾವನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ಶಾಲಾ ವಾರ್ಷಿಕ ಸ್ವೇಹ ಸಮ್ಮೇಳನ ಮತ್ತು ಪರೀಕ್ಷೆ ಒಂದು ಹಬ್ಬ …
Read More »