Breaking News

ರಾಜಕೀಯ

*ಬೆಳಗಾವಿ ಲೋಕಸಭಾ ಉಪ ಚುನಾವಣೆ 5ಲಕ್ಷ ಕ್ಕೂ ಹೆಚ್ಚು ಅಂತರದ ಮತಗಳ ಪಡೆಯಲು ಶ್ರಮಿಸಿ-ಮಹೇಶ ಟೆಂಗಿನಕಾಯಿ*!

ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು ೫ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಗುರಿ ಹೊಂದಿದ್ದು, ಗೋಕಾಕ ಮತಕ್ಷೇತ್ರದಿಂದ ೧ಲಕ್ಷಕ್ಕೂ ಅಧಿಕ ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಅವರು, ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಭೂತ ಸಮಿತಿಯ ಅಧ್ಯಕ್ಷರುಗಳ ಸಮಾವೇಶವನ್ನು …

Read More »

ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಬೇಕು : ಅಶೋಕ್ ಪೂಜಾರಿ ಆಗ್ರಹ.

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧವನ್ನು ಆಡಳಿತಾತ್ಮಕ ಶಕ್ತಿ ಕೇಂದ್ರ ಮಾಡಬೇಕು’ ಎಂದು ಆಗ್ರಹಿಸಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ನೇತೃತ್ವದಲ್ಲಿ ಮುಖಂಡರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಾಗೂ ಕಪ್ಪು ಮಾಸ್ಕ್ ಧರಿಸಿ ಸುವರ್ಣ ವಿಧಾನಸೌಧ ಬಳಿಯ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಧರಣಿ ನಡೆಸಿದರು. ಮುಖಂಡ ಅಶೋಕ ಪೂಜಾರಿ ಮಾತನಾಡಿ, ‘ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿಲ್ಲ‌. ಇದು ಖಂಡನೀಯ. ಶಾಸಕರು ಸರ್ಕಾರದ …

Read More »

ಬೆಳಗಾವಿ ಉಪ ಚುನಾವಣೆ : ಸರ್ಕಾರದ ದುರಾಡಳಿತವೇ ಪ್ರಮುಖ ವಿಷಯ: ಸತೀಶ್ ಜಾರಕಿಹೊಳಿ

ಬೆಳಗಾವಿ : ಮಾರ್ಚ್ 25 ರೊಳಗೆ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುತ್ತದೆ. ಪ್ರಧಾನಿ ಮೋದಿ , ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವನ್ನೇ  ಮೊದಲು ಟಾರ್ಗೆಟ್  ಮಾಡಲಿದ್ದೇವೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿ, ಕೇಂದ್ರ ಕೃಷಿ ಕಾಯ್ದೆ, ಮೋದಿ ಅವರು ಏಳು ವರ್ಷದ ಆಡಳಿತ, ತೈಲ ಬೆಲೆ ಏರಿಕೆ, ಖಾಸಗೀಕರಣ , ಸ್ಥಳೀಯವಾಗಿ ಕಳೆದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ …

Read More »

ಗೋಕಾಕದಲ್ಲಿ ನಗರ ಸಭೆ ಉಪಚುನಾವಣೆ ರಣಕಹಳೆ: ಗೌಡರಿಂದ ಭರ್ಜರಿ ಪ್ರಚಾರ.

ಗೋಕಾಕ: ನಗರ ಸಭೆ ಉಪಚುನಾವಣೆ ಕಾವು ಜೋರಾಗಿದ್ದು, ಅಭ್ಯರ್ಥಿಗಳ ಪ್ರಚಾರ ಜೋರಾಗಿದೆ. ಸದ್ಯಸರ ಅಕಾಲಿಕ ಮರಣದ ಕಾರಣದಿಂದ ತೆರವಾದ ಗೋಕಾಕ ನಗರಸಭೆಯ ವಾರ್ಡ ನಂ 13ನೇಯ ಉಪಚುನಾವಣೆಯಲ್ಲಿ ಅದೇ ವಾರ್ಡಿನ ಯುವಕ ವಿಷ್ಣು ಗೌಡ ಪಾಟೀಲ್ ಕಣಕ್ಕೆ ಇಳಿದಿದ್ದಾರೆ. ಇಂದು ವಿಷ್ಣು ಗೌಡ ಪಾಟೀಲ್ ಭರ್ಜರಿ ಪ್ರಚಾರ ಆರಂಭ ಮಾಡಿದ್ದು ಶಿವನ ಗೌಡ ಪಾಟೀಲ್ ಸಾಥ ನೀಡಿದ್ದಾರೆ. ವಾರ್ಡಿನ ಗುರು ಹಿರಿಯರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು. ತದನಂತರ ಮಾತನಾಡಿದ …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ :ನೀವೇ ಸ್ಪರ್ಧಿಸಿ ಎಂದು ಸತೀಶ ಜಾರಕಿಹೊಳಿಗೆ ಪಟ್ಟು ಹಿಡಿದ ಕಾಂಗ್ರೆಸ್ ಮುಖಂಡರು

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧೆ ಮಾಡುವಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಹಿರಿಯ ನಾಯಕರ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಹಿರಿಯ ನಾಯಕ ದಿನೇಶ್ ಗುಂಡೂರಾವ್  ಅವರು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಪ್ರಸ್ತಾಪ ಮಾಡಿದರು. ಇದಕ್ಕೆ …

Read More »

ರಾಜ್ಯದಲ್ಲಿ ಉಪ ಚುನಾವಣೆಗೆ ಮಹೂರ್ತ ಫಿಕ್ಸ್ .

