Breaking News

Uncategorized

ಖಂಡ್ರಟ್ಟಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ೧.೪೦ ಕೋಟಿ ರೂಪಾಯಿಗಳು ಮಂಜೂರಾಗಿದ್ದು, ಕಟ್ಟಡ ಕಾಮಗಾರಿಗಳನ್ನು ಗುಣಮಟ್ಟದಿಂದ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅರಭಾವಿ ಕ್ಷೇತ್ರದ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಕಳೆದ ಶುಕ್ರವಾರದಂದು ತಾಲ್ಲೂಕಿನ ಖಂಡ್ರಟ್ಟಿ ಗ್ರಾಮದಲ್ಲಿ ೨೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಇದಕ್ಕಾಗಿ ನರೇಗಾ ಯೋಜನೆಯಡಿ ಅನುದಾನವನ್ನು ನೀಡಲಾಗಿದೆ …

Read More »

*ಕಪರಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಶ್ರೀದೇವಿ ಮತ್ತು ಭರಮ ದೇವರ ದೇವಸ್ಥಾನಗಳ ಉದ್ಘಾಟನೆ*

ಈ ಜಗತ್ತು ನಿಂತಿರುವುದೇ ದೇವರಿಂದ ದೇವರ ನಾಮ- ಸ್ಮರಣೆ ಮಾಡಿದರೆ ಕಷ್ಟ- ಕಾರ್ಪಣ್ಯಗಳು ದೂರ- ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ- ನಮ್ಮ ಹೆತ್ತವರೇ ನಮಗೆ ನಿಜವಾದ ದೇವರು. ದೇವರ ಸ್ವರೂಪಿಯಾಗಿರುವ ತಂದೆ- ತಾಯಿಯವರಿಗೆ ಗೌರವ ನೀಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು. ಶುಕ್ರವಾರ ಸಂಜೆ ತಾಲ್ಲೂಕಿನ ಕಪರಟ್ಟಿ …

Read More »

ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಹುಕ್ಕೇರಿ : ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಉದ್ಘಾಟಿಸಿದರು. ಪಟ್ಟಣದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಚಿಕ್ಕೋಡಿ ಲೋಕಸಭಾ ಸಂಸದರಾದ ಪ್ರಿಯಾಂಕಾ ಸತೀಶ ಜಾರಕಿಹೊಳಿ ಹಾಗೂ ಹುಕ್ಕೇರಿ ಶಾಸಕರಾದ ನಿಖಿಲ ಉಮೇಶ್ ಕತ್ತಿ ನೆರವೇರಿಸಿದರು. ಈ ಶುಭ ಸಂದರ್ಭದಲ್ಲಿ ಹುಕ್ಕೇರಿ ಪುರಸಭೆಯ ಅಧ್ಯಕ್ಷರಾದ ಇಮ್ರಾನ ಮೋಮಿನ ಹಾಗೂ ಅಧಿಕಾರಿಗಳಾದ ಡಾ. ಅಬ್ದುಲ್ಲ ರಶೀದ ಮಿರ್ಜೆನ್ನವರ ಹಾಗೂ ಜಿಲ್ಲಾ …

Read More »

ಜಾತ್ರೆಗಳು ನಮ್ಮ ಸಂಸ್ಕೃತಿಗಳನ್ನು ಬಿಂಬಿಸುತ್ತಿವೆ. ಜಾತ್ಯಾತೀತ ಮನೋಭಾವನೆಗೆ ಇಂತಹ ಜಾತ್ರೆಗಳು ಸಾಕ್ಷಿ : ಶಾಸಕ ಬಾಲಚಂದ್ರ ಜಾರಕಿಹೊಳಿ

*ಅಡಿಬಟ್ಟಿ* (ತಾ.ಗೋಕಾಕ) : ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅಡಿಬಟ್ಟಿ ಮುಖ್ಯರಸ್ತೆಯಿಂದ ವಿಠ್ಠಪ್ಪ ಗುಡಿಯವರೆಗೆ ರಸ್ತೆಯನ್ನು  ಅಭಿವೃದ್ಧಿಪಡಿಸಲಾಗುವುದೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆಯನ್ನು ನೀಡಿದರು. ಇತ್ತೀಚೆಗೆ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದ ವಿಠ್ಠಪ್ಪನ ದೇವರ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಠ್ಠಪ್ಪ ದೇವಸ್ಥಾನ ( ಬಸಳಿಗುಂದಿ ಮನೆಯಿಂದ ಪೂಜೇರಿ ಮನೆತನಕ) ದ ರಸ್ತೆಯನ್ನು ಸುಧಾರಿಸಲಾಗುವುದು ಎಂದು ತಿಳಿಸಿದರು. ದಂಡಿನ ಮಾರ್ಗದ ರಸ್ತೆಯಲ್ಲಿರುವ ಅಡಿಬಟ್ಟಿ ಗ್ರಾಮಸ್ಥರು ಮೊದಲಿನಿಂದಲೂ ವಿಶ್ವಾಸವನ್ನಿಟ್ಟುಕೊಂಡು …

Read More »

ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ : ಸಚಿವ ಸತೀಶ್ ಜಾರಕಿಹೊಳಿ

ಶಿಗ್ಗಾಂವಿ: ಬಡ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ವಸತಿ ನಿಲಯ ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಶಿಗ್ಗಾಂವಿ ಮತಕ್ಷೇತ್ರದ ಕಬನೂರು ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾಭಿಮಾನದ …

