Breaking News

ರಾಜ್ಯ

*ಸಮಾಜದ ಜಾಗೃತಿ ಮತ್ತು ಸಂಘಟನೆ‌ ಅತ್ಯಗತ್ಯ ‌- ಸಚಿವ ರಮೇಶ್ ಜಾರಕಿಹೊಳಿ‌*

ಸಮಾಜದಲ್ಲಿ ಜಾಗೃತಿ ನಿರ್ಮಾಣ ಮತ್ತು ಸಬಲ ಸಂಘಟನೆಯ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಂಡಿದ್ದು, ನ್ಯಾಯಸಮ್ಮತವಾಗಿ ಸವಲತ್ತುಗಳನ್ನು ಪಡೆಯಲು ಸಂಘಟನಾ ಶಕ್ತಿ ಪ್ರದರ್ಶಿಸಬೇಕಾದ ಸಂದರ್ಭ ಇದಾಗಿದೆ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ 3 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಮತ್ತು ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ‌, ನಾಯಕ ಜನಾಂಗದ …

Read More »

ತಾಂತ್ರಿಕ ಯುಗದಲ್ಲಿ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಅಧುನಿಕ ಕಲಿಕಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು : ಸನತ್ ಜಾರಕಿಹೊಳಿ.

ಗೋಕಾಕ: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ಹಾಗೂ ಕ್ರೀಡೊ ( kreedo ) ಬೆಂಗಳೂರು ಇವರ ಸಹಭಾಗಿತ್ವದಲ್ಲಿ ದಿನಾಂಕ ಟ್ರಸ್ಟಿನ ಆವರಣದಲ್ಲಿ ಹೊಸ ಪಠ್ಯಕ್ರಮದೊಂದಿಗೆ ಪೂರ್ವ ಪ್ರಾಥಮಿಕ ಶಾಲೆಯ ಕೊಠಡಿಗಳ ಉದ್ಘಾಟನಾ ಸಮಾರಂಭ ಜರುಗಿತು. ಶನಿವಾರ ನಗರದ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟಿನಿಂದ ಕ್ರೀಡೋ ಸಂಸ್ಥೆಯ ಮಾರ್ಗದರ್ಶನದಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪ್ರೀ-ಪ್ರಾಯಮರಿ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಇಂದಿನ …

Read More »

*ಪ್ರತಿಭಾವಂತ ಮಕ್ಕಳಿಗೆ ಉತ್ತಮ ವೇದಿಕೆ ಒದಗಿಸಿಕೊಡಬೇಕು: ಪ್ರಿಯಾಂಕಾ ಜಾರಕಿಹೊಳಿ*

ಹರಿಹರ (ರಾಜನಹಳ್ಳಿ): “ವಾಲ್ಮೀಕಿ ಸಮುದಾಯದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ” ಎಂದು ಸತೀಶ್ ಶುಗರ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ವಾಲ್ಮೀಕಿ ಜಾತ್ರೆ ಅಂಗವಾಗಿ ಮಾಜಿ ಸಚಿವ ಚಳ್ಳಕೇರಿ ತಿಪ್ಪೇಸ್ವಾಮಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶದಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು. “ಸಮುದಾಯದ ಮಹಿಳೆಯರಲ್ಲಿ ಶಿಕ್ಷಣದ ಕೊರತೆ ಇದೆ. ಪಾಲಕರು ಗಂಡು ಮಕ್ಕಳ ಜೊತೆಗೆ ಹೆಣ್ಣು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಬೇಕು” …

Read More »

