Breaking News

Uncategorized

ಬಿಜೆಪಿ ಸುಳ್ಳು ಪ್ರಚಾರಕ್ಕೆ ಮರುಳಾಗಬೇಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಹಗೇದಾಳ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ *ಹಗದಾಳ ಗ್ರಾಮದಿಂದ ಶ್ಯಾಬಂದ್ರಿ ಕ್ರಾಸ್ ವರಗೆ 7 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ಯಮಕನಮರಡಿ: ಮತಕ್ಷೇತ್ರದ ಎಲ್ಲಾ ಗ್ರಾಮಗಳ ಬೇಡಿಕೆ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು. ಯಮಕನಮರಡಿ ಮತಕ್ಷೇತ್ರದ ಹಗೇದಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್‌ ಬೆಳಗಾವಿ, ಪರಿಶಿಷ್ಟ ವರ್ಗಗಳ …

Read More »

ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಕರೆ

ಸವದತ್ತಿ: ದುಂದು ವೆಚ್ಚದ ಮದುವೆಗಳಿಂದ ಬಡವರಿಗಾಗುವ ಆರ್ಥಿಕ ಭಾರ ತಪ್ಪಿಸಲು ಅತ್ಯಂತ ಸರಳ ಉಚಿತ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ತಾಲೂಕಿನ ಮನಿಕಟ್ಟಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಯುವಕ ಮಂಡಳ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ದಿನದಲ್ಲಿ ಎಲ್ಲ ವೆಚ್ಚವೂ ಆಕಾಶದತ್ತ ಮುಖಮಾಡಿವೆ. ಇದರಿಂದ ಜನಸಾಮಾನ್ಯರ …

Read More »

ಜೀವನದ ಬದಲಾವಣೆಗೆ ವಚನಗಳು ಸ್ಪೂರ್ತಿಯಾಗಿ ಕೆಲಸ ಮಾಡುತ್ತವೆ: ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ

ಗೋಕಾಕ: ವಚನ ಸಾಹಿತ್ಯಕ್ಕೆ ಸರಿಸಾಟಿಯಾಗಿರುವ ಸಾಹಿತ್ಯ ಪ್ರಪಂಚದಲ್ಲಿ ಮತ್ತೊಂದು ಇಲ್ಲ. ಎಲ್ಲಿಯೂ ಕೂಡ ಸಿಗುವುದಿಲ್ಲ ಎಂದು ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ ಹೇಳಿದರು. ನಗರದ ಹಿಲ್ಲ್‌ ಗಾರ್ಡನ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ವಿಶ್ವ ಗುರು ಬಸವೇಶ್ವರರ ಜಯಂತಿ ನಿಮಿತ್ತ  ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಆಡು ಭಾಷೆಯಲ್ಲಿರುವ ವಚನಗಳು ಜನರಿಗೆ ಸರಳವಾಗಿ ಅರ್ಥವಾಗತ್ತವೆ. ಸಮಾಜದಲ್ಲಿ ಬದಲಾವಣೆಗೆ ಮಹತ್ವದ ಪಾತ್ರ ವಹಿಸುವ ‘ವಚನ ಸಾಹಿತ್ಯ ಶ್ರೇಷ್ಠತೆಯ ವಿಚಾರಗಳಿಂದ ಕೂಡಿದೆ’ …

Read More »

ಮೃತ ರಿಯಾನಾ ಮಕಾಂದಾರ ಮನೆಗೆ ಸತೀಶ್ ಜಾರಕಿಹೊಳಿ ಭೇಟಿ-ಸಾಂತ್ವಾನ

ಬೆಳಗಾವಿ: ಆಪ್ತ ಸಹಾಯಕ ಫಜಲ್ ಮಕಾಂದಾರ ಅವರ ತಾಯಿ ರಿಯಾನಾ ಶೌಕತ್ ಮಕಾಂದಾರ ನಿಧನರಾದ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪಾಶ್ಚಾಪೂರ ಗ್ರಾಮಕ್ಕೆ ಭೇಟಿ ನೀಡಿ, ಮೃತ ರಿಯಾನಾ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಲವು ಮುಖಂಡರು ಇದ್ದರು.

Read More »

ತಹಶೀಲದಾರ ನೇತ್ರತ್ವದಲ್ಲಿ ಶ್ರೀ ಭಗೀರಥ, ಹೆಮರೆಡ್ಡಿ ಮಲ್ಲಮ್ಮ ಜಯಂತಿ ಪೂರ್ವಭಾವಿ ಸಭೆ.!

