Breaking News

Uncategorized

ಎಲ್ಲ ಸಮಾಜಗಳು ಸಹೋದರತ್ವ ಭಾವನೆಗಳಿಂದ ನಡೆದಾಗ ಮಾತ್ರ ಅಭಿವೃದ್ದಿ ಸಾಧ್ಯ-ಶಾಸಕ ಬಾಲಚಂದ್ರ ಜಾರಕಿಹೊಳಿ.

ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೃಹತ ಸೇಬು ಹಣ್ಣಿನ ಹಾರ ಹಾಕಿ ಸ್ವಾಗತಿಸಿಕೊಂಡ ದಲಿತ ಬಾಂಧವರು. ಎಂದಿಗೂ ರಾಜಕೀಯ ನಿವೃತ್ತಿ ಕುರಿತು ಮಾತನಾಡಬೇಡಿ: ಬಾಲಚಂದ್ರ ಅವರಿಗೆ ಒಕ್ಕೂರಿಲಿನಿಂದ ಮನವಿ ಮಾಡಿಕೊಂಡ ದಲಿತ ಮುಖಂಡರು. ಘಟಪ್ರಭಾ: ನಿಮ್ಮ ಸಮಾಜವನ್ನು ಪ್ರೀತಿಸುವುದರ ಜೊತೆಗೆ ಮತ್ತೊಂದು ಸಮಾಜದವರ ಬಗ್ಗೆ ಗೌರವ, ಆದರ ಇಟ್ಟುಕೊಳ್ಳಬೇಕು. ಸಮಾಜದಲ್ಲಿ ಪ್ರತಿ ಜಾತಿಗಳು ಸಹೋದರತ್ವ ಮನೋಭಾವನೆಯಿಂದ ನಡೆದುಕೊಂಡಾಗ ಮಾತ್ರ ಎಲ್ಲ ಸಮುದಾಯಗಳು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್ …

Read More »

ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಲು ಮತಗಳ ವಿಭಜನೆ ಮಾಡದೇ ಒಗ್ಗಟ್ಟಾಗಿ ಬಿಜೆಪಿಗೆ ಆಶೀರ್ವಾದ ಮಾಡಿದರೇ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ-ಶಾಸಕ ಬಾಲಚಂದ್ರ ಜಾರಕಿಹೊಳಿ.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೇ ಅದು ನಮ್ಮ ಬಿಜೆಪಿ ಸರ್ಕಾರ ಮಾತ್ರ. ನಾಗನೂರು ಪಟ್ಟಣದಲ್ಲಿ ಬೃಹತ್ ವೀರಶೈವ ಲಿಂಗಾಯತ ಸಮಾವೇಶವನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ. ಮೂಡಲಗಿ: ಈ ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಬೇಕಾದರೇ ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಮಾಜ ಬಾಂಧವರಲ್ಲಿ ಮನವಿ ಮಾಡಿದರು. ಶುಕ್ರವಾರದಂದು, …

Read More »

ರಾಜಕೀಯ ಭಾಷಣದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಸರ್ಕಾರಿ, ಖಾಸಗಿ ಶಾಲಾ-ಕಾಲೇಜುಗಳಿಗೆ 5 ಸಾವಿರ ಡೆಸ್ಕ್‌ ಗಳನ್ನು ವಿತರಿಸಿದ್ದು ರಾಜ್ಯದಲ್ಲಿಯೇ ಯಮಕನಮರಡಿ ಕ್ಷೇತ್ರದಲ್ಲಿ ದಾಖಲೆ ಅಧಿಕಾರಕ್ಕಿಂತ ಮುನ್ನವೇ ಎನ್‌ಎಸ್‌ಎಫ್‌ ಸ್ಕೂಲ್‌ ಪ್ರಾರಂಭಿಸಿ 3 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ ಎಂದ ಸಾಹುಕಾರ್‌ ಬೆಳಗಾವಿ: ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಕಾರಣ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚಿನ ಗಮನ ನೀಡಬೇಕು. ನಿಮಗೆ ಬೇಕಾದ ಸಹಾಯ, ಸಹಕಾರ ನೀಡಲು ನಾನು ಸದಾ ಬದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ …

Read More »

“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ

ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದ ಕಾರ್ಯಕರ್ತರು, ಬೃಹತ್ ಬೈಕ್ ರ್ಯಾಲಿ-ರೋಡ್ ಶೋ. ಕೇಸರಿಮಯವಾದ ಮೂಡಲಗಿ ಪಟ್ಟಣ     ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಾಕ್ಷಾತಃ ದೇವರಂತೆ ಕಾಣುತ್ತಾರೆ. ಅಷ್ಟೊಂದು ದೈವಿ ಸಂಕಲ್ಪ ಅವರಲ್ಲಿದೆ. ಹೀಗಾಗಿಯೇ ಜಗತ್ತಿನ ಹಲವಾರು ರಾಷ್ಟçಗಳು ಭಾರತದತ್ತ ಆಕರ್ಷಿಸಲು ಕಾರಣವಾಗಿದೆ. ಮೋದಿಯವರು ವಿಶ್ವಗುರುವಾಗಿ ಕಾಣತೊಡಗಿದ್ದಾರೆಂದು ಶಾಸಕ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.    ರವಿವಾರದಂದು ಸಂಜೆ …

Read More »

ಬಿಜೆಪಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹೇರಲು ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ವಡಗಾವಿಯಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುತ್ತಲೇ ಇದ್ದಾರೆ. ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಲೇ ಇದೆ. ನಮ್ಮ ಸರ್ಕಾರದ ಅವಧಿಯಲ್ಲಿ …

Read More »

ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಮಾತೋಶ್ರೀ ನಿಧನ

ನಾಳೆ ಗುರುವಾರದಂದು ಮುಂ. ೧೦ ಗಂಟೆಗೆ ಅಂತ್ಯಕ್ರಿಯೆ. ಗೋಕಾಕ್- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಮಾತೋಶ್ರೀ ಗಂಗವ್ವ ಲಕ್ಷ್ಮಣ ಶೇಖರಗೋಳ (೮೨) ಅವರು ಬುಧವಾರ ದಿ. ೧.೩.೨೦೨೩ ರಂದು ಸಂಜೆ ೭.೪೫ ಗಂಟೆಗೆ ಅನಾರೋಗ್ಯದಿಂದ ನಿಧನರಾದರು.     ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.      ಮೃತರ ಅಂತ್ಯಕ್ರಿಯೆಯು ನಾಳೆ ಗುರುವಾರದಂದು ಮುಂಜಾನೆ …

Read More »

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ.

ಗೋಕಾಕ: 19.50 ಕೋಟಿ ರೂಪಾಯಿ ವೆಚ್ಚದಲ್ಲಿ ತಪಸಿ ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಅತೀ ಶೀಘ್ರವಾಗಿ ಉದ್ಘಾಟನೆ ನೆರವೇರಿಸುವುದಾಗಿ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.          ತಾಲ್ಲೂಕಿನ ತಪಸಿ-ಕೆಮ್ಮನಕೋಲ ಗ್ರಾಮದಲ್ಲಿ ಇತ್ತೀಚೆಗೆ ಕರಣೆ ಮಲಕಾರಿ ಸಿದ್ಧೇಶ್ವರ ಜಾತ್ರೆಯ ನಿಮಿತ್ತವಾಗಿ ಜರುಗಿದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇದೇ ಮಾರ್ಚ್ ತಿಂಗಳ ಎರಡನೇ …

Read More »

*12 ಕೋಟಿ ರೂಗಳ ವೆಚ್ಚದಲ್ಲಿ ಕೌಜಲಗಿಯಲ್ಲಿ ಅಮೃತ ಸಮುದಾಯ ಆರೋಗ್ಯ ಕೇಂದ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ*

ಶೀಘ್ರದಲ್ಲಿಯೇ ಬಹುನಿರೀಕ್ಷಿತ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ-ಬಾಲಚಂದ್ರ ಜಾರಕಿಹೊಳಿ      ಗೋಕಾಕ: ಕೌಜಲಗಿ ಮತ್ತು ಸುತ್ತಲಿನ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಮೃತ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಈ ಹೊಸ ಕಟ್ಟಡ ನಿರ್ಮಾಣಕ್ಕಾಗಿ 12ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.       …

Read More »

ಹಡಗಿನಾಳದಲ್ಲಿ 15.22 ಕೋಟಿ ರೂಗಳ ವೆಚ್ಚದ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಗುದ್ದಲಿ ಪೂಜೆ

ಗೋಕಾಕ: ಹಡಗಿನಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ಗೃಹ ಹಾಗೂ ನೀರಾವರಿ ಬಳಕೆಗಾಗಿ ವಿದ್ಯುತ್ತ್ ಬೇಡಿಕೆ ಈಡೇರಿಸಲು ಹಡಗಿನಾಳ ಗ್ರಾಮದಲ್ಲಿ 110/11 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ನವೆಂಬರ್ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅರಭಾವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚಿಸಿದರು. ರವಿವಾರದಂದು ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ತ ಪ್ರಸರಣ ನಿಗಮದಿಂದ 15.22 ಕೋಟಿ ರೂಗಳ ವೆಚ್ಚದ 110/11ಕೆ.ವ್ಹಿ ವಿದ್ಯುತ್ತ್ ಕೇಂದ್ರಕ್ಕೆ ಗುದ್ದಲಿ …

Read More »

*ಹೋಳಿ ಹಬ್ಬ; ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆ*

ಗೋಕಾಕ: ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವಂತೆ ಪಿಎಸ್‌ಐ ಎಂ,ಡಿ ಘೋರಿ ಹೇಳಿದರು.  ಹೋಳಿ ಹಬ್ಬದ ಪ್ರಯುಕ್ತ ನಗರದ ಪ್ರಮುಖರು ಹಾಗೂ ಜಾತ್ರಾ ಕಮಿಟಿ ಸದಸ್ಯರ ಜೊತೆ ನಗರ ಠಾಣೆಯಲ್ಲಿ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪರೀಕ್ಷೆಗಳು ಸಮಿಪಿಸುತ್ತಿವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು. ರಾಸಾಯನಿಕ ಬಣ್ಣವನ್ನು ಬಳಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರೊಂದಿಗೆ ಸಹಕರಿಸಬೇಕು ಎಂದರು. ನಂತರ ಜಾತ್ರಾ ಕಮೀಟಿ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್ ಮಾತನಾಡಿ ದಿ:05/03/2023 ರಂದು …

Read More »