*ಯಾವುದೇ ತುರ್ತು ಪರಿಸ್ಥಿತಿ ಇರಲಿ 112 ಗೆ ಕರೆ ಮಾಡಿ : PSI ನಾಗರಾಜ ಖಿಲಾರೆ*

ಗೋಕಾಕ : ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಶನಿವಾರ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ಪಿ,ಎಸ್,ಆಯ್, ನಾಗರಾಜ ಖಿಲಾರೆಯವರು ಶ್ರೀಲಕ್ಷ್ಮಿ ದೇವಸ್ಥಾನದಲ್ಲಿ ಜನಸಂಪರ್ಕ ಸಭೆ ಮತ್ತು ಅಂಬೇಡ್ಕರ ನಗರದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆದ ದಲಿತ ಸಬೆ ಮತ್ತು ಒಂದೆ ದೇಶ ಒಂದೆ ತುರ್ತು ಸಂಖ್ಯೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸ್ಥಳಿಯರನ್ನು ಉದ್ದೇಶಿಸಿ ಮಾತನಾಡಿ ತಮ್ಮ ಸುತ್ತಮುತ್ತಲು ಅಗ್ನಿ ದುರಂತ ಸಂಭವಿಸಿದ್ದಲ್ಲಿ,ಅಪಘಾತವಾಗಿದ್ದಲ್ಲಿ,ಅಪರಾಧವಾಗಿದ್ದಲ್ಲಿ ಹಾಗೂ ವಿನಾಕಾರಣ ಯಾರಾದರೂ ಅಣ್ಯ ವ್ಯಕ್ತಿಗಳು ಕುಡಿದು ಗಲಾಟೆ …

Read More »

ಅನ್ನದಾತರಿಂದ ಸಂತೋಷ ಜಾರಕಿಹೊಳಿ ಅವರಿಗೆ ಸತ್ಕಾರ !

ಗೋಕಾಕ:ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಫ್ಯಾಕ್ಟರಿ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರಿಗೆ ಅನ್ನದಾತರು ಸನ್ಮಾನ ಮಾಡಿದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಎಲ್ಲ ಕಾರ್ಖಾನೆಗಳಿಗಿಂತ ರಾಜ್ಯದಲ್ಲಿಯೇ ಮೊದಲು ಅನ್ನದಾತರಿಗೆ ಬಿಲ್ಲನ್ನು ಕೊಟ್ಟು ಮಾದರಿ ಎನ್ನಲಾಗಿದೆ. ಅನ್ನದಾತರರಿಗೆ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರದಂತಹ ಸಂತೋಷ್ ಜಾರಕಿಹೊಳಿ ಅವರು ಅವರ್ ಕಾರ್ಖಾನೆಗೆ ನೆರವು ನೀಡಿದಂಥ ಅನ್ನದಾತರಿಗೆ ಸನ 2020/ 21ರಲ್ಲಿ ನಡೆದ ಕಬ್ಬಿನ ನುರಿಸುವ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಿದ್ದಾರೆ. ಅವರು ಮಾಡಿದ …

Read More »

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡಲು ಆಗ್ರಹ

ಗೋಕಾಕ: ಪಂಚಮಸಾಲಿ ಸಮುದಾಯಕ್ಕೆ ಕೂಡಲೇ 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಜನರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರಗೆ ಮನವಿ ಸಲ್ಲಿಸಿದರು. ಸಮುದಾಯದ ಸ್ಥಳೀಯ ಅಧ್ಯಕ್ಷ ಪ್ರಕಾಶ ಬಾಗೋಜಿ ಮಾತನಾಡಿ, “2ಎ ಮಿಸಲಾತಿ ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮುಖ್ಯಮಂತ್ರಿಗಳು ಮಧ್ಯಾಹ್ನ ಒಂದು ಹೇಳಿಕೆ, ಸಂಜೆ ಒಂದು ಹೇಳಿಕೆ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. “ಯಡಿಯೂರಪ್ಪನವರಿಗೆ ಮೀಸಲಾತಿ ನೀಡಲು ಆಗದಿದ್ದರೇ ರಾಜೀನಾಮೆ ನೀಡಿ, …

Read More »

*ನಮ್ಮ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ವಾಲ್ಮೀಕಿ ಜಾತ್ರೆ ಆಯೋಜನೆ – ಸಚಿವ ರಮೇಶ್ ಜಾರಕಿಹೊಳಿ‌.*

ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಮಠ ಮತ್ತು ಪೀಠಗಳು ಸಾಮಾಜಿಕ ಜಾಗೃತಿ ಉಂಟುಮಾಡುತ್ತಿದ್ದು ಈ ಜನಜಾಗೃತಿಗಾಗಿಯೇ *ಮಹರ್ಷಿ ವಾಲ್ಮೀಕಿ ಜಾತ್ರೆ* ಹಮ್ಮಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಮತ್ತು ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ *ಶ್ರೀ ರಮೇಶ್ ಜಾರಕಿಹೊಳಿ‌* ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ *ಫೆಬ್ರವರಿ 8 ಮತ್ತು 9* ರಂದು *ಮಹರ್ಷಿ ವಾಲ್ಮೀಕಿ ಜಾತ್ರೆ* ಹಮ್ಮಿಕೊಂಡಿದ್ದು, ಶ್ರೀ ಮಠದ 23ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು …

