Breaking News

Uncategorized

ಕಟ್ಟಡ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು. ಶುಕ್ರವಾರದಂದು ಪಟ್ಟಣದ ತಹಶೀಲ್ದಾರರ ಕಚೇರಿ ಬಳಿ ಕಾರ್ಮಿಕ ಇಲಾಖೆಯಿಂದ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಕಾರ್ಮಿಕರ ಏಳ್ಗೆಗಾಗಿ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು. ಕಟ್ಟಡಗಳ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಕಟ್ಟಡಗಳಿಗೆ ಅಗತ್ಯವಿರುವ ವಿವಿಧ ವಿಭಾಗಗಳಿಗೆ ಸೇರಿರುವ ಕಾರ್ಮಿಕರು …

Read More »

*ಬಿಜೆಪಿ ಬಲವರ್ಧನೆಯಲ್ಲಿ ಪಂ. ದೀನ್ ದಯಾಳ್ ಉಪಾಧ್ಯಾಯ ಪಾತ್ರ ಅನನ್ಯ- ಸರ್ವೋತ್ತಮ ಜಾರಕಿಹೊಳಿ*

ಗೋಕಾಕ- ಬಿಜೆಪಿಯು ಇಷ್ಟು ದೊಡ್ಡ ಮಟ್ಟದಲ್ಲಿ ಬಲವರ್ಧನೆಯಾಗಲು ಪಂ. ದೀನ ದಯಾಳ್ ಉಪಾಧ್ಯಾಯ ಅವರ ಕೊಡುಗೆ ಅನನ್ಯ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ಎನ್ಎಸ್ಎಫ್ ಕಚೇರಿಯಲ್ಲಿ ಜರುಗಿದ ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಸಂಘದ ನಂತರ ಭಾರತೀಯ ಜನತಾ ಪಾರ್ಟಿಯಾಗಿ ಬಲಾಢ್ಯ ರಾಜಕೀಯ ಪಕ್ಷವಾಗಿ ಇಂದು ದೇಶದ ಪ್ರತಿ ಮೂಲೆ- ಮೂಲೆಗಳಲ್ಲಿಯೂ ಬೆಳೆದಿದೆ ಎಂದು ತಿಳಿಸಿದರು. …

Read More »

*ಬೆಳಗಾವಿಯಲ್ಲಿ ಮೇಗಾ ಡೇರಿ ಸ್ಥಾಪನೆ- ಬೆಮೂಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ*

ಬೆಳಗಾವಿ : ಬೆಳಗಾವಿಯಲ್ಲಿ ಅತ್ಯುನ್ನತ ತಂತ್ರಜ್ಞಾನವುಳ್ಳ ಮೇಗಾ ಡೇರಿ ನಿರ್ಮಿಸುವ ಮೂಲಕ ಜಿಲ್ಲೆ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಕೆಪಿಟಿಸಿಎಲ್‌ ಸಭಾಭವನದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅ‍ವರು ಮಾತನಾಡಿದರು. ಬೆಳಗಾವಿ ಹಾಲು ಒಕ್ಕೂಟ ಸುಧಾರಣೆಗೆ ಸಂಕಲ್ಪ ಮಾಡಿದ್ದೇನೆ. ಎಲ್ಲರೂ …

Read More »

ವಿದ್ಯುತ್ ಅವಘಡದಲ್ಲಿ 13 ಜಾನುವಾರು ಮೃತ; ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಚೆಕ್ ಹಾಗೂ ಸಹಾಯ ಧನ ವಿತರಣೆ.

ಯಮಕನಮರಡಿ: ವಿದ್ಯುತ್ ಅವಘಡದಲ್ಲಿ 13 ಜಾನುವಾರು ಮೃತಪಟ್ಟಿದ್ದು ಜಾನುವಾರುಗಳ ಮಾಲೀಕರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪರಿಹಾರ ಧನದ ಚೆಕ್ ವಿತರಣೆ ಹಾಗೂ ವೈಯಕ್ತಿಕವಾಗಿ 10 ಸಾವಿರ ರೂ ಧನ ಸಹಾಯ ಮಾಡಿದರು. ಯಮಕನಮರಡಿ ಮತಕ್ಷೇತ್ರದ ಹಳೆ ವಂಟಮೂರ ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಆಕಳು, ಹೋರಿ, ಎಮ್ಮೆ ಸೇರಿದಂತೆ ಒಟ್ಟು 13 ಜಾನುವಾರುಗಳು ಮೃತಪಟ್ಟಿದ್ದಾವೆ. ಸದರಿ ಜಾನುವಾರುಗಳ ಮಾಲೀಕರಾದ ಮುತ್ತೆಪ್ಪ ಬಸರಗಿ, ಲಕ್ಷ್ಮಣ ಕಿಲಾರಗಿ, ಯಲ್ಲವ್ವಾ ಮಸ್ತಿ ಅವರಿಗೆ …

Read More »

ಮೂರು ವರ್ಷದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಇಲ್ಲಿನ ರಾಮತೀರ್ಥನಗರದಲ್ಲಿ ಸೋಮವಾರ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಬೆಳಗಾವಿಗೆ ಸ್ವಲ್ಪ ತಡವಾದರೂ ಅತ್ಯುತ್ತಮವಾದ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.  ಬೆಳಗಾವಿಯಲ್ಲಿ ಜಿಲ್ಲಾ …

Read More »

ಇಂಜಿನಿಯರ್ ದಿನ ; ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ.