Read More »

ಪ್ರತಿ ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಪ್ರತಿ ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮ್ಯುಲ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಲ್ಲಿಯ ಎನ್‌ಎಸ್‌ಎಫ್ ಕಾರ್ಯಾಲಯದಲ್ಲಿ ಕಳೆದ ಸೋಮವಾರದಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ನಡೆಯುತ್ತಿರುವ ೨೧ ನೇ ರಾಷ್ಟೀಯ ಜಾನುವಾರು ಗಣತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ …

Read More »

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ ಕೆಲಸವಾಗಬೇಕು. ಗೋಕಾಕ – ಮೂಡಲಗಿ ತಾಲ್ಲೂಕು ಸೇರಿ ೬೫೧೬ ಹೆಕ್ಟೇರ್ ಪ್ರದೇಶವು ಬೆಳೆ ಹಾನಿಯಾಗಿದ್ದು, ಈ ಕೂಡಲೇ ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.  ನಗರದ ಎಸ್‌ಎಸ್‌ಎಫ್ ಕಛೇರಿಯಲ್ಲಿ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ …

Read More »

*ಮೆಳವಂಕಿ- ಹಳೆಯ ವಿದ್ಯಾರ್ಥಿಗಳ ಸಂಘದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ೨೦ ಲಕ್ಷ ರೂಪಾಯಿ- ಶಾಸಕ ಬಾಲಚಂದ್ರ ಜಾರಕಿಹೊಳಿ ವಾಗ್ದಾನ*

*ಗೋಕಾಕ*- ಮೆಳವಂಕಿ ಗ್ರಾಮದ ಹಳೆ ವಿದ್ಯಾರ್ಥಿಗಳ ಬೇಡಿಕೆಯಂತೆ ತಮ್ಮ ಶಾಸಕರ ನಿಧಿಯಿಂದ ೨೦ ಲಕ್ಷ ರೂ ಗಳನ್ನು ನೀಡುವುದಾಗಿ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಾಗ್ದಾನ ಮಾಡಿದರು. ತಾಲ್ಲೂಕಿನ ಮೆಳವಂಕಿಯಲ್ಲಿ ಇಚೆಗೆ ನಡೆದ ಸಿದ್ಧಾರೂಢ ಮಠದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಕಲಿತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಘವನ್ನು ಹುಟ್ಟು ಹಾಕಿರುವದಕ್ಕೆ ಅವರು ಮೆಚ್ಚುಗೆ …

Read More »

ಮಾಳಿ, ಮಾಲಗಾರ ಸಮಾಜದ ಸಾಧಕರ ಸತ್ಕಾರ ಸಮಾರಂಭ

ಗೋಕಾಕ : ಶಾಂತ ಸ್ವಭಾವದ ಗುಣ ಹೊಂದಿ, ಕೊಟ್ಟ ಮಾತಿನಂತೆ ನಡೆದುಕೊಂಡು, ಹಣದ ಆಸೆ ಬಿಟ್ಟು ಬೇರೆಯವರಿಗೆ ಮೋಸ ವಂಚನೆ ಮಾಡದೆ ಎಲ್ಲರೂ ನಮ್ಮವರು ಅಂಥ ತಿಳಿದುಕೊಂಡು ಸರಳ ಜೀವನ ನಡೆಸಿ ಬೇರೆಯವರಿಗೆ ಮಾದರಿಯಾಗಿ ಪ್ರೀತಿಯಿಂದ ಜೀವನ ಸಾಗಿಸುವ ಎಕೈಕ ಸಮಾಜ ಮಾಳಿ, ಮಾಲಗಾರ ಸಮಾಜ ಬಾಂದವರೆಂದು ಅಂಬಾ ಪೀಠದ ನಾರಾಯಣ ಶರಣರು ಹೇಳಿದರು.              ಅವರು ಗೋಕಾಕ ಹೆಗ್ಗಣ್ಣವರ ಕಟ್ಟಡದಲ್ಲಿ ನಡೆದ …

Read More »

*ಸಂಘದ ಶೇಅರುದಾರರ ಆರ್ಥಿಕ ಪ್ರಗತಿಗೆ ಯೋಜನೆಗಳನ್ನು ಮುಟ್ಟಿಸಿ; ಶಾಸಕ ಬಾಲಚಂದ್ರ ಜಾರಕಿಹೊಳಿ

*ಮಸಗುಪ್ಪಿಯಲ್ಲಿ ವಿವಿಧೋದ್ದೇಶ ಪಿಕೆಪಿಎಸ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ*- ಯಾವುದೇ ಒಂದು ಸಂಘ- ಸಂಸ್ಥೆಗಳು ಬೆಳೆಯಬೇಕಾದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಒಂದಾಗಿ ಕೆಲಸ ಮಾಡಬೇಕು. ಶೇರುದಾರರ ಆರ್ಥಿಕ ಮಟ್ಟವನ್ನು ಸುಧಾರಿಸುವ ಸಂಬಂಧ ಸರ್ಕಾರದಿಂದ ಸಿಗುವ ಯೋಜನೆಗಳನ್ನು ನೇರವಾಗಿ ಶೇರುದಾರರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು. ತಾಲ್ಲೂಕಿನ ಮಸಗುಪ್ಪಿ …

Read More »