ಗೋಕಾಕ: ಕೊರೋನಾ ಮತ್ತು ಪ್ರವಾಹದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲ ಮಹನೀಯರ ಜಯಂತಿ ಉತ್ಸವಗಳನ್ನು ಸರಕಾರ ಆದೇಶದ ಮೇರೆಗೆ ಸರಳವಾಗಿ ಆಚರಿಸಲಾಗುತ್ತಿತು. ಈ ಬಾರಿ ಎಲ್ಲ ಜಯಂತಿಗಳನ್ನು ಅತಿ ಉತ್ಸಾಹದಿಂದ ಆಚರಿಸಲು ಅನುಕೂಲವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು. ಅವರು, ರಾಜಋಷಿ ಶ್ರೀ ಭಗೀರಥ ಮಹಾರಾಜರ ಜಯಂತಿ, ತಾಯಿ ಹೆಮರೆಡ್ಡಿ ಮಲ್ಲಮ್ಮ ಜಯಂತಿ ಮತ್ತು ಶ್ರೀ ಶಂಕರಾಚಾರ್ಯ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ …

Read More »

ರಿಯಾನಾ ಶೌಕತ್ ಮಕಾಂದಾರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಂತಾಪ

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕ ಫಜಲ್ ಮಕಾಂದಾರ ಅವರ ತಾಯಿ ರಿಯಾನಾ ಶೌಕತ್ ಮಕಾಂದಾರ(48) ಬುಧವಾರ ಸಂಜೆ ನಿಧನರಾದರು. ಮೃತರು ಪಾಶ್ಚಾಪೂರ ಗ್ರಾಮದ ನಿವಾಸಿಯಾಗಿದ್ದು, ನಾಳೆ ಬೆಳಗ್ಗೆ 9:00 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ. ಮೃತರ ನಿಧನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.

Read More »

ಲೋಳಸೂರ ಗ್ರಾಮದಲ್ಲಿ “ರಾಹುಲ್ ಕಪ್” ಕಬಡ್ಡಿ ಪಂದ್ಯಾವಳಿ

ಗೋಕಾಕ : ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ನಿಮಿತ್ತವಾಗಿ ರಾಹುಲ್ ಕಪ್ ಕಬಡ್ಡಿ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದ್ಯಸರಾದ ಜುಬೇರ್ ಮಿರ್ಜಾಬಾಯಿ ಅವರನ್ನು ಕಬ್ಬಡ್ಡಿ ಆಯೋಜಕರು ಸತ್ಕಾರ ಮಾಡಿದರು.ನಂತರ ಗೆಲುವು ಸಾಧಿಸಿದ ತಂಡಕ್ಕೆ ಜುಬೇರ್ ಮಿರ್ಜಾಬಾಯಿ ಅವರು “ರಾಹುಲ್ ಕಪ್” ವಿತರಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ನಾಗರಾಜ ಗಡಾದ, ಶಿವು ಬಾಗಾಯಿ, ಶ್ರೀಶೈಲ ಗಡಾದ, ಯಲ್ಲಪ್ಪಾ ರಕ್ಷಿ, …

Read More »

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಹೊಂದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಡಾ.ಬಿ.ಆರ್. ಅಂಬೇಡ್ಕರ್‌ ಅವರ 131ನೇ ಜಯಂತಿ ಕಾರ್ಯಕ್ರಮ   ಹುಕ್ಕೇರಿ: ಬಸವಣ್ಣ, ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಕೂಡ ಮೂಢನಂಬಿಕೆ ವಿರೋಧ ಮಾಡುತ್ತಿದ್ದರು, ಹೀಗಾಗಿ ನೀವು ಮೂಢನಂಬಿಕೆಗಳನ್ನು ವಿರೋಧಿಸಿ, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಆರ್ಥಿಕ ಪ್ರಗತಿ ಹೊಂದಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಕರೆ ನೀಡಿದರು.   ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ 131ನೇ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ …

Read More »

ಗೋಕಾಕದಲ್ಲಿ ದಿನಾಂಕ 29 ರಂದು ನಗರದಲ್ಲಿ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ!

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ,ತಾಲೂಕು ಆಡಳಿತ ಗೋಕಾಕ , ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ದಿನಾಂಕ 29 ರಂದು ಮುಂಜಾನೆ 10 ಘಂಟೆಗೆ …

Read More »

ಕೊರೋನಾ 4 ನೇ ಅಲೆ ಆತಂಕ; ಸಿಎಂ ನೇತೃತ್ವದಲ್ಲಿ ಸಭೆ!

ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ ಮಾಡಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಇಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಾಗಿದೆ.ಈ ಬಗ್ಗೆ ಸಭೆ ಬಳಿಕ ಸಚಿವ ಸುಧಾಕರ್‌ ಅವರು ಮಾಧ್ಯಮಗಳಿಗೆ ಮಾಹಿತಿ ನಿಡಿದರು.   ಇದೇ ವೇಳೆ ಅವರು ಮಾತನಾಡಿ, ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗುವುದು, ಇದಲ್ಲದೇ ಸೋಂಕು ಹೆಚ್ಚು ಇರುವ ದೇಶದಿಂದ ಬರೋರ ಮೇಲೆ ನಿಗ …

Read More »