ಗೋಕಾಕ : ಇಂಜಿನಿಯರ್ ದಿನ ಅಂಗವಾಗಿ ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನವನ್ನು ಆಚರಿಸಲಾಯಿತು. ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಇಂಜಿನಿಯರ್ ಗಳು ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವು ಪಾಟೀಲ್, ಬೆನ್ನಾಡಿ , ವಿನಾಯಕ್ ರಾವುತ್, ದೀಪಿಕ್ ಕೊಟಬಾಗಿ, …

Read More »

ಚಿಕ್ಕೋಡಿ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ:ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜನರ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.    ಪಟ್ಟಣದಲ್ಲಿರುವ ಸಂಸದರ ಕಚೇರಿಯಲ್ಲಿ ಮಂಗಳವಾರ ಜರುಗಿದ ಜನಸಂಪರ್ಕ ಸಭೆಯಲ್ಲಿ ಜನರ ಸಹ್ವಾಲು ಸ್ವೀಕರಿಸಿ ಅವರು ಮಾತನಾಡಿದರು. ಜನರ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಚಿಕ್ಕೋಡಿಯಲ್ಲಿ ಸಂಸದರ ಕಚೇರಿ ಆರಂಭಿಸಲಾಗಿದೆ. ಆದ್ದರಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜನರು ಚಿಕ್ಕೋಡಿಯಲ್ಲಿರುವ ತಮ್ಮ ಕಚೇರಿಗೆ ಬಂದು ತಮ್ಮ ಸಮಸ್ಯೆಗಳನ್ನು …

Read More »

ಮಳೆಯಿಂದ ಹಾನಿ; ನೂತನ ಕೊಠಡಿಗಳ ನಿರ್ಮಾಣಕ್ಕೆ ಶೀಘ್ರವೇ ಕ್ರಮ: ಸಚಿವ ಸತೀಶ ಜಾರಕಿಹೊಳಿ

ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಚಿಕ್ಕೋಡಿ: ಚಿಕ್ಕೋಡಿ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾಗಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕಟ್ಟಡ ರಿಪೇರಿ ಮತ್ತು ನೂತನ ಕೊಠಡಿಗಳ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಭಾಭವನದಲ್ಲಿ ಮಂಗಳವಾರ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಜನರ ಅಹ್ವಾಲು …

Read More »

ಗೋಕಾಕ ಮಾರ್ಕಂಡೇಯ ನಗರದಲ್ಲಿ ದಿನೆ ದಿನೇ ಹೆಚ್ಚಾಗುತ್ತಿದೆ ಬೀದಿ ನಾಯಿಗಳ ಕಾಟ! ನಾಯಿಗಳ ಕಾಟಕ್ಕೆ ಹೈರಾಣಾದ ಮಕ್ಕಳು ವೃದ್ಧರು!

ಗೋಕಾಕ : ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ವಾರ್ಡ್‌ 19 ರಲ್ಲಿ ಮಾರ್ಕಂಡೇಯ ನಗರದ ನಿವಾಸಿಗಳ ನಿದ್ದೆಗೆಡಿಸುತ್ತಿರುವ ನಾಯಿಗಳ ಉಪಟಳ ಹೆಚ್ಚಾಗಿದೆ. ನಗರದ ಮಾರ್ಕಂಡೇಯ ನಗರದಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಆರರಿಂದ ಏಳು ಜನ ಮಕ್ಕಳಿಗೆ ನಾಯಿ ಕಡಿದು ಗಂಭೀರ ಗಾಯವಾಗಿವೆ. ಗೋಕಾಕ ನಗರದಲ್ಲಿ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಇನ್ನು ನಾಯಿ ಕಡಿತದಿಂದ ಗಾಯಗೊಂಡವರನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

*ಶಿವಾಪೂರ(ಹ) ಅಡವಿ ಸಿದ್ಧೇಶ್ವರ ಮಠದ ಅಭಿವೃದ್ಧಿಗೆ ಅವಿರತ ಶ್ರಮ- ಶಾಸಕ ಬಾಲಚಂದ್ರ ಜಾರಕಿಹೊಳಿ*

ಮೂಡಲಗಿ- ಇತಿಹಾಸ ಪ್ರಸಿದ್ಧ ಅಂಕಲಗಿ ಅಡವಿ ಸಿದ್ಧೇಶ್ವರ ಮಹಾಸ್ವಾಮಿಗಳು ಇಲ್ಲಿ ಬಂದು ನೆಲೆಸಿರುವ ಇತಿಹಾಸಗಳಿದ್ದು, ಈ ಮಠಕ್ಕೆ ಭವ್ಯವಾದ ಪರಂಪರೆ ಇದೆ. ನಮ್ಮ ಕ್ಷೇತ್ರದ ಭಕ್ತಾಧಿಗಳು ಸೇರಿಕೊಂಡು ಶ್ರೀ ಮಠದ ಅಭಿವೃದ್ಧಿಗೆ ಪಣ ತೊಡೋಣ. ಮಠದ ವಿಷಯದಲ್ಲಿ ಎಲ್ಲರೂ ಒಂದಾಗಿ ಶ್ರೀಕ್ಷೇತ್ರವನ್ನು ಪ್ರಗತಿ ಮಾಡೋಣ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ತಾಲ್ಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಕಳೆದ ಶನಿವಾರದಂದು ಅಂಬಲಿ ಒಡೆಯ ಎಂದು …

Read More »