ಬೆಂಗಳೂರು: ರಾಜ್ಯದಲ್ಲಿ 2 ವಿಧಾನ ಸಭೆ ಮತ್ತು1 ಲೋಕ ಸಭಾ ಉಪಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ಏಪ್ರಿಲ್‌ 17 ರಂದು ನಡೆಸಲಾಗುತ್ತೆ ಚುನಾವಣಾ ಆಯೋಗ ತಿಳಿಸಿದೆ. ಮನಗೋಳಿಯಿಂದ ತೆರವಾದ ಸಿಂಧಗಿ ಕ್ಷೇತ್ರಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗಿಲ್ಲ. ಒಂದು ಲೋಕಸಭಾ ಕ್ಷೇತ್ರವಾದ ಬೆಳಗಾವಿ ಕ್ಷೇತ್ರಕ್ಕೆ ಮತ್ತು ವಿಧಾನ ಸಭಾ ಕ್ಷೇತ್ರಗಳಾದ ಬೀದರ್‌ʼನ ಬಸವ ಕಲ್ಯಾಣ ಮತ್ತು ಮಾಸ್ಕಿ ವಿಧಾನ ಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17ರಂದು ಚುನಾವಣೆ ನಡೆಸಲಾಗುವುದು. ಇನ್ನು ಈ ಚುನಾವಣೆಗಳಿಗೆ ನಾಮಪತ್ರ …

Read More »

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು:ಪ್ರಿಯಾಂಕಾ ಜಾರಕಿಹೊಳಿ

ಯಮಕನಮರಡಿ: “ಮಹಿಳೆಯರು ಕಾಯ್ದೆ, ಕಾನೂನುಗಳನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಿಂದೇಟು ಹಾಕಬಾರದು” ಎಂದು ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳು, ಯಮಕನಮರಡಿ, ಹತ್ತರಗಿ ಹಾಗೂ ಜಿಲ್ಲಾ ಸ್ತ್ರೀ ಒಕ್ಕೂಟ ಮತ್ತು ಹುಕ್ಕೇರಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಅಮೇರಿಕಾದಲ್ಲಿ 1914ರಲ್ಲಿ …

Read More »

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ , ರಾಜ್ಯಾದ್ಯಂತ 11 ಜಿಲ್ಲೆ 28 ಕಡೆ ದಾಳಿ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯ (ACB Raid) ಅಧಿಕಾರಿಗಳು ಇಂದು ಮಂಗಳವಾರ ಬೆಳ್ಳಂಬೆಳಗ್ಗೆಯೇ ರಾಜ್ಯದ 11 ಜಿಲ್ಲೆಗಳಲ್ಲಿ 28 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ವಿವಿಧ ಇಲಾಖೆಯ ಒಂಬತ್ತು ಅಧಿಕಾರಿಗಳ (Govt Officers) ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳ ತಂಡಗಳು ದಾಖಲೆಗಳನ್ನ ಪರಿಶೀಲನೆ ನಡೆಸಿವೆ. ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ರೇಡ್ ನಡೆದಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, …

Read More »

ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗಲಿ: ಪ್ರಿಯಾಂಕಾ ಜಾರಕಿಹೊಳಿ.

ಬೆಳಗಾವಿ: “ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ದೇಶದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ದೊರೆತಿದೆ” ಎಂದು ಸತೀಶ ಶುಗರ್ಸ್ ನಿರ್ದೇಶಕಿ ಹಾಗೂ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅಭಿಪ್ರಾಯಪಟ್ಟರು. ತಾಲೂಕಿನ ಹುದಲಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡುವಲ್ಲಿ ಅಂಬೇಡ್ಕರ್ ಅವರ ಪಾತ್ರ …

Read More »

*ರಮೇಶ್ ಜಾರಕಿಹೊಳಿ ಅವರನ್ನು ಅಧಿಕಾರದಿಂದ ತೆಗೆಯಲು ಷಡ್ಯಂತ್ರ ನಡೆದಿದೆ: ಬಾಲಚಂದ್ರ ಜಾರಕಿಹೊಳಿ*

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದ ರಮೇಶ್‌ ಜಾರಕಿಹೋಳಿ ಅವರ ವಿರುದ್ದ ಷಟ್ಯಂತ್ರ ಮಾಡಲಾಗಿದೆ ಎಂದು ಅವರ ಸಹೋದರ, ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೋಳಿ ಹೇಳಿದರು. ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಷಡ್ಯಂತ್ರದಲ್ಲಿ ನಾಲ್ಕು ಮಂದಿ ಭಾಗಿಯಾಗಿದ್ದಾರೆ. ಹಾಗೂ ಸಂತ್ರಸ್ಥ ಯುವತಿಗೆ 50 ಲಕ್ಷದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದರು. ಆದರೆ ನಾಲ್ವರ ಹೆಸರನ್ನು ಈಗಲೇ ಬಹಿರಂಗಪಡಿಸಲ್ಲ. ಷಡ್ಯಂತ್ರದ ಹಿಂದೆ ಕಾಣದ ಕೈಗಳ ಕೈವಾಡ ಇದೆ. …

Read More »