Read More »

ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಕಾರ್ಮಿಕ ಧುರೀಣರಾದ ಅಂಬಿರಾವ ಪಾಟೀಲ

ಗೋಕಾಕ : ಲೋಕೋಪಯೋಗಿ ಇಲಾಖೆಯಿಂದ ಅತಿವೃಷ್ಟಿಯಿಂದ ಹಾಳಾದ ರಸ್ತೆಯನ್ನು 2.5 ಕೋಟಿ ರೂ ವೆಚ್ಚದ ಕಾಮಗಾರಿಗೆ ಶುಕ್ರವಾರದಂದು ಕಾರ್ಮಿಕ ಧುರೀಣರಾದ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ ಆರ್ ಕಾಗಲ , ನಗರ ಸಭೆ ಸ್ಥಾಯಿ ಸಮಿತಿ ಚೇರಮನ್ ಕುತಬುದ್ದೀನ ಗೋಕಾಕ, ಮುಖಂಡರಾದ ಭೀಮಗೌಡ ಪೋಲೀಸಗೌಡರ, ಡಾ. ಜಿ.ಆರ್ ಸೂರ್ಯವಂಶಿ, ಅಶೋಕ ಗೋಣಿ ,ಚಿದಾನಂದ ದೇಮಶೆಟ್ಟಿ, ರವಿ ಪತ್ರಾವಳಿ, ಲಕ್ಕಪ್ಪಾ ತಹಶೀಲ್ದಾರ, ಅಬ್ದುಲರಹಮಾನ್ …

Read More »

ವಡ್ಡೇರಹಟ್ಟಿ ಗ್ರಾಪಂ.ಅಧ್ಯಕ್ಷ, ಉಪಾಧ್ಯಕ್ಷರಿಂದ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸನ್ಮಾನ

ಮೂಡಲಗಿ : ತಾಲ್ಲೂಕಿನ ವಡೇರಹಟ್ಟಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಲಕ್ಕವ್ವ ಅಡಿವೇಪ್ಪ ಹಾದಿಮನಿ, ಉಪಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಸಿದ್ದಪ್ಪ ಹೊಳೆಕರ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದ ಮೇರೆಗೆ ವಡೇರಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ನೂತನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ , ಸದಸ್ಯರು ಗೋಕಾಕ್ ನ ಹಿಲ್ ಗಾರ್ಡನ್ ಕಚೇರಿಯಲ್ಲಿ  ಶಾಸಕರಿಗೆ …

Read More »

ಕೆಪಿಸಿಸಿ ಕಾರ್ಯಧ್ಯಕ್ಷರು ಸತೀಶ ಜಾರಕಿಹೊಳಿ ಮಾರ್ಗದರ್ಶನ: ಹತ್ತರಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಯಮಕನಮರಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ  ಸತೀಶ ಜಾರಕಿಹೊಳಿ  ಅವರ ಮಾರ್ಗದರ್ಶನದಲ್ಲಿ   ಹತ್ತರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ   ಸಂಗೀತಾ ಬಳ್ಳಾರಿ ಪಾತ್ರೋಟ ಹಾಗೂ  ಉಪಾಧ್ಯಕ್ಷರಾಗಿಅಕ್ಷತಾ ಉಮೇಶ ಭೀಮಗೋಳ ಅವಿರೋಧವಾಗಿ ಆಯ್ಕೆಯಾದರು. ಇದೇ ವೇಳೆ ನೂತನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಶಾಸಕ ಸತೀಶ ಜಾರಕಿಹೊಳಿ  ಅವರಿಗೆ ಸತ್ಕಾರ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಯುವ ಧುರೀಣ  ರವಿ ಅಣ್ಣಾ ಜಿಂಡ್ರಾಳಿ, ಮಹಾದೇವ ಪಟೋಳಿ, …

Read More »